ಕರ್ನಾಟಕ

ಯುಎಇನಲ್ಲಿ ಸಮಸ್ಯೆಯಲ್ಲಿರುವ ಕನ್ನಡಿಗರಿಗೆ ಸರ್ಕಾರದಿಂದ ಎಲ್ಲಾ ರೀತಿಯಲ್ಲಿ ಸಹಕಾರ: ಯುಎಇ ಕನ್ನಡಿಗರ ಜೊತೆ ವಿಡಿಯೋ ಸಂವಾದದಲ್ಲಿ ಬಿಎಸ್‌ವೈ ಭರವಸೆ

Pinterest LinkedIn Tumblr

ಬೆಂಗಳೂರು: ಯುಎಇಯಿಂದ ಹಿಂದಿರುಗುವ ಅನಿವಾಸಿ ಕನ್ನಡಿಗರನ್ನು ರಾಜ್ಯಕ್ಕೆ ತರೆತರಲು ರಾಜ್ಯ ಸರಕಾರ ಎಲ್ಲ ವ್ಯವಸ್ಥೆ ಮಾಡಲಿದ್ದು, ಅಲ್ಲಿಂದ ಬರುವ ಎಲ್ಲರೂ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್‍ಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಮಂಗಳವಾರ ಕೋವಿಡ್-19ನಿಂದ ತೊಂದರೆಗೀಡಾದ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ(ಕರ್ನಾಟಕ NRI ಫಾರಂ ಹಾಗು ಕನ್ನಡಿಗರು ದುಬೈ)ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಅಲ್ಲಿಂದ ಆಗಮಿಸುವವರಿಗೆ ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಇರುವ ಹೊಟೇಲ್‍ಗಳಲ್ಲಿ ಕ್ವಾರಂಟೈನ್‍ಗೆ ಈಗಾಗಲೇ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಮಂಗಳೂರಿನಲ್ಲಿಯೂ ಆರೋಗ್ಯ ತಪಾಸಣೆ ಹಾಗೂ ಕ್ವಾರಂಟೈನ್ ಮಾಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಸೌಲಭ್ಯ ಇರುವ ಹೊಟೇಲ್‍ಗಳಲ್ಲಿ ಕ್ವಾರಂಟೈನ್ ಆಗುವ ಇಚ್ಛೆ ಇದ್ದವರು ತಾವೇ ಹಣವನ್ನು ಪಾವತಿಸಿ ಇರಬಹುದು. ತೊಂದರೆಗೆ ಸಿಲುಕಿದ ಕನ್ನಡಿಗರು ಆತಂಕಕ್ಕೆ ಒಳಗಾಗದೆ, ಧೈರ್ಯವಾಗಿ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಸಲಹೆ ಮಾಡಿದರು.

ವೀಸಾ ಅವಧಿ ಮುಗಿದ ನಿರುದ್ಯೋಗಿಗಳು, ರೋಗಿಗಳು ಇತರೆ ಕಾರಣಗಳಿಂದ ವಾಪಸ್ ಬರಲಾಗದೆ ಸಂಕಷ್ಟಕ್ಕೆ ಸಿಲುಕಿರುವವರನ್ನು ತಾಯ್ನಾಡಿಗೆ ಕರೆತರಲು ರಾಜ್ಯ ಸರಕಾರ ಈಗಾಗಲೇ ವ್ಯವಸ್ಥೆ ಮಾಡಿದೆ ಎಂದ ಯಡಿಯೂರಪ್ಪ, ವಿಮಾನ ವ್ಯವಸ್ಥೆ ಮಾಡಲು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದು, ಅನಿವಾಸಿ ಕನ್ನಡಿಗರ ಎಲ್ಲ ಬೇಡಿಕೆಯನ್ನು ಈಡೇರಿಸಲು ಸರಕಾರ ಎಲ್ಲ ಪ್ರಯತ್ನ ಮಾಡಲಿದೆ ಎಂದರು.

ದೃಢ ಮನಸ್ಸಿನಿಂದ ಇರಿ: ಯಡಿಯೂರಪ್ಪ

ಯುಎಇನಲ್ಲಿಯೇ ಉಳಿದುಕೊಂಡಿರುವ ಕನ್ನಡಿಗರು ಯಾವುದೇ ಕಾರಣಕ್ಕೂ ಹತಾಶರಾಗದೆ ದೃಢ ಮನಸ್ಸಿನಿಂದ ಪರಿಸ್ಥಿತಿಯನ್ನು ಎದುರಿಸಬೇಕು. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಕರ್ನಾಟಕದಲ್ಲಿರುವ ತಮ್ಮ ಬಂಧು-ಬಳಗದ ಯೋಗಕ್ಷೇಮ ಸರಕಾರದ ಜವಾಬ್ದಾರಿ ಎಂದು ಯಡಿಯೂರಪ್ಪ ಆತ್ಮವಿಶ್ವಾಸ ಮೂಡಿಸಿದರು.

