ಕರ್ನಾಟಕ

ಸಂಪುಟ ತೀರ್ಮಾನ ನಂತರ ಮರಳಿಗೆ ಏಕರೂಪ ದರ ನೀತಿ ಜಾರಿ

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ನಾನಾ ಕಡೆ ಬೇರೆ ಬೇರೆ ದರದಲ್ಲಿ ನದಿ ಮರಳು ಮಾರಾಟವಾಗುತ್ತಿದ್ದು, ಗ್ರಾಹಕರಿಗೆ ಗೊಂದಲದ ಜತೆಗೆ ಹೊರೆ ಯಾಗಿ ಪರಿಣಮಿಸಿದೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯದೆಲ್ಲೆಡೆ ಏಕರೂಪ ಬೆಲೆಗೆ ಸಿಗುವಂತಾಗಲು ಸರಕಾರವು ಕರಡು ಮರಳು ನೀತಿ ಸಿದ್ಧಪಡಿಸುತ್ತಿದೆ. ತೆಲಂಗಾಣ, ಗುಜರಾತ್‌ ಪ್ರವಾಸ ಕೈಗೊಂಡಿದ್ದ ಅಧಿಕಾರಿಗಳ ತಂಡ ಹಾಗೂ ಸರಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ಮರಳು ನೀತಿಗೆ ಅಂತಿಮ ರೂಪ ನೀಡುವ ಪ್ರಯತ್ನ ನಡೆದಿದೆ. ಉನ್ನತ ಮಟ್ಟದ ಸಭೆಯಲ್ಲಿ ಚರ್ಚೆಯಾದ ಬಳಿಕ ಸಚಿವ ಸಂಪುಟದ ಒಪ್ಪಿಗೆ ಬಳಿಕ ಮರಳು ನೀತಿ ಜಾರಿಗೆ
ಬರ ಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಒಂದೊಮ್ಮೆ ಸರಕಾರ ಏಕರೂಪದ ದರದಲ್ಲಿ ಮರಳು ಮಾರಾಟ ವ್ಯವಸ್ಥೆ ತಂದರೆ ಇನ್ನೂ ಹಂಚಿಕೆ ಯಾಗದ 250 ಮರಳು ಬ್ಲಾಕ್‌ಗಳಲ್ಲಿ ನಿಗದಿಯಾದ ದರದಲ್ಲೇ ಮರಳು ಲಭ್ಯವಾಗಲಿದೆ. ಆದರೆ ಈಗಾಗಲೇ ಹರಾಜಿನಲ್ಲಿ ಹಂಚಿಕೆಯಾಗಿರುವ 239 ಬ್ಲಾಕ್‌ಗಳಲ್ಲಿ ಚಾಲ್ತಿಯಲ್ಲಿರುವ ವ್ಯವಸ್ಥೆಯಲ್ಲೇ ಮಾರಾಟ ಮುಂದುವರಿಯಲಿದೆ. ಗುತ್ತಿಗೆ ಅವಧಿ ಮುಗಿದ ಬಳಿಕ ಈ 239 ಬ್ಲಾಕ್‌ಗಳಲ್ಲೂ ಏಕರೂಪ ದರದಲ್ಲಿ ಮಾರಾಟ ವ್ಯವಸ್ಥೆ ಜಾರಿಯಾಗಲಿದೆ.

ನದಿ ಮರಳಿಗೆ ಬೇಡಿಕೆ
ರಾಜ್ಯದಲ್ಲಿ ಹಿಂದಿನಿಂದಲೂ ನದಿ ಮರಳಿಗೆ ಭಾರೀ ಬೇಡಿಕೆಯಿದೆ. ಮ್ಯಾನುಫ್ಯಾಕ್ಚರ್‌x ಸ್ಯಾಂಡ್‌ (ಎಂ-ಸ್ಯಾಂಡ್‌), ಮಲೇಷ್ಯಾ ಮರಳು ಲಭ್ಯವಿದ್ದರೂ ಅದಕ್ಕೆ ಹೆಚ್ಚಿನ ಬೇಡಿಕೆ ಇಲ್ಲ. ಮುಖ್ಯವಾಗಿ ಗೃಹ ನಿರ್ಮಾಣ, ಸ್ವಂತ ಬಳಕೆ ಕಟ್ಟಡಗಳ ನಿರ್ಮಾಣಕ್ಕೆ ನದಿ ಮರಳನ್ನೇ ಬಳಸಲಾಗುತ್ತದೆ. ಸರಕಾರದ ನಾನಾ ಇಲಾಖೆಗಳು ಕೈಗೊಳ್ಳುವ ಸಿವಿಲ್‌ ಕಾಮಗಾರಿ ಗಳಿಗೂ ನದಿ ಮರಳು ದೊಡ್ಡ ಪ್ರಮಾಣದಲ್ಲಿ ಬಳಕೆ ಯಾಗು ತ್ತಿದೆ. ಪ್ರಸ್ತುತ ಸಾಕಷ್ಟು ಪ್ರಮಾಣದಲ್ಲಿ ಸಿಗದ ಕಾರಣ ಮರಳು ದುಬಾರಿ ಎನಿಸಿದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ಬೆಲೆ ಇದೆ.

ರಾಜ್ಯ ಸರಕಾರದ ಉದ್ದೇಶಿತ ಮರಳು ನೀತಿಯಲ್ಲಿ ಪ್ರಮುಖವಾಗಿ ಎರಡು ವಿಚಾರಗಳಿವೆ. ಮರಳಿನ ಲಭ್ಯತೆ ಸ್ಥಳ ಗುರುತಿಸಿ ಹಂಚಿಕೆ ಮಾಡುವುದು ಹಾಗೂ ಗ್ರಾಹಕರಿಗೆ ಸೂಕ್ತ ಬೆಲೆ ಯಲ್ಲಿ ಸಿಗುವ ವ್ಯವಸ್ಥೆ ಕಲ್ಪಿಸುವುದು. ಅದರಂತೆ ತಜ್ಞರ ತಂಡ ಗುಜರಾತ್‌ ಹಾಗೂ ತೆಲಂಗಾಣಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿಯನ್ನೂ ಸಲ್ಲಿಸಿದೆ.

