ಕರ್ನಾಟಕ

ದೇಶದ್ರೋಹ ಪ್ರಕರಣ: ಮುಖ್ಯ ಶಿಕ್ಷಕಿ, ವಿದ್ಯಾರ್ಥಿ ತಾಯಿಗೆ ಜಾಮೀನು

Pinterest LinkedIn Tumblr


ಬೀದರ್‌: ದೇಶದ್ರೋಹ ಪ್ರಕರಣದಲ್ಲಿ ಶಾಹೀನ್‌ ಶಾಲೆ ಮುಖ್ಯ ಶಿಕ್ಷಕಿ ಮತ್ತು ವಿದ್ಯಾರ್ಥಿಯ ತಾಯಿಗೆ ಬೀದರ್‌ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ.

ಸಿಎಎ ವಿರುದ್ಧ ಆರನೇ ತರಗತಿ ವಿದ್ಯಾರ್ಥಿಗಳು ನಾಟಕ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಶಾಲೆ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಮುಖ್ಯ ಶಿಕ್ಷಕಿ ಮತ್ತು ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದ ವಿದ್ಯಾರ್ಥಿಯ ತಾಯಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರು ವಿದ್ಯಾರ್ಥಿ ತಾಯಿ ನಜ್ಬುನ್ನೀಸಾ ಮತ್ತು ಮುಖ್ಯ ಶಿಕ್ಷಕಿ ಫರೀದಾ ಬೇಗಮ್‌ಗೆ ಜಾಮೀನು ಮಂಜೂರು ಮಾಡಿದ್ದಾರೆ.

ಫೆಬ್ರವರಿ 11ರಂದು ನ್ಯಾಯಾಧೀಶರು ಪ್ರಕರಣದ ವಿಚಾರಣೆ ನಡೆಸಿದ್ದರು. 11 ಜನ ವಕೀಲರ ಜೊತೆ ಹಿರಿಯ ವಕೀಲ ಬಿಟಿ ವೆಂಕಟೇಶ್‌ ಆರೋಪಿಗಳ ಪರವಾಗಿ ವಾದ ಮಂಡಿಸಿದ್ದರು. ವಾದ ವಿವಾದ ಆಲಿಸಿದ್ದ ನ್ಯಾಯಾಲಯ ಫೆಬ್ರವರಿ 14ಕ್ಕೆ ಆದೇಶವನ್ನು ಕಾಯ್ದಿರಿಸಿತ್ತು. ಅದರಂತೆ ತೀರ್ಪು ಹೊರಬಿದ್ದಿದ್ದು ಜಾಮೀನು ನೀಡಲಾಗಿದೆ.

ಇದೇ ವೇಳೆ ಶಾಹೀನ್‌ ಶಾಲೆಯ ಆಡಳಿತ ಮಂಡಳಿಯ ಐವರು ಸದಸ್ಯರ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆ ಫೆಬ್ರವರಿ 17ರಂದು ನಡೆಯಲಿದೆ.

ಇದೇ ಶಾಲೆಗೆ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಜೈಲಿಗೂ ತೆರಳಿ ಅವರು ಆರೋಪಿಗಳನ್ನು ಭೇಟಿಯಾಗಿದ್ದರು.

Comments are closed.