ಕರ್ನಾಟಕ

ಜುಲೈ ಮೊದಲ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ: ಸುರೇಶ್ ಕುಮಾರ್

Pinterest LinkedIn Tumblr


ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಜುಲೈ ಮೊದಲ ವಾರದಲ್ಲಿ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಬಾಕಿ ಇರುವ ವಿಷಯಗಳ ಮೌಲ್ಯಮಾಪನಕ್ಕಾಗಿ ಎಲ್ಲ ಮೌಲ್ಯಮಾಪಕರು ಆಗಮಿಸುವಂತೆ ಸುರೇಶ್ ಕುಮಾರ್ ಮನವಿ ಮಾಡಿದ್ದಾರೆ. 39 ವಿಷಯಗಳ ಪೈಕಿ, 26 ಸಬ್ಜೆಕ್ಟ್ ಮಾಲ್ಯಮಾಪನ ಮುಗಿದಿದೆ, 9 ವಿಷಯಗಳ ತಿದ್ದುಪಡಿ ಕೊನೆಯ ಹಂತದಲ್ಲಿದೆ, ಭೌತಶಾಸ್ತ್ರ, ರಸಾಯನಶಾಸ್ತ್ರ ಗಣಿತ, ಕಂಪ್ಯೂಟರ್ ಸೈನ್ಸ್, ಸಂಖ್ಯಾ ಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲೀಷ್ ಪತ್ರಿಕೆಗಳ ಮೌಲ್ಯಮಾಪನ ಬಾಕಿ ಉಳಿದಿದೆ.

ಇಂಗ್ಲೀಷ್ ಭಾಷೆಯ ಮೌಲ್ಯಮಾಪನ 20 ಜಿಲ್ಲೆಗಳಲ್ಲಿ ನಡೆಸಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. ಮೌಲ್ಯ ಮಾಪನಕ್ಕಾಗಿ ನೀಡುವ ಗೌರವ ಧನವನ್ನು ಹಿಂದಿನ ವರ್ಷಗಳಂತೆ ತಡ ಮಾಡದೇ ಶೀಘ್ರವಾಗಿ ನೀಡಲಾಗುವುದು . ಮೊದಲ ಹಂತದ ಗೌರವ ಧನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

Comments are closed.