ಕರ್ನಾಟಕ

ಹೆಂಡತಿಯ ಮನೆಗೆ ಹೋಗಿ ಬಂದು ನೇಣಿಗೆ ಶರಣಾದ ಚನ್ನರಾಯಪಟ್ಟಣ ಸಬ್ ಇನ್ಸ್​ಪೆಕ್ಟರ್​

Pinterest LinkedIn Tumblr


ಚನ್ನರಾಯಪಟ್ಟಣ: ಟೌನ್ ಸಬ್ ಇನ್ಸ್​ಪೆಕ್ಟರ್​ ಕಿರಣ್ ಕುಮಾರ್ ಆತ್ಮಹತ್ಯೆ ಮಾಡಿ ಕೊಂಡು ಮೃತರಾಗಿದ್ದು, ಪೊಲೀಸ್​ ಇಲಾಖೆಯಲ್ಲಿ ಆತಂಕ ಮನೆ ಮಾಡಿದೆ.

ದಕ್ಷತೆಗೆ ಹೆಸರಾಗಿದ್ದ ಕಿರಣ್​ ಅರಸಿಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಲಾಳಿನಕೆರೆ ಗ್ರಾಮದವರು. ಇಂದು ವರಮಹಾಲಕ್ಷ್ಮಿ ಹಬ್ಬ ಇದ್ದಿದ್ದರಿಂದ ಇವರ ಪತ್ನಿ ತನ್ನ ತಂದೆ ಮನೆಗೆ ಹೋಗಿದ್ದರು. ಕಿರಣ್​ ಸಹ ಮಾವನ ಮನೆಗೆ ಹೋಗಿ ಬೆಳಗ್ಗೆ ಉಪಹಾರ ತಿಂದು ಬಂದು ತಾವು ವಾಸವಿದ್ದ ಮನೆಯಲ್ಲಿ ಫ್ಯಾನ್​ಗೆ ನೇಣು ಬಿಗಿದುಕೂಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ನಗರದಲ್ಲಿ ಎರಡು ಕೊಲೆಗಳಾಗಿದ್ದು ಒತ್ತಡ ತಾಳಲಾರದೆ ಆತ್ಮ ಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹ ಇಡಲಾಗಿದೆ. ಸಮವಸ್ತ್ರದಲ್ಲೇ ನೇಣಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

ಹಾಸನ ಎಸ್ಪಿ ಶ್ರಿನಿವಾಸ್ ಗೌಡ ಭೇಟಿ ನೀಡಿ ಪರಿಸ್ಥಿತಿ ಪರಿಶೀಲನೆ ಮಾಡಿದ್ದಾರೆ. ಇಡೀ ಪೊಲೀಸ್ ವರ್ಗ ಕಿರಣ್ ಸಾವಿಗೆ ಕಂಬನಿ ಮಿಡಿದಿದೆ.

Comments are closed.