ಕರ್ನಾಟಕ

ಬಾಗಲಕೋಟೆ, ವಿಜಯಪುರ ಜಿಲ್ಲೆಯ ಐವರು ಪೊಲೀಸರಿಗೆ ಕೊರೊನಾ

Pinterest LinkedIn Tumblr
ಬಾಗಲಕೋಟೆ/ವಿಜಯಪುರ: ಅವಳಿ ಜಿಲ್ಲೆಯ ಐವರು ಪೊಲೀಸರು ಕೊರೊನಾ ಬಾಧಿತರಾಗಿದ್ದು, ಸೋಂಕಿನ ಪ್ರಸರಣದಿಂದಾಗಿ ಪೊಲೀಸ್‌ ಸಿಬ್ಬಂದಿಯನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ಠಾಣೆಯ 39 ವರ್ಷದ ಪೇದೆಗೆ ಏಪ್ರಿಲ್‌ 15 ರಂದು ಸೋಂಕು ಪತ್ತೆಯಾಗಿತ್ತು. ಈ ಪೇದೆ ಮದರಸಾ ಕರ್ತವ್ಯದಲ್ಲಿದ್ದಾಗ ಸೋಂಕಿಗೆ ಗುರಿಯಾಗಿದ್ದರು. ಪೇದೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಮುಧೋಳ ಠಾಣೆಯ ಅಧಿಕಾರಿಗಳು, ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿಗಳನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಏಪ್ರಿಲ್‌ 18 ರಂದು ಮತ್ತೆ ಮೂವರು ಪೇದೆಗಳಲ್ಲಿ ಸೋಂಕು ಪತ್ತೆಯಾಗಿದೆ. 32 ವರ್ಷದ ಇಬ್ಬರು ಪೇದೆಗಳು, 43 ವರ್ಷದ ಒಬ್ಬ ಪೇದೆ ಸೋಂಕಿತರಾಗಿದ್ದಾರೆ.
ಏಪ್ರಿಲ್‌ 16 ರಂದು 38 ವಯಸ್ಸಿನ ವಿಜಯಪುರದ ಪೊಲೀಸ್‌ ಪೇದೆಗೆ ಸೋಂಕು ದೃಢಪಟ್ಟಿತ್ತು. ಇವರಿಗೆ ತಂದೆಯಿಂದ ಸೋಂಕು ತಗುಲಿತ್ತು. ಇವರ ಜತೆ ಸಂಪರ್ಕ ಹೊಂದಿದ್ದ ಪೇದೆಗಳ ಮಾಹಿತಿ ಕಲೆ ಹಾಕಲಾಗುತ್ತಿದೆ. ಪಿ-21 ಸೋಂಕಿತ ಮನೆಗೆ ತೆರಳಿದ್ದ ಕಾರಣಕ್ಕೆ ಗೋಳಗುಮ್ಮಟ ಠಾಣೆಯ ಪಿಎಸ್‌ಐ ಹಾಗೂ ಇಬ್ಬರು ಪೇದೆಗಳನ್ನೂ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

Comments are closed.