ಕರ್ನಾಟಕ

ನೀರು ಹರಿಸಲು ಒತ್ತಾಯಿಸಿ ರೈತರಿಂದ ಕತ್ತೆ ಮೆರವಣಿಗೆ

Pinterest LinkedIn Tumblr


ವಿಜಯಪುರ: ಮುಳವಾಡ ಏತ ನೀರಾವರಿ ಯೋಜನೆ ಕಾಲುವೆಗೆ ಕೃಷ್ಣಾ ನದಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರದಿಂದ ನೀರು ಹರಿಸುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.

ಆಲಮಟ್ಟಿ ಪಟ್ಟಣದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ಕತ್ತೆಗಳಿಗೆ ಶಾಸಕರು, ಸರ್ಕಾರ ಎಂದು ಬೋರ್ಡ್ ಬರೆದು ರೈತರು ಕತ್ತೆ ಮೆರವಣಿಗೆ ನಡೆಸಿದರು. ಕೃಷ್ಣಾ ಭಾಗ್ಯ ಜಲ ನಿಗಮದ ಕಛೇರಿಗೆ ತೆರಳಿ ಧರಣಿ ಆರಂಭಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಭೀಮಶಿ ಕಲಾದಗಿ ಸೇರಿದಂತೆ ಜಿಲ್ಲೆಯ ವಿವಿಧ ಮಠಾಧೀಶರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Comments are closed.