ಕರ್ನಾಟಕ

ರಾಜ್ಯದಲ್ಲಿ ಮೇ 5ರ ನಂತರ ಪಡಿತರ ಧಾನ್ಯ ವಿತರಣೆ

Pinterest LinkedIn Tumblr


ದಾವಣಗೆರೆ: ಬರುವ ಮೇ 5 ರಿಂದ‌ ರಾಜ್ಯಾದ್ಯಂತ ಪಡಿತರ ಧಾನ್ಯ ವಿತರಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ದಾವಣಗೆರೆ ಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಎರಡು ತಿಂಗಳಿನ ಪಡಿತರ ವಿತರಿಸಲಾಗಿದ್ದು ಮುಂದಿನ ತಿಂಗಳ ಪಡಿತರ ಧಾನ್ಯವನ್ನು ಮೇ 5 ರಿಂದ ವಿತರಣೆ ಮಾಡಲಾಗುತ್ತದೆ ಎಂದರು.

ರಾಜ್ಯದಲ್ಲಿ 1.88 ಲಕ್ಷ ಕುಟುಂಬಗಳು ಬಿಪಿಎಲ್ ಪಡಿತರಕ್ಕೆ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 30-35 ಸಾವಿರ ಕುಟುಂಬಗಳಿಗೆ 10 ಕೆಜಿಯಂತೆ ಅಕ್ಕಿಯನ್ನು ಈಗಾಗಲೇ ವಿತರಿಸಲಾಗಿದೆ. ಪಡಿತರ ಅಂಗಡಿಗಳ ಮುಂದೆ ಕಡ್ಡಾಯವಾಗಿ ಆಹಾರಧಾನ್ಯಗಳನ್ನು ಪಡೆಯಬೇಕೆಂದು ಸೂಚನಾ ಫಲಕಗಳನ್ನು ಪ್ರದರ್ಶಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿರುವ 20.72 ಲಕ್ಷ ಎಪಿಎಲ್ ಪಡಿತರದಾರರಲ್ಲಿ ಅದರಲ್ಲಿ 5.50 ಲಕ್ಷ ಕುಟುಂಬಗಳು ಪಡಿತರ ಧಾನ್ಯ ಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಅರ್ಜಿ ಸಲ್ಲಿಸಿದವರ 1‌.25 ಲಕ್ಷ ಕುಟುಂಬಕ್ಕೆ ಪಡಿತರ ವಿತರಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಇನ್ನುಳಿದ 15 ಲಕ್ಷ ಎಪಿಎಲ್ ಪಡಿತರದಾರರಿಗೂ ರಾಜ್ಯ ಸರ್ಕಾರ ಪಡಿತರ ವಿತರಿಸಲು ಮುಂದಾಗಿದೆ ಎಂದು ಮಾಹಿತಿ ನೀಡಿದರು.

ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ರಾಜ್ಯದಲ್ಲಿ 31.50 ಲಕ್ಷ ಅನಿಲ ಸಂಪರ್ಕ ಪಡೆದವರಿದ್ದಾರೆ. ಅವರಿಗೆ ಮೂರು ತಿಂಗಳ ಕಾಲ ಉಚಿತ ಸಿಲೆಂಡರ್ ಕೊಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಈಗಾಗಲೇ ಜಾರಿಗೆ ತಂದಿದೆ. ಅದೇ ರೀತಿ ರಾಜ್ಯದಲ್ಲಿ ಸಿಎಂ ಅನಿಲ ಭಾಗ್ಯ ಯೋಜನೆ 21 ಲಕ್ಷ ಕುಟುಂಬ ಅನಿಲ ಸಂಪರ್ಕವನ್ನು ಪಡೆದಿದ್ದು, ಈ ಕುಟುಂಬಗಳಿಗೂ ಸಹ ಮೊನ್ನೆ ನಡೆದ ಸಂಪುಟ ಸಭೆಯಲ್ಲಿ ಉಚಿತ ಗ್ಯಾಸ್ ಸಿಲೆಂಡರ್ ಕೊಡುವುದಕ್ಕೆ ಸಿಎಂ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದರು.

Comments are closed.