ಕರ್ನಾಟಕ

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಮರುಮೌಲ್ಯಮಾಪನ- ಮರುಎಣಿಕೆಯ ವಿವರ…

Pinterest LinkedIn Tumblr


ಬೆಂಗಳೂರು: ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಾಗಿದೆ. ಕೆಲವು ವಿದ್ಯಾರ್ಥಿಗಳಿಗೆ ತಾವು ಅಂದುಕೊಂಡಷ್ಟು ಅಂಕ ಬಂದಿಲ್ಲ ಎಂದು ಎನಿಸಿರಬಹುದು, ಇನ್ನೂ ಹೆಚ್ಚಿನ ಅಂಕ ನಿರೀಕ್ಷೆ ಮಾಡಿರಬಹುದು.

ಅಂಥ ವಿದ್ಯಾರ್ಥಿಗಳಿಗೆ ಪ್ರತಿವರ್ಷದಂತೆ ಈ ಬಾರಿಯೂ ಮರುಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅವಕಾಶ ಕಲ್ಪಿಸಲಾಗಿದೆ.

ವಿದ್ಯಾರ್ಥಿಗಳು ಇದೇ 14ರಿಂದ 24ರ ಒಳಗೆ ಮರುಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಬಹುದು.

ಉತ್ತರ ಪತ್ರಿಕೆಯ ಸ್ಕ್ಯಾನ್ ಕಾಪಿ ನಾಳೆಯಿಂದಲೇ (ಮಂಗಳವಾರ) ಪಡೆಯಬಹುದು. ಉತ್ತರ ಪತ್ರಿಕೆಯ ಜೆರಾಕ್ಸ್‌ ಕಾಪಿಯನ್ನು ಪಡೆದುಕೊಳ್ಳಲು ಆಗಸ್ಟ್‌ 24 ಕೊನೆಯ ದಿನವಾಗಿದೆ.

ಪೂರಕ ಪರೀಕ್ಷೆಯ ದಿನಾಂಕವನ್ನು ಇನ್ನೆರಡು ದಿನಗಳ ಒಳಗಾಗಿ ಪ್ರೌಢ ಶಿಕ್ಷಣ ಮಂಡಳಿ ಪ್ರಕಟಿಸಲಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಶುಲ್ಕದ ವಿವರ ಈ ರೀತಿ ಇದೆ.
* ಮರುಎಣಿಕೆ ಒಂದು ವಿಷಯಕ್ಕೆ: ರೂ. 150
* ಜೆರಾಕ್ಸ್‌ ಕಾಪಿ ಒಂದು ವಿಷಯಕ್ಕೆ: ರೂ. 300
* ಮರುಮೌಲ್ಯಮಾಪನ ಒಂದು ವಿಷಯಕ್ಕೆ ರೂ. 700

ವಿದ್ಯಾರ್ಥಿಗಳ ಗಮನಕ್ಕೆ:
* 2019 – 20ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಮರು ಎಣಿಕೆ, ಜೆರಾಕ್ಸ್‌ ಹಾಗೂ ಮರು ಮೌಲ್ಯಮಾಪನಕ್ಕೆ ಅರ್ಜಿಗಳನ್ನು ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಮುಖಾಂತರ ಸಲ್ಲಿಸಬಹುದು.
* ಉತ್ತೀರ್ಣರಾದ ಅಭ್ಯರ್ಥಿಗಳು ಮುಂದಿನ ವ್ಯಾಸಂಗಕ್ಕೆ ಹಾಗೂ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮರುಮೌಲ್ಯಮಾಪನದ ಫಲಿತಾಂಶಕ್ಕಾಗಿ ಕಾಯಬಾರದು.
* ಮರು ಮೌಲ್ಯಮಾಪನದ ಬಗ್ಗೆ ಮರುಮೌಲ್ಯಮಾಪಕರು ತೆಗೆದುಕೊಂಡ ನಿರ್ಧಾರವೇ ಅಂತಿಮ ಇದರ ಬಗ್ಗೆ ಮರುಪರಿಶೀಲನೆ ಅಥವಾ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ.
* ಫಲಿತಾಂಶವನ್ನು ಉತ್ತಮಪಡಿಸಿಕೊಳ್ಳುವ ವಿದ್ಯಾರ್ಥಿಗಳು ಮೊದಲು ಉತ್ತೀರ್ಣರಾದ ಎರಡು ವರ್ಷದೊಳಗೆ ಅದೇ ವಿಷಯ/ವಿಷಯಗಳಿಗೆ ಪರೀಕ್ಷೆ ತೆಗೆದುಕೊಳ್ಳಬಹುದು.
* ಯಾವುದೇ ವಿದ್ಯಾರ್ಥಿ ಶಾಲಾ ಅಭ್ಯರ್ಥಿಯಾಗಿ ಪುನಃ ಪರೀಕ್ಷೆಯನ್ನು ತೆಗೆದುಕೊಳ್ಳಲು ಇಚ್ಛಿಸಿದಲ್ಲಿ ಶಾಲೆಗೆ ಮರು ಪ್ರವೇಶ ಪಡೆಯಲು ಅವಕಾಶವಿದೆ.
* ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳ ಉತ್ತೀರ್ಣ ಪ್ರಮಾಣ ಪತ್ರಗಳನ್ನು ಆಯಾ ಶಾಲೆಗಳಿಗೆ ಮರುಎಣಿಕೆ ಮತ್ತು ಮರು ಮೌಲ್ಯಮಾಪನ ಕಾರ್ಯ ಪೂರ್ಣಗೊಂಡ ನಂತರ ಕಳುಹಿಸಲಾಗುವುದು.

Comments are closed.