ಕೊರೋನ ಸೋಂಕು ತಡೆಗೆ ರಾಜ್ಯ ಸರಕಾರ ಶ್ರಮಿಸುತ್ತಿದ್ದು, ಶೀಘ್ರವೇ ಈ ಸಂಕಷ್ಟದಿಂದ ಪಾರಾಗುವ ಆಶಾಭಾವ ಇರಲಿ. ನಿಮಗೆ ಏನೇ ತೊಂದರೆ ಎದುರಾದರೂ ಕೇಂದ್ರ ಸರಕಾರದ ಗಮನ ಸೆಳೆದು ಅದನ್ನು ಪರಿಹರಿಸಲು ಎಲ್ಲ ಪ್ರಯತ್ನ ಮಾಡಲಾಗುವುದು. ಅಂತೆಯೇ ರಾಜ್ಯ ಸರಕಾರ ತನ್ನ ಹಂತದಲ್ಲಿ ಕೈಗೊಳ್ಳಬಹುದಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಯಡಿಯೂರಪ್ಪ ಅಭಯ ನೀಡಿದರು.

ವಿಡಿಯೋ ಸಂವಾದದಲ್ಲಿ ಬಿಎಸ್‌ವೈ ಮುಂದಿಟ್ಟ ಬೇಡಿಕೆಗಳೇನು…?

ಕೊರೊನಾ ಲಾಕ್‌ಡೌನ್ ನಿಂದಾಗಿ ಅಬರ್‌ ದೇಶದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರು ಸಿಎಂ ಬಿಎಸ್‌ವೈ ಮುಂದೆ ಕೆಲವೊಂದು ಬೇಡಿಕೆಗಳನ್ನು ಇಟ್ಟಿದ್ದಾರೆ. ದುಬೈ ನಿಂದ ಬರುವವರಿಗೆ ಕೂಡಲೇ ಪ್ಲೈಟ್ ವ್ಯವಸ್ಥೆ ಮಾಡಬೇಕು. ಅದರಲ್ಲೂ ‌ಮಂಗಳೂರಿಗೆ ಹೆಚ್ಚಿನ ವಿಮಾನದ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈಗಾಗಲೇ ಯು.ಎ.ಇ‌ ನಲ್ಲಿ ಸಾಕಷ್ಟು ಜನ ನಿರುದ್ಯೋಗಿಗಳಾಗಿದ್ದಾರೆ ರಾಜ್ಯಕ್ಕೆ ಬರಲು ಸಾಧ್ಯವಾಗದೇ ಇದ್ದವರಿಗೆ ಆರ್ಥಿಕ ವಾಗಿ ನೆರವಾಗಬೇಕು. ತುಂಬ ಕೆಳವರ್ಗದ ಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಉಚಿತ ಕ್ವಾರಂಟೈನ್ ವ್ಯವಸ್ಥೆ ಮಾಡಬೇಕು ಎಂದು ವಿನಂತಿಸಿದ್ದಾರೆ.

ದುಬೈನಿಂದ ಬರುವವರಿಗೆ ಕೂಡಲೇ ವಿಮಾನ ವ್ಯವಸ್ಥೆ ಮಾಡಬೇಕು. ಅದರಲ್ಲೂ ಮಂಗಳೂರಿಗೆ ಹೆಚ್ಚಿನ ವಿಮಾನ ವ್ಯವಸ್ಥೆ ಕಲ್ಪಿಸಬೇಕು. ಈಗಾಗಲೇ ಯುಎಇನಲ್ಲಿ ಸಾಕಷ್ಟು ಜನ ನಿರುದ್ಯೋಗಿಗಳಾಗಿದ್ದು ರಾಜ್ಯಕ್ಕೆ ಬರಲು ಸಾಧ್ಯವಾಗದೇ ಇದ್ದವರಿಗೆ ಆರ್ಥಿಕ ನೆರವು ನೀಡಬೇಕು. ಕಾರ್ಮಿಕರಿಗೆ ಉಚಿತ ಕ್ವಾರಂಟೈನ್ ವ್ಯವಸ್ಥೆ ಮಾಡಬೇಕು’
-ಅನಿವಾಸಿ ಕನ್ನಡಿಗರು, ಯುಎಇ

ಕೊರೋನ ಸಂಕಷ್ಟದ ಹಿನ್ನೆಲೆಯಲ್ಲಿ ಕುವೈತಿನಲ್ಲಿರುವ ಕನ್ನಡಿಗರು ಸ್ವದೇಶಕ್ಕೆ ಮರಳಲು ವಿಮಾನ ವ್ಯವಸ್ಥೆ ಮಾಡುವಂತೆ ಅಲ್ಲಿನ ಭಾರತೀಯ ಪ್ರವಾಸಿ ಪರಿಷತ್ತಿನ ಅಧ್ಯಕ್ಷ ರಾಜ್ ಭಂಡಾರಿಯವರು ಕೋರಿದ್ದಾರೆ. ಈಗಾಗಲೇ ಈ ಕೆಲಸ ಆರಂಭಗೊಂಡಿದೆ. ಅನಿವಾಸಿ ಕನ್ನಡಿಗರೇ ಚಿಂತಿಸಬೇಡಿ. ನಿಮ್ಮನ್ನು ತಾಯ್ನಾಡಿಗೆ ಮರಳಿ ಕರೆತರುವ ಜವಾಬ್ದಾರಿ ನಮ್ಮದು’
-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ

Comments are closed.