ಕರ್ನಾಟಕ

ಭೂ ಖರೀದಿ ಕಾಯ್ದೆಗೆ ಕೆಲ ತಿದ್ದುಪಡಿ ತರಲು ಚಿಂತನೆ: ಮುಖ್ಯಮಂತ್ರಿ

Pinterest LinkedIn Tumblr


ಬೆಂಗಳೂರು: ದಾವೋಸ್ ಪ್ರವಾಸದಲ್ಲಿ ಸಾಕಷ್ಟು ಉದ್ದಿಮೆದಾರರು ಹೂಡಿಕೆಗೆ ಆಸಕ್ತಿ ತೋರಿದ್ದು, ಹೂಡಿಕೆಗೆ ಅನುಕೂಲವಾಗುವಂತೆ ಭೂ ಖರೀದಿ ಕಾಯ್ದೆಗೆ ಕೆಲ ತಿದ್ದುಪಡಿ ತಂದು ಸರಳಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಖರೀದಿಗೆ ಸಾಕಷ್ಟು ಅಡಚಣೆಗಳಿವೆ ಎಂಬುದಾಗಿ ಬಹಳಷ್ಟು ಉದ್ಯಮಿಗಳು ಆಳಲು ತೋಡಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಕೃಷಿ ಭೂಮಿ‌ ಪರಿವರ್ತನೆ ಹಾಗೂ ಕೃಷಿ ಭೂಮಿ ಖರೀದಿಗೆ ಸಂಬಂಧಪಟ್ಟಂತೆ ಕಾನೂನಿಗೆ ಕೆಲ ತಿದ್ದುಪಡಿ ತರಲಾಗುವುದು ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ‌ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಭೇಟಿ, ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು

Comments are closed.