ಕರ್ನಾಟಕ

ಪಾಸ್’ಪೋರ್ಟ್ ಸೇವಾ ಕೇಂದ್ರಗಳು ಪುನರಾರಂಭ

Pinterest LinkedIn Tumblr


ಬೆಂಗಳೂರು: ಕೊರೋನಾ ಲಾಕ್’ಡೌನ್ ಸಡಿಲಗೊಂಡ ಬೆನ್ನಲ್ಲೇ ನಗರದ ಪಾಸ್’ಪೋರ್ಟ್ ಸೇವಾ ಕೇಂದ್ರಗಳು ತಮ್ಮ ಕಾರ್ಯಗಳನ್ನು ಪುನರಾರಂಭಿಸಿವೆ.

ಕಳೆದ ಎರಡು ತಿಂಗಳುಗಳಂದ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಪಾಸ್’ಪೋರ್ಟ್’ಗಳ ನವೀಕರಣಕ್ಕೆ ಮತ್ತೆ ಚಾಲನೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಪಾಸ್’ಪೋರ್ಟ್’ಗಳ ನವೀಕರಣಕ್ಕಾಗಿ ಲಾಲ್’ಬಾಗ್ ರಸ್ತೆಯಲ್ಲಿರುವ ಪಾಸ್’ಪೋರ್ಟ್ ಸೇವಾ ಕೇಂದ್ರದ ಮುಂದೆ ನೂರಾರು ಜನರು ನೆರೆದಿರುವುದು ಕಂಡು ಬಂದಿತ್ತು.

ಮಾರ್ಚ್ ಅಂತ್ಯದ ವೇಳೆಗೆ ಮತ್ತು ಏಪ್ರಿಲ್ ತಿಂಗಳಲ್ಲಿ ನವೀಕರಣಗೊಳ್ಳಬೇಕಿದ್ದ ಪಾಸ್’ಪೋರ್ಟ್’ದಾರರಿಗೆ ಮೇ.5 ರಂದು ದಿನಾಕಂ ನಿಗದಿ ಮಾಡಲಾಗಿತ್ತು. ಆದರೆ, ಮೇ.17ರವರೆಗೆ ಮತ್ತೆ ಲಾಕ್’ಡೌನ್ ಮುಂದುವರಿದ ಹಿನ್ನೆಲೆಯಲ್ಲಿ ಮೇ.18ಕ್ಕೆ ದಿನಾಂಕ ನಿಗದಿಪಡಿಸಲಾಗಿತ್ತು.

ನವೀಕರಣಗೊಳ್ಳಬೇಕಾಗಿದ್ದ ಪಾಸ್’ಪೋರ್ಟ್ ದಾರರಿಗೆ ಭಾನುವಾಸ ಎಸ್ಎಂಎಸ್ ಹಾಗೂ ದೂರವಾಣಿ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಕೊರೋನಾ ಸೋಂಕು ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ನಿಗದಿತ ಸಮಯ ನೀಡಿ ಒಟ್ಟು 450 ಮಂದಿಯ ಪಾಸ್’ಪೋರ್ಟ್ ಗಳನ್ನು ಮಾತ್ರ ನವೀಕರಣಗೊಳಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಂಗಳೂರು ಮತ್ತು ಹುಬ್ಬಲ್ಳಿ ಹಾಗೂ ಬೆಂಗಳೂರಿನ ಲಾಲ್’ಬಾಗ್ ಹಾಗೂ ಮಾರತಹಳ್ಳಿಯಲ್ಲಿ ಎರಡು ಕೇಂದ್ರ ಸೇರಿದಂತೆ ಒಟ್ಟು ನಾಲ್ಕು ಕೇಂದ್ರಗಳನ್ನಷ್ಟೇ ಪುನರಾರಂಭಿಸಲಾಗಿದೆ. ಹಿಂದೆಯೇ ಕೆಲವರಿಗೆ ದಿನಾಂಕ ಹಾಗೂ ಸಮಯವನ್ನು ನಗದಿ ಮಾಡಿ ಪಾಸ್’ಪೋರ್ಟ್ ನವೀಕರಿಸುವ ಕುರಿತು ಮಾಹಿತಿ ನೀಡಲಾಗಿತ್ತು. ನಾಲ್ಕು ಕಚೇರಿಗಳಲ್ಲಿ ಕೇವಲ ಮೂರನೇ ಒಂದು ಭಾಗದಷ್ಟು ಸಿಬ್ಬಂದಿಗಳ ಸಾಮರ್ಥ್ಯದೊಂದಿಗೆ ಕಾರ್ಯವನ್ನು ಆರಂಭಿಸಿದ್ದೇವೆಂದು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಭಾರತ್ ಕುಮಾರ್ ಕುಥಟಿಯವರು ತಿಳಿಸಿದ್ದಾರೆ.

ಸಾಮಾನ್ಯ ದಿನಗಳಲ್ಲಿ ನಾವು ಲಾಲ್ ಬಾಗ್ ಕಚೇರಿಯಲ್ಲಿ 1,500 ಮಂದಿ ಅರ್ಜಿಗಳನ್ನು ಸ್ವೀಕರಿಸುತ್ತೇವೆ. ಆದರೆ, ಸೋಮವಾರ ಕೇವಲ 450 ಅರ್ಜಿಗಳನ್ನು ಮಾತ್ರ ಸ್ವೀಕರಿಸಿದ್ದೇವೆ. ಮಾರತಹಳ್ಳಿಯಲ್ಲಿ ಕೇವಲ 200 ಅರ್ಜಿಗಳನ್ನಷ್ಟೇ ಸ್ವೀಕರಿಸಿದ್ದೇವೆಂದಿದ್ದಾರೆ.

ರಾಜ್ಯದಲ್ಲಿರುವ ಎಲ್ಲಾ ಕಚೇರಿಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡುವಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆಂದು ತಿಳಿಸಿದ್ದಾರೆ.

Comments are closed.