ಕರ್ನಾಟಕ

ಕೊರೋನಾ ಭೀತಿಗೆ ಹೊಲದಲ್ಲಿ ವಾಸ ಮಾಡುತ್ತಿರುವ ಗದಗ ಜಿಲ್ಲೆಯ ಸೀತಾಹರಿ ಗ್ರಾಮದ ಜನತೆ

Pinterest LinkedIn Tumblr


ಗದಗ: ತಾಲೂಕಿನ ಸೀತಾಲಹರಿ ಎನ್ನುವ ಪುಟ್ಟ ಗ್ರಾಮದಲ್ಲಿ ಡೆಡ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಒಂದು ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಇರೋ ಈ ಪುಟ್ಟ ಗ್ರಾಮದಲ್ಲಿ ಎರಡ್ಮೂರು ಮನೆಗೆ ಒಬ್ಬ ಕೊರೋನಾ ಸೋಂಕಿತರಿದ್ದಾರೆ. ಹಾಗಾಗಿ ಗ್ರಾಮದವರು ಜೀವ ಉಳಿಸಿಕೊಳ್ಳಲು ಊರಿನ ಸುಮಾರು 40 ಕುಟುಂಬಸ್ಥರು ಗ್ರಾಮದ ಹೊರವಲಯದಲ್ಲಿ ತಾತ್ಕಾಲಿಕವಾಗಿ ಶೆಡ್ ಹಾಕಿಕೊಂಡು ಬದುಕಲು ನಿರ್ಧಾರ ಮಾಡಿದ್ದಾರೆ. ಮನೆಯಲ್ಲಿ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬದುಕು ನಡೆಸಲು ಮುಂದಾಗಿದ್ದಾರೆ.

ಪುಟಾಣಿ ಮಕ್ಕಳು, ಮಹಿಳೆಯರು,ವೃದ್ದರು ತಾತ್ಕಾಲಿಕ ಶೆಡ್ ನಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಇನ್ನು ಹಲವರು ಗುಡಿಸಲು ಹಾಕಿಕೊಂಡಿದ್ರೆ ,ಅದರಲ್ಲಿ ಓಮಿನಿ ಕಾರ್ ಹಾಗೂ ಟ್ರ್ಯಕರ್ ನ ಟೇಲರ್ ಗೆ ತಾಡಪಾಲ ಹಾಕಿ ಜಮೀನಿನಲ್ಲಿ ವಾಸವಿದ್ದಾರೆ. ಜಮೀನಿನು ಇಲ್ಲದವರು ಗ್ರಾಮದ ಹೊರವಲಯದ ಖಾಲಿ ಜಾಗದಲ್ಲಿ ತಾತ್ಕಾಲಿಕವಾಗಿ ಶೆಡ್ ಹಾಕಿಕೊಂಡು ಇಡೀ ಊರೀನ ಕೆಲವು ಕುಟುಂಬಗಳು ಊರು ಖಾಲಿ ಮಾಡುತ್ತಿದ್ದಾರೆ.

ಮಳೆ, ಚಳಿ ಎನ್ನದೆ ಜೀವ ಉಳಿಸಿಕೊಳ್ಳಲು ಗ್ರಾಮದ ಜನರು ಮುಂದಾಗಿದ್ದಾರೆ. ಈ ಪುಟ್ಟ ಗ್ರಾಮದಲ್ಲಿ 13 ಜನರಿಗೆ ಕೊರೋನಾ ಸೋಂಕು ದೃಡವಾಗಿದ್ದು, ಓರ್ವ ಸಾವನ್ನಪ್ಪಿದ್ದರೆ, 100 ಹೆಚ್ಚು ಜನರಿಗೆ ಮೊರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ.

