ಬೆಂಗಳೂರು(ಜೂ.20): ಕೊರೋನಾ ಸಂಕಷ್ಟದಲ್ಲಿ ಪ್ರಿಸ್ಕೂಲ್ಗಳಿವೆ. ಎಲ್ಲವೂ ಅಂದುಕೊಂಡಂತಾದರೆ ಹಲವು ಮಾರ್ಗದರ್ಶನದ ನಡುವೆ ಕೆಲ ತಿಂಗಳುಗಳ ನಂತರ ಶಾಲಾ-ಕಾಲೇಜು ಆರಂಭವಾಗಬಹುದು. ಆದರೆ ಕೊರೋನಾ ಗುಮ್ಮದಿಂದಾಗಿ ಈ ವರ್ಷ ಪುಟ್ಟ ಮಕ್ಕಳ ಶಾಲೆಗಳು ತೆರೆಯೋದು ಕಷ್ಟಸಾಧ್ಯ. ಇದನ್ನೇ ನಂಬಿದ ಪ್ರಿಸ್ಕೂಲ್ ಸಿಬ್ಬಂದಿ ಸಂಬಳ ಸಿಗದೆ ಸಂಕಷ್ಟದಲ್ಲಿದ್ದರೆ, ಇದರ ಮಾಲೀಕರು ಸ್ಕೂಲ್ ನಡೆಸದೆ ಮಾರಾಟಕ್ಕೆ ಮುಂದಾಗಿದ್ದಾರೆ.
ದಿನೇ ದಿನೇ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಬೆಂಗಳೂರಿನಲ್ಲಿ ಪಾಸಿಟಿವ್ ಸಂಖ್ಯೆ ಇನ್ನೂ ಹೆಚ್ಚಿ ಸೀಲ್ಡೌನ್ ಪ್ರದೇಶ ಇನ್ನಷ್ಟು ಹೆಚ್ಚಾಗುತ್ತಿರುವುದು ಆತಂಕ ಮನೆಮಾಡಿದೆ. ಇದರಿಂದಾಗಿ ಕಳೆದೆರಡು ತಿಂಗಳಿನಿಂದ ನರ್ಸರಿ, ಎಲ್ ಕೆ ಜಿ, ಯುಕೆಜಿ ಮಕ್ಕಳ ಶಾಲೆಗಳು ಬಂದ್ ಇವೆ. ಮುಂದಿನ ನಾಲ್ಕು ತಿಂಗಳಿನಲ್ಲಿ ಹೈಸ್ಕೂಲ್, ಕಾಲೇಜು ತೆರೆದರೂ ಪ್ರೀ ಕಾಲೇಜು ಡೌಟ್. ಕಳೆದೆರಡು ತಿಂಗಳಿನಿಂದ ಪ್ರಿ ಸ್ಕೂಲ್ ತೆರೆದಿಲ್ಲ. ಇನ್ನೆರಡು ತಿಂಗಳು ಪ್ರಿ ಸ್ಕೂಲ್ ತೆರೆಯುವುದಿಲ್ಲ.
ಒಂದು ವೇಳೆ ಸರ್ಕಾರ ಮುಂದೆ ಅನುಮತಿ ನೀಡಿದರೂ ಪೋಷಕರು ತಮ್ಮ ಪುಟ್ಟ ಮಕ್ಕಳನ್ನು ಈ ವರ್ಷ ಪ್ರಿಸ್ಕೂಲ್ ಕಳುಹಿಸಲು ಮನಸು ಮಾಡುವುದಿಲ್ಲ. ಅದರಿಂದ ಈ ವರುಷ ಪ್ರೀ ಸ್ಕೂಲ್ ತೆರೆಯುವುದೇ ಅನುಮಾನ! ಹಾಗಾದ್ರೆ ಪ್ರಿಸ್ಕೂಲ್ ನಡೆಸುವವರ ಕತೆಯೇನು? ಬೆಂಗಳೂರಿನಲ್ಲಿಯೇ 8 ಸಾವಿರಕ್ಕೂ ಹೆಚ್ಚು ಪ್ರಿ ಸ್ಕೂಲ್ ಗಳಿವೆ. ಐನೂರಕ್ಕೂ ಹೆಚ್ಚು ಪ್ರಿ ಸ್ಕೂಲ್ಗಳು ಶಾಶ್ವತವಾಗಿ ಈಗಾಗಲೇ ಮುಚ್ಚಿವೆ.
