ಕರ್ನಾಟಕ

ತೆಲಂಗಾಣದ ಮಹಿಳಾ ಟೆಕ್ಕಿ ಬೆಂಗಳೂರಿನ ಮನೆಯಲ್ಲಿ ಶವವಾಗಿ ಪತ್ತೆ; ಸಾವಿನ ಹಿಂದೆ ಪತಿಯ ಕೈವಾಡದ ಆರೋಪ

Pinterest LinkedIn Tumblr

ನಿಜಾಮಾಬಾದ್: ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಮಹಿಳಾ ಟೆಕ್ಕಿ ಬೆಂಗಳೂರಿನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

35 ವರ್ಷದ ಶರಣ್ಯ ಶವ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ, ಪತಿಯ ಸಂಚಿನಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.

ಶರಣ್ಯ ತಮ್ಮ ಕ್ಲಾಸ್ ಮೇಟ್ ರೋಹಿತ್ ನನ್ನು ವಿವಾಹವಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದರು, ಮದುವೆಯ ನಂತರ ರೋಹಿತ್ ಕುಡಿದು ಮನೆಗೆ ಬಂದು ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ಶರಣ್ಯ ಪೋಷಕರು ಆರೋಪಿಸಿದ್ದಾರೆ.

ಆತನ ಕಿರುಕುಳ ತಾಳಲಾರದೆ ಶರಣ್ಯ ತಮ್ಮ ತಾಯಿಯ ಮನೆಗೆ ತೆರಳಿದ್ದರು, ಮೂರು ತಿಂಗಳ ಹಿಂದೆ ಆಕೆಯ ಮನವೊಲಿಸಿ ರೋಹಿತ್ ವಾಪಸ್ ಬೆಂಗಳೂರಿನ ಮನೆಗೆ ಶರಣ್ಯಾಳನ್ನು ಕರೆ ತಂದಿದ್ದ.

ಆಕೆಯ ಸಾವಿನ ಹಿಂದೆ ರೋಹಿತ್ ಕೈವಾಡವಿದೆ ಎಂದು ಆರೋಪಿಸಿರುವ ಆಕೆಯ ಪೋಷಕರು ಒಂದು ವೇಳೆ ಆತನೇ ಶರಣ್ಯಳನ್ನು ಕೊಂದಿರಬಹುದು ಇಲ್ಲವೇ ಆತ್ಮಹತ್ಯಗೆ ಪ್ರಚೋದಿಸಿರಬಹುದು ಎಂದು ಆರೋಪಿಸಿದ್ದಾರೆ, ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

Comments are closed.