ಕರ್ನಾಟಕ

ಕಾಂಗ್ರೆಸ್ ನಿಂದ ದೂರ ಸರಿದವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನಕ್ಕೆ ಚಾಲನೆ ನೀಡಿದ ಡಿ.ಕೆ.ಶಿವಕುಮಾರ್

Pinterest LinkedIn Tumblr

ಬೆಂಗಳೂರು: ಪಕ್ಷಸಂಘಟನೆ ಬಲಗೊಳಿಸಲು ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ನಿಂದ ದೂರ ಸರಿದವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನಕ್ಕೆ ಚಾಲನೆ ನೀಡಿದ್ದಾರೆ.

ಈ ನಿಟ್ಟಿನಲ್ಲಿ ಅಭಿಪ್ರಾಯ ಸಂಗ್ರಹಿಸಲು ಸಮಿತಿ ರಚಿಸಿದ್ದು, ಮತ್ತೆ ಕಾಂಗ್ರೆಸ್ ನ ಗತ ವೈಭವವನ್ನು ಮರಳಿ ತರಲು ಕಾರ್ಯಯೋಜನೆ ರೂಪಿಸುತ್ತಿದ್ದಾರೆ.

ವಿವಿಧ ಪಕ್ಷಗಳಿಗೆ ಸೇರಿರುವ, ಕಾಂಗ್ರೆಸ್ ಬಿಟ್ಟು ಹೋಗಿದ್ದ ಮತ್ತಿತರ ಆಸಕ್ತ ಮುಖಂಡರು ಕಾಂಗ್ರೆಸ್ ಪಕ್ಷ ಸೇರಲು ಬಯಸಿದರೆ, ಅವರುಗಳನ್ನು ಸಂಪರ್ಕಿಸಿ ಅವರ ಅಭಿಪ್ರಾಯ ಪಡೆದು ಪಕ್ಷ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಸಲುವಾಗಿ ವರದಿ ನೀಡುವಂತೆ ಸಮಿತಿಗೆ ಸೂಚಿಸಿದ್ದಾರೆ.

ಕೆಪಿಸಿಸಿ ಸಂಚಾಲಕ ಅಲ್ಲಂ ವೀರಭದ್ರಪ್ಪ, ಮುಖಂಡರಾದ ಬಿ.ಎ, ಹಸನಬ್ಬ, ಶಾಸಕ ಅಜಯ್ ಕುಮಾರ್ ಸರ್ ನಾಯಕ್, ಮಾಜಿ ಶಾಸಕರಾದ ವಿ.ಮುನಿಯಪ್ಪ, ಅಭಯಚಂದ್ರ ಜೈನ್ , ಮಾಜಿ ಸಂಸದರಾದ ಆರ್ . ಧ್ರುವನಾರಾಯಣ , ಬಿ.ಎನ್.ಚಂದ್ರಪ್ಪ, ವಿ . ವೈ . ಘೋರ್ಪಡೆ , ಮಾಜಿ ಪ್ರಧಾನ ಕಾರ್ಯದರ್ಶಿ ಸಂಪತ್ ರಾಜ್ , ಮಾಜಿ ಮೇಯರ್ ಸತೀಶ್ ಶೆಲ್ , ಮಾಜಿ ಶಾಸಕಿ ಕೃಪಾ ಆಳ್ವ, ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಪ್ರಫುಲ್ಲಾ ಮಧುಕರ್ ಸಮಿತಿ ಸದಸ್ಯರಾಗಿದ್ದಾರೆ.

Comments are closed.