ಕರ್ನಾಟಕ

ಗೆಳೆಯನಿಗೆ ಕೊರೊನಾ; ಕ್ವಾರಂಟೈನ್‌ಗೆ ಮಾಜಿ ಸಚಿವ ಎಚ್‌.ವೈ.ಮೇಟಿ

Pinterest LinkedIn Tumblr


ಬಾಗಲಕೋಟೆ: ಹಳೆಯ ಸ್ನೇಹಿತನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಎಚ್.ವೈ.ಮೇಟಿ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ. ಸೋಮವಾರ ಸ್ವ್ಯಾಬ್‌ ಟೆಸ್ಟ್‌ ಮಾಡಿಸಲು ಮಾಜಿ ಸಚಿವರು ನಿರ್ಧರಿಸಿದ್ದಾರೆ.

ಸ್ನೇಹಿತನಿಗೆ ಕೊರೊನಾ ಸೋಂಕು ಖಚಿತವಾಗಿದ್ದು, ಸೋಮವಾರ ಜಿಲ್ಲಾಸ್ಪತ್ರೆಗೆ ತೆರಳಿ ಟೆಸ್ಟ್ ಮಾಡಿಸಿಕೊಳ್ಳುವುದಾಗಿ ಮಾಜಿ ಸಚಿವ ಎಚ್.ವೈ.ಮೇಟಿ ತಿಳಿಸಿದ್ದಾರೆ. ಸದ್ಯ ಜಿಲ್ಲೆಯ ತಿಮ್ಮಾಪೂರ ಗ್ರಾಮದ ಮನೆಯಲ್ಲಿ ಕ್ವಾರಂಟೈನ್‌ಗೆ ಮೇಟಿ ಒಳಗಾಗಿದ್ದಾರೆ.

ನವನಗರದ ಮನೆ ಎದುರು ವಾಸವಾಗಿದ್ದ ಹಳೆಯ ಸ್ನೇಹಿತ, ನಿವೃತ್ತ ಆಯುಷ್ಯ ವೈದ್ಯರಿಗೆ ಭಾನುವಾರ ಸೋಂಕು ಧೃಢಪಟ್ಟಿತ್ತು. ನಿವೃತ್ತ ಆಯುಷ್ಯ ವೈದ್ಯರ ಪ್ರಾಥಮಿಕ ಸಂಪರ್ಕದಲ್ಲಿದ್ದ ಹಿನ್ನೆಲೆ ಎಚ್‌.ವೈ.ಮೇಟಿಗೆ ಬಾಗಲಕೋಟೆ ತಹಶೀಲ್ದಾರ್‌ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಿದ್ದಾರೆ.

ಇನ್ನು, ಜಿಲ್ಲೆಯಲ್ಲಿ ಇದುವರೆಗೂ 226 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿದ್ದು, 123 ಜನ ಗುಣಮುಖರಾಗಿದ್ದರೆ, 98 ಸಕ್ರಿಯ ಪ್ರಕರಣಗಳಿವೆ. ಕೊರೊನಾ ಕಾರಣದಿಂದ 5 ಜನ ಸಾವನ್ನಪ್ಪಿದ್ದಾರೆ.

Comments are closed.