ಕರ್ನಾಟಕ

ಪಾರ್ಶ್ವವಾಯುವಿನಿಂದ ಬೇಸತ್ತು ಬೆನಕನಹಳ್ಳಿ ಸ್ವಾಮೀಜಿ ಆತ್ಮಹತ್ಯೆ

Pinterest LinkedIn Tumblr

ಮೈಸೂರು: ಬೆನಕನಹಳ್ಳಿ ಮಠದ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತಾಗಿ ಇದ್ದ ಎಲ್ಲ ಅನುಮಾನಗಳು ನಿವಾರಣೆಯಾಗಿದೆ.

ಅನಾರೋಗ್ಯದಿಂದ ಬೇಸತ್ತು ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ ಹೇಳಿದ್ದಾರೆ.

ಸ್ವಾಮೀಜಿ ಅವರಿಗೆ ಪಾರ್ಶ್ವವಾಯು ಆಗಿತ್ತು. ಲಿಂಗ ಪೂಜೆ ಮಾಡುವಾಗ ಕೈಗಳು ನಡುಗುತ್ತಿದ್ದವು. ಇದರಿಂದಾಗಿ ಸ್ವಾಮೀಜಿ ಮಾನಸಿಕವಾಗಿ ನೊಂದಿದ್ದರು. ಪೂಜೆ ಮಾಡಲು ಆಗುತ್ತಿಲ್ಲ ಎಂದು ಭಕ್ತರೊಂದಿಗೆ ಹೇಳಿಕೊಂಡಿದ್ದರು ಎಂದು ತಿಳಿಸಿದರು.

ಪಾರ್ಶ್ವವಾಯು ಜತೆಗೆ ಹೊಟ್ಟೆ ನೋವು ಇತ್ತು. ಇದೆಲ್ಲದರ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೇರಾವುದೇ ಬೆಳವಣಿಗೆ ನಡೆದಿಲ್ಲ. ವದಂತಿಗಳಿಗೆ ಕಿವಿಗೊಡುವುದು ಬೇಡ ಎಂದು ತೊಟ್ಟವಾಡಿ ಮಹದೇವಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.

Comments are closed.