ಶಿವಮೊಗ್ಗ; ಷಹಜಹಾನ್ ತನ್ನ ಪ್ರೀತಿಯ ಪತ್ನಿಗಾಗಿ ತಾಜ್ ಮಹಲ್ ನಿರ್ಮಾಣ ಮಾಡಿರುವುದು ಇತಿಹಾಸ. ಶಿವಮೊಗ್ಗದಲ್ಲಿ ಒಬ್ಬ ನಿವೃತ್ತ ಉಪನ್ಯಾಸಕ ತನ್ನ ಪ್ರೀತಿಯ ಮಡದಿಯ ಸವಿ ನನಪಿಗಾಗಿ ನಶಿಸಿ ಹೋಗುತ್ತಿರುವ ಇತಿಹಾಸದ ಅಮೂಲ್ಯ ವಸ್ತುಗಳನ್ನು ಸಂಗ್ರಹಿಸಿಡುವ ಸಂಗ್ರಹಾಲಯವನ್ನು (ಮೂಸಿಯಂ) ನಿರ್ಮಿಸಿದ್ದಾರೆ. ಆ ಮೂಲಕ ತಮ್ಮ ಪ್ರೇಮವನ್ನು ಅಮರವಾಗಿಸಿದ್ದಾರೆ.
ಈ ಸಂಗ್ರಹಾಲಯದಲ್ಲಿ ಮಲೆನಾಡಿನ ಜೀವನ ಪದ್ಧತಿ, ರಾಜ ಮಹಾರಾಜರ ಕಾಲದ ನಾಣ್ಯಗಳು ಕತ್ತಿಗಳು ಪುರಾತನ ವಸ್ತುಗಳು ಕಾಣಸಿಗುತ್ತವೆ. ಇದೊಂದು ಜನಪದ ಲೋಕ ಸುಂದರ ಪ್ರಕೃತಿಯ ನಡುವೆ ನಿರ್ಮಾಣವಾಗಿರುವ ವಸ್ತು ಸಂಗ್ರಹಾಲಯ. ಇಲ್ಲಿ ಮಲೆನಾಡಿನ ಪುರಾತನ ಕಾಲದ ಜೀವನ ವ್ಯವಸ್ಥೆಯಲ್ಲಿ ಬಳಸುತ್ತಿದ್ದ ವಸ್ತುಗಳ ಬಂಡಾರವೇ ಇದೆ. ಈ ವಸ್ತು ಸಂಗ್ರಹಾಲಯದ ಹಿಂದೆ ಒಂದು ಅಮರ ಪ್ರೇಮ ಕಥೆ ಇದೆ.
ನಿವೃತ್ತ ಉಪನ್ಯಾಸಕ ಎಚ್. ಖಂಡೋಬೂರಾವ್ ಅವರು, ಅವರ ಮಡದಿ ಯಶೋಧರ ನೆನಪಿಗಾಗಿ ಈ ವಸ್ತು ಸಂಗ್ರಹಾಲಯವನ್ನು ನಿರ್ಮಾಣ ಮಾಡಿ ಸಮಾಜಕ್ಕೆ ನೀಡಿದ್ದಾರೆ. ಯಶೋಧರ ಮತ್ತು ಖಂಡೋಬರಾವ್ ಇಬ್ಬರು ಇತಿಹಾಸ ಉಪನ್ಯಾಸಕರಾಗಿದ್ದರು. 1972 ರಲ್ಲಿ ಇಬ್ಬರು ಪ್ರೀತಿಸಿ ಮದುವೆಯಾದರು. ಇವರದ್ದು ಅಂತರ್ ಜಾತಿ ವಿವಾಹ. 20-02-2007 ರಲ್ಲಿ ಪತ್ನಿ ಯಶೋಧ ಇಹಾಲೋಕ ತ್ಯೇಜಿಸುತ್ತಾರೆ.
ಇದಾದ ಒಂದೇ ವರ್ಷದಲ್ಲಿ 2008 ಅವರ ಪತ್ನಿಯ ನೆನಪಿಗಾಗಿ ಅಮೂಲ್ಯ ಶೋಧ ಎಂಬ ಪ್ರೇಮ ಸೌಧವನ್ನು ಖಂಡೋಬರಾವ್ ಕಟ್ಟುತ್ತಾರೆ. ಪತ್ನಿಯ ಸಾವು ಇವರಿಗೆ ಮರೆಯಲು ಸಾಧ್ಯವಾಗಲೇ ಇಲ್ಲ. ತನ್ನ ಪ್ರೀತಿಯನ್ನು ಅಮರವಾಗಿಸುವ ಸಲುವಾಗಿ ಖಂಡೋಬರಾವ್ ಅವರು ಪತ್ನಿಯ ಸವಿ ನೆನಪಿಗೆ ಅವರ ಹೆಸರಿನಲ್ಲಿ ಅಮೂಲ್ಯ ಶೋಧ ಎಂಬ ವಸ್ತು ಸಂಗ್ರಹಾಲಯ ಸ್ಥಾಪಿಸಿದ್ದಾರೆ. ಶಿವಮೊಗ್ಗದಿಂದ 15 ಕೀಮೀ ದೂರದಲ್ಲಿರುವ ಲಕ್ಕಿನಕೊಪ್ಪ ಬಳಿ ಸಂಗ್ರಹಾಲಯವಿದೆ.
