ಕರ್ನಾಟಕ

ಪ್ರೀತಿಸಿ ಮದುವೆಯಾಗಿದ್ದ ಮಡದಿಗೆ ಕೊರೊನಾ: ಪರಾರಿಯಾಗಿ ಅಂತ್ಯಕ್ರಿಯೆಗೂ ಬಾರದ ಪತಿ

Pinterest LinkedIn Tumblr


ಬೆಂಗಳೂರು: ಪ್ರೀತಿಸಿ ಮದ್ವೆಯಾಗಿದ್ದ ಪತ್ನಿಗೆ ಕೊರೊನಾ ಬಂತೆಂದು ಗಂಡ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಶಂಕರಮಠ ವಾರ್ಡ್ ಜೆ.ಸಿ ನಗರದಲ್ಲಿ ವಾಸಿಸುತ್ತಿದ್ದ ದಂಪತಿ 2 ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಪತಿ ಕಾರು ಚಾಲಕ, ಪತ್ನಿ ಮಾಲ್ ವೊಂದರಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ರು. ಕಳೆದ 4-5 ದಿನಗಳಿಂದ ಪತ್ನಿಗೆ ಆರೋಗ್ಯ ಹದಗೆಟ್ಟಿತ್ತು. ಪರೀಕ್ಷೆ ಮಾಡಿಸಿದಾಗ ಮಹಿಳೆಗೆ ಪಾಸಿಟಿವ್ ಇರೋದು ಗೊತ್ತಾಗಿದೆ. ಇದರಿಂದ ತನಗೂ ಕೊರೊನಾ ಬಂದು ಬಿಡುತ್ತೆ ಎಂಬ ಭಯಕ್ಕೆ ರಾತ್ರಿಯೇ ಪತಿ ಮನೆ ಬಿಟ್ಟು ಪರಾರಿ ಆಗಿದ್ದಾನೆ.

ಇತ್ತ ಕೊರೊನಾ ಸೋಂಕಿನಿಂದಲೇ ಮಹಿಳೆ ಸಾವನ್ನಪ್ಪಿದ್ದಾರೆ. ಕಡೇ ಪಕ್ಷ ಪತ್ನಿಯ ಅಂತ್ಯಕ್ರಿಯೆಗೂ ಪತಿ ಬಂದಿಲ್ಲ. ಬಳಿಕ ಸ್ಥಳೀಯ ಕಾರ್ಪೋರೇಟರ್ ಶಿವರಾಜ್ ಸಹಾಯದಿಂದ ಅಂತ್ಯಕ್ರಿಯೆ ಮಾಡಲಾಗಿದೆ.

Comments are closed.