ಕರ್ನಾಟಕ

ಅನೈತಿಕ ಸಂಬಂಧ; ಯುವಕನ ಬರ್ಬರವಾಗಿ ಹತ್ಯೆ

Pinterest LinkedIn Tumblr

ಚಿಕ್ಕೋಡಿ/ಬೆಳಗಾವಿ: ಅನೈತಿಕ ಸಂಬಂಧ ಹೊಂದಿದ್ದ ಯುವಕನನ್ನ ಕುಡುಗೋಲಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಮಾಡಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ನರಸಿಂಗಪುರ ಗ್ರಾಮದಲ್ಲಿ ನಡೆದಿದೆ.

ನರಸಿಂಗಪೂರ ಗ್ರಾಮದ ನಿವಾಸಿ ಬೀರಪ್ಪ ವಿಠಲ ಕಮತಿ (27) ಕೊಲೆಯಾದ ಯುವಕ. ಬೀರಪ್ಪ ದುಂಡಪ್ಪಾ ಬಡಾಯಿ (35) ಮತ್ತು ಸತ್ತೆಪ್ಪಾ ಸಿದ್ದಪ್ಪಾ ಬಡಾಯಿ (25) ಕೊಲೆ ಮಾಡಿದ್ದು. ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಕೂಡ ಅದೇ ಗ್ರಾಮದವರಾಗಿದ್ದು, ಇವರ ಮನೆಯ ಮಗಳ ಜೊತೆ ಮೃತ ಬೀರಪ್ಪ ಅನೈತಿಕ ಸಂಬಂಧ ಹೊಂದಿದ್ದನು. ಈ ವಿಚಾರ ಗೊತ್ತಾದ ತಕ್ಷಣ ಆರೋಪಿಗಳು ಕೋಪದಿಂದ ಕುಡಗೋಲಿನಿಂದ ಬೀರಪ್ಪನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.