ಇನ್ನೂ ಈ ಪುಟ್ಟ ಗ್ರಾಮದ ನಿವಾಸಿಯಾದ ಸಾರಿಗೆ ಸಂಸ್ಥೆಯ ಬಸ್ ಚಾಲಕನಿಂದ ಕಿಲ್ಲರ್ ಕರೊನಾ ವಕ್ಕರಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್ ಚಾಲಕ ಲಾಕ್‌ಡೌನ್ ಸಮಯದಲ್ಲಿ ಗ್ರಾಮಕ್ಕೆ ವಾಪಾಸ್‌ ಆಗಿದ್ದು, ಆತ ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡು ಹೋಗುತ್ತಿದ್ದ. ಆದ್ರೆ, ಆತನಿಗೆ ತೀವ್ರ ಜ್ವರ, ಕೆಮ್ಮು ನೆಗಡಿ ಬಂದಿರುವುದರಿಂದ ನಾಲ್ಕು ಗ್ರಾಮಸ್ಥರೊಂದಿಗೆ ಗದಗ ಜಿಮ್ಸ್ ಆಸ್ಪತ್ರೆಗೆ ಬಂದು ಕೊವಿಡ್- 19 ಟೆಸ್ಟ್ ಮಾಡಿಸಿಕೊಂಡು ವಾಪಾಸ್ ಊರಿಗೆ ತೆರಳಿದ್ದರು.

ಆದರೆ, ಇನ್ನೂ ವರದಿ ಬರುವ ಮುನ್ನಾ ಆತನಿಗೆ ಹೃದಯಾಘಾತವಾಗಿದೆ ಎಂದು ತಿಳಿದು ಗ್ರಾಮಸ್ಥರು ಆತನಿಗೆ ಬಾಯಿಗೆ ಬಾಯಿ ಇಟ್ಟು ಉಸಿರು ಕೊಟ್ಟು ಬದುಕಿಸಲು ಯತ್ನಿಸಿದ್ದಾರೆ. ಆತನ ಬಾಯಿಯಲ್ಲಿ ಕಿರು ನಾಲಿಗೆಯನ್ನು ಒತ್ತಿ ಹಿಡಿದು, ಎದೆಗೆ ಹೊಡೆದು ಬದುಕಿಸಲು ಹರ ಸಾಹಸ ಪಟ್ಟಿದ್ದಾರೆ. ಆದರೆ, ಆತ ಸಾವನ್ನಪ್ಪಿದ್ದಾನೆ. ಆತನನ್ನು ಮುಟ್ಟಿ ಕಣ್ಣೀರು ಹಾಕಿದ್ದಾರೆ.

ಇಷ್ಟೇಲ್ಲಾ ಆದ ಮೇಲೆ ಕರೊನಾ ಪಾಸಿಟಿವ್ ಆಗಿದೆ ಎಂದು ವರದಿ ಬಂದಿದ್ದು, ಇಡೀ ಗ್ರಾಮಕ್ಕೆ ಗ್ರಾಮವೇ ಆತಂಕಕ್ಕೆ ಕಾರಣವಾಗಿದೆ. ಆತನಿಗೆ ಉಸಿರು ಕೊಟ್ಟು ಬದುಕಿಸಲು ಮುಂದಾಗಿದ್ದ 10 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. ತೀವ್ರವಾದ ಜ್ವರ ಇದ್ದರೂ ಸಹ ಗದಗ ಜಿಮ್ಸ್ ಆಸ್ಪತ್ರೆಯ ಸಿಬ್ಬಂದಿಗಳು ಟೆಸ್ಟ್ ಮಾಡಿ ಮನೆಗೆ ಕಳುಹಿಸಿದ್ದಾರೆ. ಆದರೆ, ನಂತರ ಕೊರೋನಾ ಪಾಸಿಟಿವ್ ದೃಡವಾಗಿದ್ದು ಅಷ್ಟರಲ್ಲಿ ಆತನ ಪ್ರಾಣ ಉಳಿಸಲು ಇಡೀ ಗ್ರಾಮದ ಜನರು ಯತ್ನಿಸಿ ಸೋಂಕು‌ ಹಚ್ಚಿಕೊಂಡಿದ್ದಾರೆ. ಹೀಗಾಗಿ ಜಿಮ್ಸ್ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃಷಿ ಕೆಲಸ ಮಾಡಿಕೊಂಡು ಹಾಯಾಗಿ ಜೀವನ ನಡೆಸುತ್ತಿದ್ದ ಪುಟ್ಟ ಹಳ್ಳಿಗೆ ಡೆಡ್ಲಿ ಕೊರೊನಾ ವಕ್ಕರಿಸಿಕೊಂಡಿದೆ. ಪ್ರಾಣವನ್ನು ಉಳಿಸಲು ಹೋದವರಿಗೆ ಕೊರೋನಾ ತಗುಲಿರುವುದು‌ ಸೀತಾಲಹರಿ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದಂತಾಗಿದೆ.

Comments are closed.