ಇನ್ನೂ ಐನೂರಕ್ಕೂ ಹೆಚ್ಚು ಶಾಲೆ ಮಾರಾಟದ ಹಂತಕ್ಕೆ ಬಂದು ತಲುಪಿವೆ. ಲಕ್ಷ ಲಕ್ಷ ಬಂಡವಾಳ ಹೂಡಿ ಶುರು ಮಾಡಿದವರಿಗೆ ಸಂಕಷ್ಟ ಶುರುವಾಗಿದೆ. ಇಂತಹ ಪ್ರಿಶಾಲೆಗಳನ್ನು ನಂಬಿದ ಸಿಬ್ಬಂದಿಗೆ ಸಂಬಳ ಸಿಗುತ್ತಿಲ್ಲ. ಎರಡು ಲಕ್ಷಕ್ಕೂ ಹೆಚ್ಚು ಶಿಕ್ಷಕರು, ಆಯ, ಸಹಾಯಕರು, ಚಾಲಕರು, ಕಂಗಾಲಾಗಿದ್ದಾರೆ. ಬಾಡಿಗೆ ಕಟ್ಟಡ, ಖರ್ಚು ಸಂಭಾಳಿಸುವುದು ಇನ್ನಷ್ಟು ಕಷ್ಟವಾಗಿದೆ.
ಬೆಂಗಳೂರಿನ ಪದ್ಮನಾಭನಗರದಲ್ಲಿ ಈ ವರುಷ ಶುರುಮಾಡಿದ ಪ್ರಿ ಸ್ಕೂಲ್ ಇನ್ನೂ ತೆರೆಯಲಾಗುತ್ತಿಲ್ಲ. ಹತ್ತಾರು ವರುಷ ರನ್ ಮಾಡಿದ ನಾಗರಬಾವಿ ಪ್ರಿ ಸ್ಕೂಲ್‌ನವರಿಗೆ ಈ ವರುಷ ಮ್ಯಾನೇಜ್ ಮಾಡಲಾಗುತ್ತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡ ವಿಜಯನಗರದಲ್ಲಿ ಪ್ರಿ ಸ್ಕೂಲ್ ಶುರು ಮಾಡಿದವರು ಈಗ ತೆರೆಯುವುದು ಕಷ್ಟಸಾಧ್ಯವಾಗಿದೆ. ಬಹಳ ಆಸಕ್ತಿಯಿಂದ ಈ ವರುಷವಷ್ಟೇ ಜನವರಿ ಆರಂಭದಲ್ಲಿ ಪದ್ಮನಾಭನಗರದಲ್ಲಿ ರನ್ ಮಾಡುತ್ತಿದ್ದ ಪ್ರಿ ಸ್ಕೂಲ್ ಲಕ್ಷಾಂತರ ರೂಪಾಯಿ ಕೊಟ್ಟು ಶ್ರೀವಿದ್ಯಾ ಖರೀದಿಸಿದ್ದರು. ಸಾಕಷ್ಟು ಮಹತ್ವಾಕಾಂಕ್ಷೆಯಿಂದ ಶುರುಮಾಡಬೇಕು ಎನ್ನುವಷ್ಟರಲ್ಲಿ ಕೊರೋನಾ ಲಾಕ್ ಡೌನ್ ನಮ್ಮನ್ನು ಕಂಗೆಡಿಸಿದೆ. ಮೊದಲ ವರುಷವೇ ಹೀಗಾದ್ರೆ ನಾವು ಏನು ಮಾಡಬೇಕೆಂದೇ ತಿಳಿಯುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಮೂರು ವರುಷದಲ್ಲಿ ಸಾಕಷ್ಟು ವಿನೂತನ ರೀತಿ ಪ್ರೀ ಸ್ಕೂಲ್ ಆರಂಭಿಸಲಾಗಿತ್ತು. