ಮಂಡ್ಯ: ಹೊಸದಾಗಿ ಮನೆ ನಿರ್ಮಿಸಿ ಮುಂದಿನ ವಾರ ಗೃಹ ಪ್ರವೇಶಕ್ಕೆ ಸಿದ್ಧತೆ ನಡೆಸುತ್ತಿದ್ದಾಗಲೇ ಕೌಟುಂಬಿಕ ಕಾರಣಗಳಿಂದಾಗಿ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಂತೇಚಾಚನಹಳ್ಳಿಯ ಹಡವನಹಳ್ಳಿಯಲ್ಲಿ ನಡೆದಿದೆ.
ಹಡವನಹಳ್ಳಿಯ ಲೋಕೇಶ್(43) ಮತ್ತು ಸವಿತಾ(36) ಆತ್ಮಹತ್ಯೆ ಮಾಡಿಕೊಂಡಿರುವ ದಂಪತಿ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗು ಇದೆ. ಹೊಸದಾಗಿ ಮನೆ ನಿರ್ಮಾಣ ಮಾಡಿ ಮುಂದಿನ ವಾರ ಗೃಹ ಪ್ರವೇಶ ನಿಗದಿಪಡಿಸಲಾಗಿತ್ತು.
ಗ್ರಾಮದ ಪಕ್ಕದಲ್ಲೇ ಇರುವ ಕೆರೆಯೊಂದಕ್ಕೆ ಬಿದ್ದು ನಿನ್ನೆ ಮುಂಜಾನೆ ಪತ್ನಿ ಸವಿತಾ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಚಾರ ತಿಳಿದ ಗ್ರಾಮಸ್ಥರು ಪತಿ ಲೋಕೇಶ್ ಗೆ ಫೋನ್ ಮೂಲಕ ವಿಚಾರ ತಿಳಿಸಿದ್ದಾರೆ. ಇದರಿಂದ ಗಾಬರಿ ಗೊಂಡ ಲೋಕೇಶ್ ನೇಣಿಗೆ ಶರಣಾಗಿದ್ದಾನೆ.
Comments are closed.