ಕರ್ನಾಟಕ

ಕಳ್ಳನನ್ನು ಸೆರೆಹಿಡಿದ 15 ಪೊಲೀಸರಿಗೆ ಕ್ವಾರಂಟೈನ್ ಶಿಕ್ಷೆ!

Pinterest LinkedIn Tumblr


ಬೆಂಗಳೂರು: ಕಬ್ಬಿಣ ಕದಿಯುತ್ತಿದ್ದ ಕಳ್ಳನನ್ನು ಕಷ್ಟಪಟ್ಟು ಹಿಡಿದಿದ್ದ ಪೊಲೀಸರಿಗೆ ಇದೀಗ ಕೊರೋನಾ ಭೀತಿ ಶುರವಾಗಿದ್ದು 15 ಪೊಲೀಸರಿಗೆ ಕ್ವಾರಂಟೈನ್ ಮಾಡಲಾಗಿದೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯ ಜೆಜೆ ನಗರದ ನಿವಾಸಿಯೊಬ್ಬನನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಯಾವುದಕ್ಕೂ ಇರಲಿ ಅಂತಾ ಪೊಲೀಸರು ಆತನಿಗೆ ಕೊರೋನಾ ಪರೀಕ್ಷೆ ಮಾಡಿಸಿದ್ದರು.

ಕೊರೋನಾ ಪರೀಕ್ಷೆಯಲ್ಲಿ ಕಳ್ಳನಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಇದೀಗ ಪೊಲೀಸರು ಕೊರೋನಾ ಭೀತಿಗೆ ಒಳಗಾಗಿದ್ದಾರೆ. ಹೀಗಾಗಿ 22 ಪೊಲೀಸರು ಸದ್ಯಕ್ಕೆ ಕ್ವಾರಂಟೈನ್ ಮಾಡಲಾಗಿದೆ.

ಹೆಬ್ಬಗೋಡಿಯ ಲಾರ್ಡ್ಜ್ ವೊಂದರಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

Comments are closed.