ಕರ್ನಾಟಕ

ನಟಿ ರಶ್ಮಿಕಾ ಮಂದಣ್ಣಗೆ 3 ಗಂಟೆ ಐಟಿ ಡ್ರಿಲ್

Pinterest LinkedIn Tumblr


ಮೈಸೂರು: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ಅವರ ಕುಟುಂಬದವರನ್ನು ಮೂರು ಗಂಟೆಗಳ ಕಾಲ ಮೈಸೂರು ನಗರದ ಆದಾಯ ತೆರಿಗೆ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಯ್ತು.

ಇತ್ತೀಚೆಗೆ ಕೊಡಗಿನ ವಿರಾಜಪೇಟೆಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಅವರ ಮನೆ ಹಾಗೂ ತಂದೆಯ ಒಡೆತನದಲ್ಲಿರುವ ಸೆರಿನಿಟಿ ಹಾಲ್‌ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇಡೀ ದಿನ ಮನೆ ಹಾಗೂ ಕಚೇರಿಯಲ್ಲಿ ಪರಿಶೀಲನೆ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಈ ಸಂದರ್ಭದಲ್ಲಿ 25 ಲಕ್ಷ ರೂ. ನಗದು ಕೂಡ ಪತ್ತೆಯಾಗಿತ್ತು ಎಂದು ಹೇಳಲಾಗಿತ್ತಾದರೂ ದೃಢಪಟ್ಟಿಲ್ಲ.

ರಶ್ಮಿಕಾ ಅವರ ತಂದೆ ಮದನ್‌ ಮಂದಣ್ಣ ಅವರನ್ನು ವಿಚಾರಿಸಿದ ಬಳಿಕ ಹೈದರಾಬಾದ್‌ನಿಂದ ತುರ್ತಾಗಿ ರಶ್ಮಿಕಾ ಮಂದಣ್ಣ ಆಗಮಿಸಿದ್ದರು. ನಂತರ ಮೈಸೂರಿನಲ್ಲಿ ವಿಚಾರಣೆಗೆ ಆಗಮಿಸುವಂತೆ ಆದಾಯ ತೆರಿಗೆ ಇಲಾಖೆಯಿಂದ ಸಮನ್ಸ್‌ ನೀಡಲಾಗಿತ್ತು. ಮಂಗಳವಾರ ಬೆಳಗ್ಗೆ ರಶ್ಮಿಕಾ ಮಂದಣ್ಣ, ತಂದೆ ಮದನ್‌ ಮಂದಣ್ಣ, ತಾಯಿ, ವಕೀಲರು ಹಾಗೂ ಲೆಕ್ಕಪತ್ರಗಳನ್ನು ನೋಡಿಕೊಳ್ಳುವವರೊಂದಿಗೆ ನಗರದ ನಜರಾಬಾದ್‌ನಲ್ಲಿರುವ ಆದಾಯ ತೆರಿಗೆ ಇಲಾಖೆ ಮುಖ್ಯ ಕಚೇರಿಗೆ ಆಗಮಿಸಿದರು. ಈ ಸಂದರ್ಭ ಅಗತ್ಯ ದಾಖಲೆಗಳನ್ನು ತಂದಿದ್ದರು.

ಮೂರು ಗಂಟೆಗಳ ಕಾಲ ನಿರಂತರವಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಶ್ನಿಸಿ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅಗತ್ಯ ಇದ್ದಲ್ಲಿ ಮತ್ತೆ ವಿಚಾರಣೆಗೆ ಆಗಮಿಸಬೇಕು ಎನ್ನುವ ಸೂಚನೆಯೊಂದಿಗೆ ಕಳುಹಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರಿಂದ ತಪ್ಪಿಸಿಕೊಳ್ಳಲು ಕಟ್ಟಡದ ಕೆಳಮಹಡಿಗೆ ಕಪ್ಪು ಟಿಂಟ್‌ ಹಾಕಿದ್ದ ತಮ್ಮ ಕಾರನ್ನು ತರಿಸಿಕೊಂಡು ಅದರಲ್ಲಿ ಹೊರ ತೆರಳಿದರು.

Comments are closed.