ಕರ್ನಾಟಕ

ರಾಜ್ಯದಲ್ಲಿ ಇಂದು (ರವಿವಾರ) 1,925 ಕೊರೋನಾ ಪ್ರಕರಣಗಳು ಪತ್ತೆ: 38 ಸಾವು

Pinterest LinkedIn Tumblr


ಬೆಂಗಳೂರು(ಜುಲೈ 05): ಇಂದು ರಾಜ್ಯದಲ್ಲಿ ಕೊರೋನಾ ಆರ್ಭಟ ತಾರಕಕ್ಕೇರಿದೆ. ಕಳೆದ 24 ಗಂಟೆ ಅವಧಿಯಲ್ಲಿ 38 ಮಂದಿ ಸಾವನ್ನಪ್ಪಿದ್ದಾರೆ. 1925 ಪ್ರಕರಣಗಳು ದಾಖಲಾಗಿವೆ. ರಾಜ್ಯಾದ್ಯಂತ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 23,549 ತಲುಪಿದ್ದು, ಸಾವಿನ ಸಂಖ್ಯೆ 373 ಮುಟ್ಟಿದೆ.

ಬೆಂಗಳೂರು ಕೊರೋನಾ ಹಾಟ್​​ಸ್ಪಾಟ್ ಆಗಿ ಮುಂದುವರಿದಿದೆ. ನಗರದಲ್ಲಿ ಹೊಸ ದಾಖಲೆಯ ಪ್ರಮಾಣದಲ್ಲಿ ಪ್ರಕರಣಗಳು ಬೆಳಕಿಗೆ ಬಂದಿವೆ. ಒಂದೇ ದಿನ 1235 ಪ್ರಕರಣಗಳು ದಾಖಲಾಗಿವೆ. ನಗರದಲ್ಲಿನ ಒಟ್ಟು ಪ್ರಕರಣಗಳು ಬರೋಬ್ಬರಿ 8345 ಮುಟ್ಟಿದೆ.

ರಾಜ್ಯಾದ್ಯಂತ ಇವತ್ತು 603 ರೋಗಿಗಳು ಗುಣಮುಖಗೊಂಡಿದ್ದಾರೆ. ಈವರೆಗೆ 9847 ಮಂದಿ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆದಂತಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಆಕ್ಟಿವ್ ಕೊರೊನಾ ಕೇಸ್​ಗಳ ಸಂಖ್ಯೆ 13,257 ಇದೆ. ಸದ್ಯ ರಾಜ್ಯದಲ್ಲಿ 243 ಜನ ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಬೆಂಗಳೂರಿನಲ್ಲಿ ಇಂದು 16 ಸಾವನ್ನಪ್ಪಿದ್ದಾರೆ. ಇವರಲ್ಲಿ ‌6 ಜನರಿಗೆ ಯಾವುದೇ ರೋಗಲಕ್ಷಣ ಇರಲಿಲ್ಲ. ರೋಗಲಕ್ಷಣ ಇಲ್ಲದವರು ಸೇಫ್ ಎನ್ನುವ ಲೆಕ್ಕಾಚಾರವಿತ್ತು ಆದರೆ, ಎಲ್ಲಾ ಲೆಕ್ಕಗಳನ್ನು ಕೊರೋನಾ ಬುಡಮೇಲು ಮಾಡಿದೆ.

ಆಗಸ್ಟ್ 15ರ ವೇಳೆಗೆ ರಾಜ್ಯದಲ್ಲಿ 25 ಸಾವಿರ ಸೋಂಕಿತರು ಇರುತ್ತಾರೆ ಎಂದು ತಜ್ಞರು ಹೇಳಿದ್ದರು. ಆದರೆ, ತಜ್ಞರ ಲೆಕ್ಕಾಚಾರವನ್ನೇ ಕೊರೋನಾ ಬುಡಮೇಲು ಮಾಡಿದೆ. ಜುಲೈ ಮೊದಲ ವಾರದಲ್ಲೇ 23 ಸಾವಿರ ತಲುಪಿದೆ. ಆಗಸ್ಟ್ ಬರುವ ವೇಳೆಗೆ ಸಂಖ್ಯೆ ಇನ್ನು ಹೆಚ್ಚಾಗುವ ಆತಂಕವಿದೆ. ಮೂಲ ಪತ್ತೆಯಾಗದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಸಾವಿನ ಸಂಖ್ಯೆಯಲ್ಲೂ ಏರಿಕೆ ಕಂಡು ಬರುತ್ತಿದೆ.

ಜಿಲ್ಲಾವಾರು ಇಂದು ದಾಖಲಾದ ಸೋಂಕಿತರು

ಬೆಂಗಳೂರು ನಗರ – 1235, ದಕ್ಷಿಣ ಕನ್ನಡ – 147, ಬಳ್ಳಾರಿ – 90, ವಿಜಯಪುರ – 51, ಕಲಬುರ್ಗಿ – 49, ಉಡುಪಿ – 45, ಧಾರವಾಡ – 45, ಬೀದರ್ – 29, ಮೈಸೂರು – 25, ಕೊಪ್ಪಳ – 22, ಉತ್ತರ ಕನ್ನಡ – 21, ಚಾಮರಾಜನಗರ – 19, ಹಾವೇರಿ – 15, ಹಾಸನ – 14, ಚಿಕ್ಕಬಳ್ಳಾಪುರ – 13, ತುಮಕೂರು- 13, ಕೋಲಾರ – 13, ಬೆಳಗಾವಿ – 11, ದಾವಣಗೆರೆ – 11, ರಾಯಚೂರು – 10, ಮಂಡ್ಯ – 10, ಚಿಕ್ಕಮಗಳೂರು – 09, ಶಿವಮೊಗ್ಗ – 08, ಗದಗ – 07, ರಾಮನಗರ – 06, ಬಾಗಲಕೋಟೆ – 04, ಚಿತ್ರದುರ್ಗ – 03 ಪ್ರಕರಣಗಳು ದಾಖಲಾಗಿವೆ.

Comments are closed.