ಕರ್ನಾಟಕ

ಚಾಮರಾಜನಗರ: ಕೊರೋನಾ ಸೋಂಕಿತರಲ್ಲಿ ಲಕ್ಷಣಗಳೇ ಇಲ್ಲ!

Pinterest LinkedIn Tumblr


ಚಾಮರಾಜನಗರ: ಗಡಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು ಆಸ್ಪತ್ರೆ ಸೇರಿರುವವರ ಪೈಕಿ ಬಹುತೇಕರಲ್ಲಿ ಕೋವಿಡ್‌-19ನ ಯಾವುದೇ ಗುಣ ಲಕ್ಷಣಗಳೇ ಕಾಣಿಸಿಕೊಂಡಿಲ್ಲ!

ಸಾಕಷ್ಟು ಮಂದಿಯನ್ನು ಪಾಸಿಟಿವ್‌ ಬಂದ ನಂತರ ಕೋವಿಡ್‌ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಈ ಪೈಕಿ ಶೇ.75ರಷ್ಟು ಮಂದಿ ಪಾಸಿಟಿವ್‌ ಎಂಬುದನ್ನು ಹೊರತು ಪಡಿಸಿದರೆ ಅವರಲ್ಲಿಜ್ವ ರ, ಕೆಮ್ಮು, ಸೀನು, ಉಸಿರಾಟದ ತೊಂದರೆ ಸೇರಿದಂತೆ ಕೊರೊನಾ ಸೋಂಕಿನ ಯಾವುದೇ ಗುಣಲಕ್ಷಣಗಳು ಗೋಚರಿಸಿರಲಿಲ್ಲ.

ಜಿಲ್ಲೆಯಷ್ಟೇ ಅಲ್ಲ, ಉಳಿದೆಡೆಗಳಲ್ಲೂ ಸೋಂಕಿತರಲ್ಲಿ ಹೆಚ್ಚು ಮಂದಿಗೆ ಯಾವುದೇ ಗುಣ ಲಕ್ಷಣಗಳು ಕಂಡು ಬಾರದೇ ಇರುವುದು ಅಚ್ಚರಿ ಮೂಡಿಸಿದೆ. ಚಾಮರಾಜನಗರ ಜಿಲ್ಲೆಯ ಕೋವಿಡ್‌ ಸೋಂಕಿತರ ಒಟ್ಟು ಸಂಖ್ಯೆ 173. ಈ ಪೈಕಿ 43 ಮಂದಿಯಲ್ಲಿ ಮಾತ್ರ ಕೊರೊನಾ ವೈರಸ್‌ ಬಂದಾಗ ಕಾಣಿಸಿಕೊಳ್ಳುವ ಸಮಸ್ಯೆಯಲ್ಲಿ ಒಂದೆರಡು ಸಮಸ್ಯೆಗಳು ಗೋಚರಿಸಿದ್ದವು.

ಆದರೆ, ಇನ್ನುಳಿದ 130 ಮಂದಿಯಲ್ಲಿ ಇಂಥ ಯಾವುದೇ ಸಮಸ್ಯೆಗಳಿಲ್ಲದೇ ಮಾಮೂಲಿ ಆರೋಗ್ಯ ವ್ಯಕ್ತಿ ಇರುವಂತೆಯೇ ಇದ್ದರು. ಸದ್ಯ ಸಕ್ರಿಯ 96 ಪ್ರಕರಣಗಳಲ್ಲೂ ಇಂತಹ ಗುಣಲಕ್ಷಣಗಳಿಲ್ಲದವರೇ ಹೆಚ್ಚು ಎಂಬುದು ಗಮನಾರ್ಹ.

Comments are closed.