ಕರ್ನಾಟಕ

ಬಿಜೆಪಿ ಅಧಿಕಾರಕ್ಕೇರಲು 17 ಜನ ಕಾರಣ; ನಾವೇ ನಿಜವಾದ ಕೊರೋನಾ ವಾರಿಯರ್ಸ್- ಎಚ್​​. ವಿಶ್ವನಾಥ್​​

Pinterest LinkedIn Tumblr


ಬೆಂಗಳೂರು(ಜೂ.03): ಮಾರಕ ಕೊರೋನಾ ವೈರಸ್​​ ವಕ್ಕರಿಸಿದ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ನೇತೃತ್ವದ ಭಾರತೀಯ ಜನತಾ ಪಕ್ಷ ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಹೆಚ್ ವಿಶ್ವನಾಥ್​​ ಹೇಳಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಈ ಸಮಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಸರ್ಕಾರ ಇದ್ದಿದ್ದರೆ ಕನಿಷ್ಢ ಪಕ್ಷ 50 ಸಾವಿರ ಜನ ಸಾಯುತ್ತಿದ್ದರು. ಆದರೀಗ ಬಿಜೆಪಿ ಸರ್ಕಾರ ಇರುವುದರಿಂದ ಕೊರೋನಾ ವೈರಸ್​​ ಭಾರೀ ತಹಬದಿಗೆ ಬಂದಿದೆ ಎಂದರು.

ಇನ್ನು, ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿಯವರಿಗೆ ಯಾರೋ ಬಂದು ಕೊರೋನಾ ಬಂದಿದೆ ಸರ್ ಅಂದಿದ್ದರೆ, ಹೌದು ಬ್ರದರ್ ಕೊರೋನಾ ಬಂದಿದ್ದಳು ನೋಡಿದೆ ಎನ್ನುತ್ತಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರೇ ಯಾವ ಕೊರೋನಾನೂ ಇಲ್ಲ ನಡೀರಿ ಎಂದು ಗದರುತ್ತಿದ್ದರು. ಆದರೀಗ, ದೈವ ಭಕ್ತ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಹೀಗಾಗಿಯೇ ಸರ್ಕಾರ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ ಕಾರಣ ಕೊರೋನಾ ವೈರಸ್​ ನಿಯಂತ್ರಣದಲ್ಲಿದೆ ಎಂದರು ವಿಶ್ವನಾಥ್​​.

ನಾವು 17 ಜನ ಮೈತ್ರಿ ಸರ್ಕಾರ ಬೀಳಿಸಿ ಬಂದಿದ್ದಕ್ಕೆ ಬಿಜೆಪಿ ಸರ್ಕಾರ ರಚನೆಯಾಗಲು ಸಾಧ್ಯವಾಗಿದೆ. ಬಿಜೆಪಿ ಸರ್ಕಾರ ತರಲು ಶ್ರಮಿಸಿದ್ದೇವೆ. ನಾವೇ ನಿವಾದ ಕೊರೋನಾ ವಾರಿಯರ್ಸ್​, ಅದಕ್ಕಾಗಿ ರಾಜ್ಯದ ಜನರು ನಮ್ಮನ್ನ ಅಭಿನಂದಿಸಬೇಕು ಎಂದು ವಿಶ್ವನಾಥ್​​ ಹೇಳಿದ್ದಾರೆ.

ಹೀಗೆ ಮುಂದುವರಿದ ಅವರು, ವಿಧಾನ ಪರಿಷತ್ ಸ್ಥಾನ ಸಿಗುವ ಬಗ್ಗೆ ಮಾತನಾಡಿದರು. ನಾವು ಅಧಿಕಾರ ತ್ಯಜಿಸಿ ಅಧಿಕಾರಕ್ಕಾಗಿ ಬಿಜೆಪಿಗೆ ಬಂದಿಲ್ಲ. ಆದರೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಏಕೈಕ ನಾಯಕನಿದ್ದರೆ ಅದು ಯಡಿಯೂರಪ್ಪ ಮಾತ್ರ. ಹಾಗಾಗಿ ಅವರು ಮಾತು ಕೊಟ್ಟಿದ್ದಾರೆ. ಅಷ್ಟಕ್ಕೂ ಇನ್ನೂ ಪರಿಷತ್ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಿಲ್ಲ. ಚುನಾವಣಾ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಹೇಳಿ ಜಾರಿಕೊಂಡರು.

ಖಾಸಗಿ ಶಾಲಾ ಸಂಸ್ಥೆಗಳುು ಶಾಲೆಗಳು ಆರಂಭ ಮಾಡುವುದಕ್ಕೆ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಹಾಗಿರುವಾಗಲೇ ಶಾಲಾ ಫೀಸ್​ ವಸೂಲಿ ಮಾಡುತ್ತಿವೆ ಎಂಬ ಪ್ರಶ್ನೆಗೆ ಖಾಸಗಿ ಶಾಲೆಗಳ ಉದ್ದಟತನ ಸಹಿಸೋಕೆ ಆಗಲ್ಲ ಎಂದು ಪ್ರತಿಕ್ರಿಯಿಸಿದರು. ಕೊರೋನಾ ಸಮಯದಲ್ಲಿ ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ವೇತನ ನೀಡಿದ್ದಾರೆ. ಹಾಗಾಗಿ ಖಾಸಗಿ ಶಾಲೆಗಳು ಈ ವರ್ಷ ಫೀ ವಸೂಲಿ ಮಾಡೋದನ್ನ ಕೈಬಿಡಲಿ ಬಿಡಿ. ಇಲ್ಲವಾದಲ್ಲಿ ಶೇ.50 ಅಥವಾ ಶೇ.30ರಷ್ಟು ಫೀ ಕಡಿಮೆ ಮಾಡಲಿ ಎಂದು ವಿಶ್ವನಾಥ್​​ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಆಗ್ರಹಿಸಿದರು.

ಅವಸರವಾಗಿ ಶಾಲೆಗಳನ್ನು ಆರಂಭಿಸುವುದು ಬೇಡ. ಯಾಕಂದ್ರೆ ಕೊರೋನಾ ಈ ಸಮಯದಲ್ಲಿ ಕೇವಲ ಮಕ್ಕಳು ಮಾತ್ರ ಶಾಲೆಗೆ ಬರಲ್ಲ. ಮಕ್ಕಳು, ಮಕ್ಕಳ ಜೊತೆಗೆ ಪೋಷಕರು, ಶಿಕ್ಷಕರು, ಶಾಲಾ ವಾಹನಗಳು, ಇತರೆ ಸಿಬ್ಬಂದಿಯೂ ಬರುತ್ತಾರೆ. ಮಕ್ಕಳು ಮುಟ್ಟಿ ಮುಟ್ಟಿ ತಮ್ಮ ಸಹಪಾಠಿಗಳನ್ನ ಮಾತನಾಡಿಸುತ್ತಾರೆ. ಆದ್ದರಿಂದ ಈ ಅವಸರದ ನಿರ್ಧಾರ ಬೇಡ ಎಂದು ವಿಶ್ವನಾಥ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Comments are closed.