ಕರ್ನಾಟಕ

ಮದುವೆ ಜಾಲತಾಣ ವೇದಿಕೆ ಮ್ಯಾಟ್ರಿಮೋನಿಯಲ್​​ ಮುಖಾಂತರ ಹನಿಟ್ರ್ಯಾಪ್​ ಮಾಡುತ್ತಿದ್ದ ಮಹಿಳೆ ಬಂಧನ

Pinterest LinkedIn Tumblr


ಹಾಸನ: ಮದುವೆ ಜಾಲತಾಣ ವೇದಿಕೆ ಮ್ಯಾಟ್ರಿಮೋನಿಯಲ್​​ ಮುಖಾಂತರ ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್​ ಮಾಡುತ್ತಿದ್ದ ಚಾಲಾಕಿ ಮಹಿಳೆ ಹಾಗೂ ಪುರುಷ ಪೊಲೀಸ್​ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಹಾಸನ ನಗರ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತರನ್ನು ಲಕ್ಷ್ಮಿ (32) ಮತ್ತು ಶಿವಣ್ಣ ಎಂದು ಗುರುತಿಸಲಾಗಿದೆ. ಆರೋಪಿ ಲಕ್ಷ್ಮಿ ಚಿಕ್ಕಬಳ್ಳಾಪುರ ಮೂಲದವಳಾಗಿದ್ದು, ಶಿವಣ್ಣ ಕೋಲಾರ ಮೂಲದವನು. 40 ವರ್ಷದ ಅವಿವಾಹಿತ ಪರಮೇಶ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ.

ತಾನು ಅನಾಥೆ ಚಿಕ್ಕಮನ ಮನೆಯಲ್ಲಿ ವಾಸವಿದ್ದೇನೆ. ನಾನೋರ್ವ ಐಟಿ ಉದ್ಯೋಗಿ ಎಂದು ಹೇಳಿ ಅಪರಿಚಿತರನ್ನು ಚಾಲಾಕಿ ಲಕ್ಷ್ಮೀ ಪರಿಚಯ ಮಾಡಿಕೊಳ್ಳುತ್ತಿದ್ದಳು. ಇತ್ತ ಸಿನಿಮಾಗಳಲ್ಲಿ ಸಣ್ಣಪುಟ್ಡ ಪಾತ್ರ ಮಾಡಿ ಕರೊನಾ ಸಮಯದಲ್ಲಿ ಶುಂಠಿ ಬೆಳೆ ಬೆಳೆದುಕೊಂಡಿದ್ದ ಸಂತ್ರಸ್ತ ಪರಮೇಶ್​ಗೆ ಲಕ್ಷ್ಮೀ ಪರಿಚಯವಾಗಿದೆ.

ತನಗೇನೋ ಸಿಗುತ್ತದೆ ಎಂಬ ದುರಾಸೆಯಿಂದ ಲಕ್ಷ್ಮೀಯನ್ನು ನಂಬಿದ ಪರಮೇಶ್ ಡಿಸೆಂಬರ್ 2019 ರಿಂದ 2020ರ ತನಕ ಸುಮಾರು 6 ಲಕ್ಷ ರೂ. ಹಣವನ್ನು ಲಕ್ಷ್ಮಿ ಖಾತೆಗೆ ಜಮಾ ಮಾಡಿದ್ದಾನೆ. ಅಲ್ಲದೆ, ಮೊಬೈಲ್​ ಫೋನ್​ ಸಹ ಕೊಡಿಸಿದ್ದಾನೆ.

ಉಲ್ಟಾ ಹೊಡೆದ ಲಕ್ಷ್ಮೀ
ದೋಚಿದನ್ನೆಲ್ಲಾ ದೋಚಿ ಕೊನೆಗೆ ಲಕ್ಷ್ಮೀ, ಪರಮೇಶ್​ನನ್ನು ನಿರ್ಲಕ್ಷಿಸಿದ್ದಾಳೆ. ನೀವು ಕೊಡಿಸಿದ ಫೋನ್ ನನಗೆ ಬೇಡ. ಏನಾದರೂ ಕಾಲ್ ಮಾಡಿದ್ರೆ ಅತ್ಯಾಚಾರ ಪ್ರಕರಣ ದಾಖಲಿಸುತ್ತೇನೆಂದು ಹೆದರಿಸಿದ್ದಾಳೆ.

ಶಿವಣ್ಣ ಎಂಬುವನ ನೆರವು
ತನ್ನ ಮೋಸದ ಜಾಲಕ್ಕೆ ಶಿವಣ್ಣ ಎಂಬುವವನ ನೆರವು ಪಡೆಯುತ್ತಿದ್ದ ಲಕ್ಷ್ಮೀ ಹತ್ತಾರೂ ಮಂದಿಗೆ ಪಂಗನಾಮ ಹಾಕಿದ್ದಾಳೆ. ಇತ್ತ ತಾನೊರ್ವ ನ್ಯಾಷನಲ್ ಆ್ಯಂಟಿ ಕ್ರೈಂ ಆ್ಯಂಡ್​ ಹ್ಯೂಮನ್ ರೈಟ್ಸ್ ಆಫ್ ಇಂಡಿಯಾದವನು ಎಂದು ಶಿವಣ್ಣ ಸಂತ್ರಸ್ತರನ್ನು ಹೆದರಿಸುತ್ತಿದ್ದ. ಕೊನೆಗೂ ಇವರ ನಾಟಕವೆಲ್ಲಾ ಬಯಲಾಗಿ ಇದೀಗ ಇಬ್ಬರು ಹಾಸನ ಪೊಲೀಸ್ ಬಲೆಗೆ ಬಿದ್ದಿದ್ದಾರೆ.

Comments are closed.