ಮನೋರಂಜನೆ

ಸಲ್ಮಾನ್ ಖಾನ್ ಜೊತೆ ರಾಜ್ಯದ ಪೂಜಾ ಹೆಗ್ಡೆಗೆ ಚಾನ್ಸ್

Pinterest LinkedIn Tumblr


ಟಾಲಿವುಡ್‌ನ ಸ್ಟಾರ್ ಹೀರೋಯಿನ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಕರ್ನಾಟಕ ಮೂಲದ ನಟಿ ಪೂಜಾ ಹೆಗ್ಡೆ ಬಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಮೊಹೆಂಜದರೋ, ಹೌಸ್‍ಫುಲ್ 4 ಸಿನಿಮಾಗಳಲ್ಲಿ ಅಭಿನಯಿಸಿರುವ ಪೂಜಾಗೆ ಈಗ ಬಾಲಿವುಡ್‌ನಲ್ಲಿ ಮತ್ತೊಂದು ಭರ್ಜರಿ ಚಾನ್ಸ್ ಸಿಕ್ಕಿದೆ.

ಬಾಲಿವುಡ್ ‘ದಬಾಂಗ್’ ಭಾಯ್ ಸಲ್ಮಾನ್ ಖಾನ್ ಹೀರೋ ಆಗಿರುವ ‘ಕಭಿ ಈದ್ ಕಭಿ ದಿವಾಲಿ’ ಸಿನಿಮಾಗೆ ಹೀರೋಯಿನ್ ಆಗಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ. ಈ ಸಂಗತಿಯನ್ನು ನದಿಯಾಡ್ ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್ (ಎನ್‍ಜಿಇ) ಸಂಸ್ಥೆ ಮಂಗಳವಾರ ಟ್ವಿಟರ್‌ನಲ್ಲಿ ಬಹಿರಂಗಪಡಿಸಿದೆ.

“ಎನ್‍ಜಿಇ ಕುಟುಂಬಕ್ಕೆ ಪೂಜಾ ಹೆಗ್ಡೆ ಅವರನ್ನು ಸ್ವಾಗತಿಸುತ್ತಿದ್ದೇವೆ. ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ಕಭಿ ಈದ್ ಕಭಿ ದಿವಾಲಿ ಸಿನಿಮಾದಲ್ಲಿ ಪೂಜಾ ಹೀರೋಯಿನ್ ಆಗಿ ಅಭಿನಯಿಸುತ್ತಿದ್ದಾರೆ” ಎಂದು ಎನ್‌ಜಿಇಎಫ್ ಟ್ವೀಟ್ ಮಾಡಿದೆ. ಪೂಜಾ ನಟಿಸಿರುವ ಹೌಸ್‌ಫುಲ್ 4 ನಿರ್ದೇಶಿಸಿರುವ ಫರ್ಹಾದ್ ಸಾಮ್ಜಿ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಾಜಿದ್ ನದಿಯಾಡ್ ವಾಲಾ ಅವರ ಕಥೆ ಚಿತ್ರಕ್ಕಿದೆ. 2021ರ ಈದ್ ಹಬ್ಬಕ್ಕೆ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಾಯಕ ನಟನಾಗಿರುವ ‘ಅಲಾ ವೈಕುಂಠಪುರಂಲೋ’ ಸಿನಿಮಾ ಮೂಲಕ ಈ ವರ್ಷ ಪೂಜಾ ಹೆಗ್ಡೆ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಸದ್ಯಕ್ಕೆ ಪೂಜಾ ಹೆಗ್ಡೆ ಕೈಯಲ್ಲಿ ಎರಡು ತೆಲುಗು ಸಿನಿಮಾಗಳಿವೆ. ಪ್ರಭಾಸ್ ಜೊತೆಗೆ ಒಂದು ಸಿನಿಮಾ ಇನ್ನೊಂದು ಅಖಿಲ್ ಅಕ್ಕಿನೇನಿ ಜೊತೆ “ಮೋಸ್ಟ್ ಎಲಿಜಿಬಲ್ ಬ್ಯಾಚುಲರ್” ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

Comments are closed.