ಕರ್ನಾಟಕ

ರಾಜ್ಯದಲ್ಲಿ ಇಂದು (ಸೋಮವಾರ) 1105 ಕೊರೋನಾ ಪ್ರಕರಣಗಳು ಪತ್ತೆ; 19 ಸಾವು

Pinterest LinkedIn Tumblr


ಬೆಂಗಳೂರು: ನಿನ್ನೆಯಂತೆ ಇಂದೂ ಸಹ ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಸಾವಿರ ದಾಟಿದೆ.

ರಾಜ್ಯ ರಾಜಧಾನಿಯನ್ನು ಒಳಗೊಂಡಿರುವ ಬೆಂಗಳೂರು ನಗರ ಜಿಲ್ಲೆಯಲ್ಲಿ 738 ಪ್ರಕರಣ ಸಹಿತ ರಾಜ್ಯದಲ್ಲಿ ಇಂದು ಒಟ್ಟಾರೆ 1105 ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ ಮತ್ತು ಇಂದು ಒಂದೇ ದಿನ ಕೋವಿಡ್ ಸೋಂಕಿನ ಕಾರಣದಿಂದ 19 ಜನ ಸಾವನ್ನಪ್ಪಿದ್ದಾರೆ.

ಇಂದೂ ಸಹ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ನಗರವೇ ಮುಂಚೂಣಿಯಲ್ಲಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನುಳಿದಂತೆ ಬಳ್ಳಾರಿ, ದಕ್ಷಿಣ ಕನ್ನಡ, ಬಳ್ಳಾರಿ, ಬೀದರ್, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ.

Comments are closed.