ನದಿಯ ಆರಂಭ (ಯಂಗ್‌), ಅನಂತರ ರಭಸ ವಾಗಿ ಹರಿಯುವ ಭಾಗ (ಮೆಚ್ಯುರ್‌x) ಹಾಗೂ ಸಮುದ್ರ ಸೇರುವ ಭಾಗದಲ್ಲಿ (ಓಲ್ಡ್‌) ಮರಳು ಲಭ್ಯತೆ, ಗುಣಮಟ್ಟದ ಆಧಾರದ ಮೇಲೆ ಬ್ಲಾಕ್‌ಗಳನ್ನು ಗುರುತಿಸಲಾಗುತ್ತದೆ. ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಬಹಳಷ್ಟು ಕಡೆ ಸಮುದ್ರ ಸೇರುವ ನದಿ ಪಾತ್ರವೇ ಹೆಚ್ಚಾಗಿದ್ದು, ಈ ಭಾಗಗಳಲ್ಲಿ ಮರಳು ಲಭ್ಯತೆ ಅಗಾಧವಾಗಿರುತ್ತದೆ. ಆದರೆ ಮಧ್ಯ ಕರ್ನಾಟಕ ಭಾಗದಲ್ಲಿ ನದಿ ಅಗಲವಾಗಿ ರಭಸವಾಗಿ ಹರಿಯುವುದರಿಂದ ಮರಳು ನಿಕ್ಷೇಪ ಪ್ರಮಾಣ ಕಡಿಮೆ. ನದಿ ಪಾತ್ರದ ಆಧಾರದ ಮೇಲೆ ಮರಳು ನಿಕ್ಷೇಪ ಗುರುತಿಸಿ ಹಂಚಿಕೆ ಮಾಡುವ ಬಗ್ಗೆ ಚರ್ಚೆ ನಡೆದಿದ್ದು, ಮರಳು ನೀತಿಯಲ್ಲಿ ಅಳವಡಿಸಲು ಚಿಂತನೆ ನಡೆದಿದೆ ಎಂದು ಮೂಲಗಳು ಹೇಳಿವೆ.

ಬೇರೆ ರಾಜ್ಯಗಳಲ್ಲಿ ಹೇಗೆ ಮಾರಾಟ?
ಕರ್ನಾಟಕ: ಇ-ಹರಾಜು ಮೂಲಕ ಮರಳು ಬ್ಲಾಕ್‌ ಹಂಚಿಕೆ
ಮಹಾರಾಷ್ಟ್ರ : ಎರಡು ಸುತ್ತಿನಲ್ಲಿ ಇ-ಹರಾಜು.
ತೆಲಂಗಾಣ: ಮುಕ್ತ ಮರಳು ಮಾರಾಟ. ಗ್ರಾಹಕರು ನೇರವಾಗಿ ಶುಲ್ಕ, ಸಾಗಣೆ ವೆಚ್ಚ ಭರಿಸಿ ಮರಳು ಸಾಗಿಸುವ ವ್ಯವಸ್ಥೆ ಇದೆ. ಗಣಿ ಅಭಿವೃದ್ಧಿ ಇಲಾಖೆಯ ಉಸ್ತುವಾರಿ.
ತಮಿಳುನಾಡು: ಲೋಕೋಪಯೋಗಿ ಇಲಾಖೆ ವತಿಯಿಂದ ಮರಳು ಬ್ಲಾಕ್‌ ಹಂಚಿಕೆ, ಮಾರಾಟ ವ್ಯವಸ್ಥೆ.
ಛತ್ತೀಸ್‌ಗಢ: ಗ್ರಾಮ ಪಂಚಾಯತ್‌ ವತಿಯಿಂದ ಮಾರಾಟ.

ಮರಳು ನೀತಿಗೆ ಸಿದ್ಧತೆ
ಗುಜರಾತ್‌, ತೆಲಂಗಾಣಕ್ಕೆ ಭೇಟಿ ನೀಡಿದ್ದ ತಜ್ಞರ ತಂಡ ವರದಿ ಸಲ್ಲಿಸಿದೆ. ಮರಳು ನಿಕ್ಷೇಪ ನಿಗದಿ ಹಾಗೂ ಸುಲಭವಾಗಿ ಮರಳು ಪೂರೈಕೆ ವ್ಯವಸ್ಥೆ ಕುರಿತ ಅಂಶಗಳನ್ನು ಮರಳು ನೀತಿಯಲ್ಲಿ ರೂಪಿಸಲಾಗುತ್ತಿದೆ. ಗುತ್ತಿಗೆ ಶುಲ್ಕ, ರಾಯಧನ, ಲಾಭಾಂಶ ಸಹಿತ ಶುಲ್ಕ ನಿಗದಿಪಡಿಸುವ ಬಗ್ಗೆ ಚರ್ಚೆ ನಡೆದಿದ್ದು, ಕರಡು ಮರಳು ನೀತಿ ಸಿದ್ಧವಾಗುತ್ತಿದೆ. ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿ ಅಂತಿಮವಾಗಿ ಸರಕಾರ ನಿರ್ಧಾರ ಕೈಗೊಳ್ಳಲಿದೆ. ಆ ಬಳಿಕ ಹೊಸ ಮರಳು ನೀತಿ ಜಾರಿಗೆ ಬರಲಿದೆ.

Comments are closed.