ಬೆಂಗಳೂರು(ಜೂನ್ 13): ಜಾಗತಿಕವಾಗಿ ಕಚ್ಛಾ ತೈಲ ಬೆಲೆ ಇಳಿಕೆಯಾಗುತ್ತಿದ್ದರೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುತ್ತಲೇ ಇದೆ. ಸತತ ಏಳನೇ ದಿನವೂ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಶನಿವಾರ ಪೆಟ್ರೋಲ್ ಲೀಟರ್ಗೆ 59-61 ಪೈಸೆ ತುಟ್ಟಿಯಾಗಿದೆ. ಹಾಗೇ ಡೀಸೆಲ್ ಬೆಲೆ ಕೂಡ 50-60 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಐಒಸಿಎಲ್ನ ಪೆಟ್ರೋಲ್ ಬೆಲೆ ಲೀಟರ್ಗೆ 77.59 ರೂ ತಲುಪಿದೆ. ಡೀಸೆಲ್ ಬೆಲೆ 69.78 ರೂಪಾಯಿ ಮುಟ್ಟಿದೆ.
ಪೆಟ್ರೋಲ್ ಬೆಲೆ ಕಳೆದ ಒಂದು ವಾರದಲ್ಲಿ 4.11 ರೂಪಾಯಿಯಷ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ. ಡೀಸೆಲ್ ಬೆಲೆ ಕೂಡ ಒಂದು ವಾರದಲ್ಲಿ 4 ರೂಪಾಯಿಯಷ್ಟು ಹೆಚ್ಚು ತುಟ್ಟಿಯಾಗಿದೆ.
ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು (ಐಒಸಿಎಲ್ ದರ):
ಬೆಂಗಳೂರು: ರೂ 77.59, 69.78
ನವದೆಹಲಿ: ರೂ 75.16, 73.39
ಮುಂಬೈ: 82.10, 72.03
ಚೆನ್ನೈ: 78.99, 71.64ಕೋಲ್ಕತಾ: 77.05, 69.23
ಹೈದರಾಬಾದ್: 78.03, 71.73
Comments are closed.