ಕರ್ನಾಟಕ

ಮಂಡ್ಯದ ಗ್ರಾಮೀಣ ಭಾಗಕ್ಕೆ ವ್ಯಾಪಿಸುತ್ತಿರುವ ಕೊರೋನಾ ಮಹಾಮಾರಿ

Pinterest LinkedIn Tumblr


ಮಂಡ್ಯ(ಜೂನ್ 27): ಸಕ್ಕರೆ ನಾಡಿನಲ್ಲಿ ಮತ್ತೆ ಕೊರೋನಾ ರಣಕೇಕೆ ಹಾಕುವ ಲಕ್ಷಣಗಳು ಕಾಣಿಸುತ್ತಿವೆ. ಅದ್ರಲ್ಲೂ ಈಗ ಈ ಕೊರೊನಾ ಸೋಂಕು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಗ್ರಾಮೀಣ ಭಾಗದ ಜನರು ಆತಂಕದಲ್ಲಿದ್ದಾರೆ. ಅದರಲ್ಲೂ ಮಂಡ್ಯದ ಮಳವಳ್ಳಿ ತಾಲೂಕಿನ ವಿವಿಧ ಗ್ರಾಮದಲ್ಲಿ ಇಂದು 8 ಹೊಸ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ತಾಲೂ ಕಿನ ಪೂರಿಗಾಲಿ ಹಾಗೂ ತಳಗವಾದಿಯಲ್ಲಿ ತಲಾ 2 ಪ್ರಕರಣ, ದೇವಿಪುರ ಗೊಲ್ಲರಹಳ್ಳಿ, ತಿಗಡಹಳ್ಳಿ,ಹಾಗೂ ಕುಂದೂರಿನಲ್ಲಿ ತಲಾ ಒಂದೊಂದು ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಅದರಲ್ಲೂ ತಳಗವಾದಿಯಲ್ಲಿ ಕೊರೊನಾ ವಾರಿಯರ್ಸ್ ಆಗಿದ್ದ ಆಶಾ ಕಾರ್ಯಕರ್ತೆಗೂ‌ ಸೋಂಕು ವಕ್ಕರಿಸಿರೋದು ಗ್ರಾಮೀಣ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.

ಇನ್ನು, ಮಳವಳ್ಳಿ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಹೆಚ್ಚಿನ ಕೊರೊನಾ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದರಿಂದ ಮಳವಳ್ಳಿ ಪಟ್ಟಣದಲ್ಲಿರುವ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಯಂ ಸೀಲ್​ಡೌನ್ ಮಾಡಿಕೊಂಡಿ ದ್ದಾರೆ.‌ ಠಾಣೆಯ ಒಳಗೆ ಯಾವುದೇ ಸಾರ್ವಜನಿಕರು ಬರದಂತೆ ಹೇಳುತ್ತಿದ್ದು, ಅಗತ್ಯವಿರುವವರಿಗೆ ಠಾಣೆಯ ಹೊರಗೆ ಶಾಮಿಯಾನ ಹಾಕಿಸಿಕೊಂಡು ಮಾಹಿತಿ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಮಂಡ್ಯದ ಸುಭಾಷ್ ನಗರದ 7ನೇ ಕ್ರಾಸ್​ನ ವಕೀಲನಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಆ ಏರಿಯಾವನ್ನು ಸೀಲ್​ಡೌನ್ ಮಾಡಲಾಗಿದೆ.ಇದರ ಜೊತೆಗೆ ಮಂಡ್ಯ ತಾಲೂಕಿನ ದುದ್ದ ಗ್ರಾಮದಲ್ಲಿ ವ್ಯಕ್ತಿಯೋರ್ವನಿಗೆ ಪಾಸಿಟಿವ್ ಕಾಣಿಸಿಕೊಂಡಿದ್ದು ಆ ಗ್ರಾಮದಲ್ಲಿನ‌ ಜನರು ಕೂಡ ಆತಂಕಗೊಂಡಿದ್ದಾರೆ.

ಒಟ್ಟಾರೆ ಮಂಡ್ಯ ಜಿಲ್ಲೆಯಲ್ಲೀಗ ಗ್ರಾಮೀಣ ಭಾಗಕ್ಕೂ ಕೊರೋನಾ ಪ್ರಕರಣಗಳು ಹರಡುತ್ತಿದ್ದು ಗ್ರಾಮೀಣ ಭಾಗದ ಜನರ ನಿದ್ದೆಗೆಡಿಸಿ ಆತಂಕ ತಂದಿದೆ. ಗ್ರಾಮೀಣ ಭಾಗದಲ್ಲಿ ಕಂಡು ಬಂದ ಸೋಂಕಿತರನ್ನು ಈಗಾಗಲೇ ಮಿಮ್ಸ್ ಆಸ್ಪತ್ರೆಗೆ ಕಳಿಸಲಾಗಿದ್ದು ಪಾಸಿಟಿವ್ ಪ್ರಕರಣ ಕಾಸಿಕೊಂಡ ಗ್ರಾಮ ಮತ್ತು ಏರಿಯಾಗಳನ್ನು ಸೀಲ್​ಡೌನ್ ಮಾಡಲಾಗುತ್ತಿದ್ದು, ಗ್ರಾಮೀಣ ಭಾಗದ ಜನರಲ್ಲಿ ಆತಂಕ ಮೂಡಿಸುತ್ತಿದೆ.

Comments are closed.