ಬೆಂಗಳೂರು (ಜೂನ್ 25); ರಾಜಧಾನಿ ಬೆಂಗಳೂರಿನಲ್ಲಿ ಇಂದು ವರುಣ ಅಬ್ಬರಿಸುತ್ತಿದ್ದಾನೆ. ಸಂಜೆ ವೇಳೆಗೆ ಆರಂಭವಾದ ವರುಣನ ಆರ್ಭಟಕ್ಕೆ ಇಡೀ ನಗರ ತೋಯ್ದು ತೊಪ್ಪೆಯಾಗಿದೆ. ಧಾರಾಕಾರವಾಗಿ ಸುರಿದ ಮಳೆಗೆ ಚರಂಡಿ ನೀರು ರಸ್ತೆಗಳಲ್ಲಿ ತುಂಬಿ ಹರಿದರೆ, ಮನೆಗೆ ತೆರಳಿದ್ದವರು ಮಳೆಯ ಕಾರಣದಿಂದಾಗಿ ಅಲ್ಲಲ್ಲೆ ಸಿಲುಕಿಕೊಂಡು ಪರದಾಡುವಂತಾಗಿದೆ.
ಗುಡುಗು ಮಿಂಚಿನ ಜೊತೆ 4.30ರ ಸುಮಾರಿಗೆ ಆರಂಭವಾದ ಮಳೆ ಧಾರಾಕಾರವಾಗಿ ಸುರಿದಿದೆ. ಗಿರಿನಗರ, ನಾಗೇಂದ್ರ ಬ್ಲಾಕ್, ಹೊಸಕೆರೆ ಹಳ್ಳಿ, ಇಂದಿರಾ ನಗರ, ಚಾಮರಾಜ ಪೇಟೆ, ಶ್ರೀರಾಂಪುರ, ರಾಜಾಜಿ ನಗರ, ವಿಜಯ ನಗರ, ಆರ್ ಆರ್ ನಗರ, ಮೆಜೆಸ್ಟಿಕ್,ಕೆ ಆರ್ ಸರ್ಕಲ್, ಶಿವಾಜಿನಗರದೆಲ್ಲೆಡೆ ಮಳೆ ತನ್ನ ರೌದ್ರ ನರ್ತನ ತೋರಿದೆ.
Comments are closed.