ಕರ್ನಾಟಕ

ಪ್ರಿಯತಮೆಯ ಹತ್ಯೆ ಮಾಡಿ, ಆಕೆಯ ಪತಿಗೆ ಚಾಕು ಇರಿದು ಆತ್ಮಹತ್ಯೆ

Pinterest LinkedIn Tumblr


ಬೆಂಗಳೂರು: ಪ್ರಿಯಕರನೋರ್ವ ತಾನು ಅಕ್ರಮ ಸಂಬಂಧ ಇಟ್ಟಿಕೊಂಡಿದ್ದ ಪ್ರಿಯತಮೆಯನ್ನು ಹತ್ಯೆ ಮಾಡಿ, ಆಕೆಯ ಗಂಡ ಮತ್ತು ಮಗುವಿಗೆ ಗಂಭೀರವಾಗಿ ಹಲ್ಲೆ ಮಾಡಿ ಬಳಿಕ ತಾನೂ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಪೀಣ್ಯ ಸೆಕೆಂಡ್ ಸ್ಟೇಜ್‍ನಲ್ಲಿ ನಡೆದಿದೆ.

ಇಂದು ಬೆಳಗಿನ ಜಾವ ಈ ಘಟನ ನಡಿದಿದ್ದು, ಮಧ್ಯಾಹ್ನ 12 ಗಂಟೆಗೆ ಗೊತ್ತಾಗಿದೆ. ಆರೋಪಿ ಚಿತ್ರದುರ್ಗ ಮೂಲದ ರಂಗಧಾಮಯ್ಯ ಮೊದಲಿಗೆ ತನ್ನ ಪ್ರಿಯತಮೆ ಲಕ್ಷ್ಮಿ (30)ಯನ್ನು ಕೊಲೆ ಮಾಡಿದ್ದಾನೆ. ಬಳಿಕ ಲಕ್ಷ್ಮಿಯ ಪತಿ ಶಿವರಾಜ್ ಮತ್ತು ಮಗಳು ಚೈತ್ರಾಳ ಮೇಲೆ ಚಾಕುವಿನಿಂದ ಗಂಭೀರ ಹಲ್ಲೆ ಮಾಡಿದ್ದಾನೆ. ಗಂಭೀರ ಹಲ್ಲೆಗೊಳಗಾದ ಶಿವರಾಜ್ ಮತ್ತು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೊನೆಯದಾಗಿ ಮಹಡಿ ಮೇಲಿನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಲ್ಲರೆ ವ್ಯಾಪಾರಿಯಾಗಿದ್ದ ಶಿವರಾಜ್ 15 ವರ್ಷಗಳ ಹಿಂದೆ ಲಕ್ಷ್ಮಿಯನ್ನ ವರಿಸಿದ್ದರು. ಇತ್ತೀಚೆಗೆ ಶಿವರಾಜ್‍ಗೆ ಸ್ಟ್ರೋಕ್ ಆಗಿತ್ತು. ಹಾಗಾಗಿ ಲಕ್ಷ್ಮಿ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಈ ವೇಳೆ ಆರೋಪಿಯ ಜೊತೆ ಒಡನಾಟ ಹೊಂದಿದ್ದಳು ಎನ್ನಲಾಗಿದೆ. ಇಂದು ಮಧ್ಯಾಹ್ನ ಲಕ್ಷ್ಮಿ ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್ ಸೂಪರ್ ವೈಸರ್ ರೋಜನ್ ಬಾಗಿಲು ಬಡಿದಾಗ ವಿಷಯ ಗೊತ್ತಾಗಿದೆ.

ಕಳೆದ ಒಂದು ವರ್ಷದ ಹಿಂದೆ ರಂಗಧಾಮಯ್ಯನ ಪತ್ನಿ ತೀರಿ ಹೋಗಿದ್ದು, ಶಿವರಾಜ್ ಮನೆಯವರ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಇತ್ತೀಚೆಗೆ ಲಕ್ಷ್ಮಿ ಜೊತೆ ಮನಸ್ತಾಪ ಹೊಂದ್ದಿದು, ಇದೇ ವಿಚಾರವಾಗಿ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ರಾಜಗೋಪಾಲನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ತನಿಖೆ ನಡೆಸುತ್ತಿದ್ದಾರೆ.

Comments are closed.