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ರೆಡಿಯಾಗಿದ್ದರು. ಆದರೆ ಕೊರೋನಾ ಲಾಕ್ ಡೌನ್ ಮಹಿಳಾ ಸಬಲೀಕರಣದ ದಿಕ್ಕನ್ನೇ ಬದಲಿಸಿಬಿಟ್ಟಿದೆ. ಇಂಥ ಸಣ್ಣಪುಟ್ಟ ಶಾಲೆಗಳನ್ನೇ ನಂಬಿದ್ದ ನಮಗೆ ಕೊರೊನಾ ಲಾಕ್ ಡೌನ್ ದಿಂದಾಗಿ ಮಾರುವ ಪರಿಸ್ಥಿತಿ ತಂದುಬಿಟ್ಟಿದೆ. ಸರ್ಕಾರ ನಮಗೆ ಅನುಕೂಲ ಮಾಡಲಿ ಎಂದು ವಿಜಯನಗರದಲ್ಲಿ ಪ್ರೀ ಸ್ಕೂಲ್ ನಡೆಸುವ ವಿಜಯಲಕ್ಷ್ಮಿ ಮನವಿ ಮಾಡಿಕೊಳ್ಳುತ್ತಾರೆ.ಮುಂಗಡ ಫೀಸು ಕಟ್ಟಿದವರ ಕತೆಯೇನು? ಈಗಾಗಲೇ ಪ್ರೀ ಸ್ಕೂಲ್ ಗೆ ಫೀಸು ಕಟ್ಟಿದ ಪೋಷಕರ ಕತೆಯೇನು? ಫೀಸು ಪಡೆದ ಪ್ರಿ ಸ್ಕೂಲ್ ಮಾಲಿಕರು ಏನು ಮಾಡಬೇಕು? ಎಂಬ ಪ್ರಶ್ನೆಗೆ ಪ್ರಿ ಸ್ಕೂಲ್ ಮಾಲಿಕರ ಬಳಿ ಸಮರ್ಪಕ ಉತ್ತರವಿಲ್ಲ. ಈ ವರುಷದ ಶೈಕ್ಷಣಿಕ ಶಿಕ್ಷಣಕ್ಕೆ ಕಳೆದ ವರುಷ ಡಿಸೆಂಬರ್, ಜನವರಿಯಲ್ಲಿ ನೋಂದಣಿ ಫೀಸು ಕಟ್ಟಿಸಿಕೊಂಡಿದ್ದಾರೆ.
ಬೆಂಗಳೂರಿನ ಪ್ರತಿಷ್ಟಿತ ಪ್ರಿ ಸ್ಕೂಲ್ ಗಳು ಶೇ.40ರಷ್ಟು ಕಟ್ಟಿಸಿಕೊಂಡಿವೆ ಎಂಬ ಮಾಹಿತಿಯಿದೆ. ಕೆಲವರು ಫೀಸು ವಾಪಾಸ್ ಕೊಟ್ಟರೆ, ಇನ್ನು ಕೆಲವರು ಫೀಸು ಕೊಡಲು ಆಗುತ್ತಿಲ್ಲ. ಪೋಷಕರು ಧೈರ್ಯವಾಗಿ ಫೀಸು ಕೊಡಿ ಎಂದು ಕೇಳಲಾಗುತ್ತಿಲ್ಲ. ಹೆಚ್ಚಿನ ಫೀಸು ಸುಲಿಗೆ ಮಾಡಬೇಡಿ ಎಂದು ಸರ್ಕಾರ ಖಡಕ್ ಸೂಚನೆ ನೀಡಿದೆ. ಸದ್ಯ ಆನ್ ಲೈನ್ ಎಜುಕೇಷನ್ ಮಾಡಬೇಡಿ ಎಂದು ಹೇಳಿದೆ. ಆಫ್ ಲೈನ್ ಎಜುಕೇಷನ್ ಪುಟ್ಟ ಮಕ್ಕಳಿಗೆ ಸರಿ ಹೊಂದುವುದಿಲ್ಲ. ಇಂಥ ಸಂಕಷ್ಟದಲ್ಲಿ ಶಾಲೆಗಳು ಸ್ವೀಕರಿಸಿದ ಫೀಸು ಕೊಡಬೇಕೇ? ಕೊಡಬಾರದೇ ಮುಂದಿನ ವರುಷಕ್ಕೆ ಇದೇ ಫೀಸು ಬಳಸಬಹುದೇ? ಈ ಗೊಂದಲಗಳಿಗೆ ಸರ್ಕಾರ ಸೂಚನೆ ನೀಡಬೇಕಿದೆ.
Comments are closed.