ಇಲ್ಲಿ ಮರಾಠರು, ಶಾತವಾಹನರು. ವಿಜಯನಗರದ ಅರಸರುಗಳ ಕಾಲಕ್ಕೆ ಸೇರಿದ ಅನೇಕ ವಸ್ತುಗಳು ಇವೆ. ಕತ್ತಿ, ಭರ್ಚಿ, ನಾಗಾರಿ, ತಾಳೆಗರಿ. ತ್ರಾಮದ ಪತ್ರಗಳು. ರವಿವರ್ಮ ಸೇರಿದಂತೆ ಹೆಸರಾಂತ ಕಲಾವಿದರ ತೈಲ ಚಿತ್ರಗಳನ್ನು ಇಲ್ಲಿ ಕಾಣಬಹುದಾಗಿದೆ. ನೆನಪು ಎಂಬ ಸಂಭಾಗಣವಿದ್ದು. ಇಲ್ಲಿ ಪ್ರತಿ ತಿಂಗಳು ಜನಪದ ಕಲೆಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
40 ವರ್ಷಗಳಿಂದ ನಾಣ್ಯ ಸಂಗ್ರಹಣೆಯಲ್ಲಿ ತೊಡಗಿದ್ದ ಖಂಡೋಬರಾವ್ ವಸ್ತು ಸಂಗ್ರಹಾಲಯ ಮಾಡುವ ಉದ್ದೇಶದಿಂದ ಅಮೂಲ್ಯ ಪರಿಕರಣಗಳನ್ನು ಸಂಗ್ರಹಿಸಿ ಇಲ್ಲಿ ಇಟ್ಟಿದ್ದಾರೆ. ಈಗ ಅವರ ವಸ್ತು ಸಂಗ್ರಹಾಲಯದಲ್ಲಿ 2 ಕೋಟಿ ರೂಪಾಯಿಗೂ ಮೀರಿದ ನಾಣ್ಯ ಮತ್ತು ಪರಿಕರಗಳಿವೆ. ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ವಸ್ತು ಸಂಗ್ರಹಾಲಯ ಆವರಣವು ವಿಶಿಷ್ಠತೆಯಿಂದ ಕೂಡಿದೆ.
ಸ್ವಾಗತ ಸ್ತಂಭ, ರಾಷ್ಟ್ರ ಲಾಂಛನ. ಸರ್ವಧರ್ಮ ಸ್ತಂಭಗಳು ಆಕರ್ಷಕವಾಗಿವೆ. ಪ್ರಾಣಿಗಳ ಪ್ರತಿರೂಪಕ ಸುಂದರ ಉದ್ಯಾನವನ ಮನಸ್ಸಿಗೆ ಮುದ ನೀಡುತ್ತದೆ. ಪ್ರೀತಿಸಿ ಮದುವೆಯಾದ ತನ್ನ ಮಡದಿ ಮರಣಹೊಂದಿದ್ದರು ಅವರ ನೆನಪಿನಲ್ಲಿ ಜೀವನ ಸಾಗಿಸುತ್ತಿದ್ದಾರೆ ಖಂಡೋಬರಾವ್.
ಅವರಿಬ್ಬರ ಪ್ರೀತಿಯನ್ನು ಅಮರವಾಗಿಸಲು ಈ ಅಮೂಲ್ಯ ಶೋಧವನ್ನು ಕಟ್ಟಿದ್ದಾರೆ. ತಮ್ಮ ಪ್ರೀತಿ ಅಮರವಾಗಿಸಿಕೊಳ್ಳುವುದರ ಜೊತೆಗೆ ನಶಿಸಿ ಹೋಗುತ್ತಿರುವ ನಾಡಿನ ಸಂಸ್ಕೃತಿಯನ್ನು ಉಳಿಸುವ ಕಾರ್ಯವನ್ನು ಮಾಡಿ ಎಲ್ಲರಿಂದಲೂ ಪ್ರಸಂಸೆಗೆ ಪಾತ್ರವಾಗಿದ್ದಾರೆ. ಶಿವಮೊಗ್ಗ.
Comments are closed.