ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹಾಸಿಗೆಗಳ ಕೊರತೆ ಎದುರಾಗಬಹುದೆಂಬ ಆತಂಕಕಾರಿ ಸೂಚನೆ ಬಂದಿದ್ದು, ಕೊರೋನಾ ರೋಗಿಗಳು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಪಡೆಯಲು ಕಷ್ಟಪಡುವಂತಾಗಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಪರಿಸ್ಥಿತಿಯ ಭೀಕರತೆಯನ್ನು ವಿವರಿಸಿದ ರಶ್ಮಿ (ಹೆಸರು ಬದಲಾಯಿಸಲಾಗಿದೆ) ಜ್ವರದಿಂದ ಬಳುತ್ತಿದ್ದ ತಮ್ಮ ಪತಿಯನ್ನು ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಎಂಬುದು ಬುಧವಾರ ಬೆಳಗ್ಗೆ 9 ಗಂಟೆಗೆ ಗೊತ್ತಾಯಿತು. ಆದರೆ, ಬಿಬಿಎಂಪಿ ಅಥವಾ ಆರೋಗ್ಯ ಅಧಿಕಾರಿಗಳು ಯಾರೂ ಕೂಡಾ ಕರೆ ಸ್ವಿಕರಿಸಲಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ಪದೇ ಪದೇ ಸುಮಾರು ಮಧ್ಯಾಹ್ನ 12-30 ಗಂಟೆಯವರೆಗೂ ಕರೆ ಮಾಡಿದ್ದೇವು.ಕೆಲವರು ಹಾಸಿಗೆ ಇಲ್ಲ ಅಂದ್ರೆ, ಮತ್ತೆ ಕೆಲವರು ವಿಮೆ ಇದೆಯೇ ಎಂದು ಕೇಳಿದರು. ಸರ್ಕಾರಿ ಆಸ್ಪತ್ರೆಯಿಂದ ನಮ್ಮ ಕರೆ ಸ್ವೀಕರಿಸಲಿಲ್ಲ. ಮನೆಯಲ್ಲಿ 75 ವರ್ಷದ ತಂದೆ ಇದ್ದು ತುಂಬಾ ಭಯವಾಗುತ್ತಿದೆ ಎಂದು ತಮ್ಮ ಸಂಕಷ್ಟ ತೋಡಿಕೊಂಡರು.
ಮತ್ತೋರ್ವ ಕೋವಿಡ್-19 ರೋಗಿಯ ಸಂಬಂಧಿಕರು ಮಾತನಾಡಿ, 56 ವರ್ಷದ ತಮ್ಮ ತಂದೆಗೆ ಪಾಸಿಟಿವ್ ಇರುವುದು ಬುಧವಾರ ದೃಢಪಟ್ಟಿತ್ತು. ಆರೋಗ್ಯ ಇಲಾಖೆ ನೀಡಿರುವ ಖಾಸಗಿ ಆಸ್ಪತ್ರೆಗಳಿಗೆ ಕರೆ ಮಾಡಿದೇವು. ಆದರೆ, ಈವರೆಗೂ ಕೋವಿಡ್-19 ಚಿಕಿತ್ಸೆ ಆರಂಭಿಸಿಲ್ಲ ಎಂದು ಹೇಳಿದರು. ಸರ್ಕಾರಿ ಆಸ್ಪತ್ರೆಗೆ ಕರೆ ಮಾಡಿದರೆ ಚಿಕಿತ್ಸೆಗೆ ದಾಖಲು ಮಾಡುವಂತೆ ಹೇಳಿದರು.ನಂತರ ಮೂರು ಗಂಟೆ ಬಿಟ್ಟು ಮಾಡಿದರೆ ಯಾರು ಕೂಡಾ ಸ್ಪಂದಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಇಬ್ಬರು ರೋಗಿಗಳ ಮಾಹಿತಿಯನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಆರೋಗ್ಯ ಇಲಾಖೆಗೆ ತಿಳಿಸಿದಾಗಲೂ ಯಾರು ಕೂಡಾ ಅವರನ್ನು ಸಂಪರ್ಕಿಸಿಲ್ಲ. ಅಂತಿಮವಾಗಿ ವೈಯಕ್ತಿಕ ಸಂಪರ್ಕದಿಂದ ಇಬ್ಬರನ್ನು ಬೇರೆ ಬೇರೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಈ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಹಾಗೂ ವೈದ್ಯಕೀಯ ಸಚಿವ ಕೆ. ಸುಧಾಕರ್ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ ಅವರು ಪ್ರತ್ರಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳು ಸೋಂಕು ಲಕ್ಷಣವಿಲ್ಲದ ರೋಗಿಗಳಿಂದ ತುಂಬಿವೆ. ಕೋವಿಡ್ ಕೇರ್ ಸೆಂಟರ್ ಗಳನ್ನು ಬಿಬಿಎಂಪಿ ತೆರೆದಿದೆ. ಈ ಸಮಸ್ಯೆಯನ್ನು ಒಂದೆರಡು ದಿನಗಳಲ್ಲಿ ಬಗೆಹರಿಸುತ್ತೇನೆ. ಹಾಸಿಗೆಗಳ ಕೊರತೆ ಇಲ್ಲ, ಹಜ್ ಭವನ ಮತ್ತಿತರ ಕಟ್ಟಡಗಳನ್ನು ಕೋವಿಡ್-ಕೇರ್ ಸೆಂಟರ್ ಗಳಾಗಿ ಪರಿವರ್ತಿಸಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಹೇಳಿದ್ದಾರೆ.
Comments are closed.