ಕರಾವಳಿ

ಉಡುಪಿಗೆ ವಾರಾಹಿಯಿಂದ ನೀರು ಯೋಜನೆ : ಕರ್ನಾಟಕ ವಿಧಾನ ಪರಿಷತ್‍ನ ಅರ್ಜಿ ಸಮಿತಿಯಿಂದ ಪರಿಶೀಲನೆ

Pinterest LinkedIn Tumblr

ಉಡುಪಿ: ವಾರಾಹಿಯಿಂದ ಉಡುಪಿ ನಗರಕ್ಕೆ ನೀರು ಪೂರೈಸುವ ಯೋಜನೆ ಕುರಿತಂತೆ, ಕರ್ನಾಟಕ ವಿಧಾನ ಪರಿಷತ್‍ನ ಅರ್ಜಿ ಸಮಿತಿಯು ಮಂಗಳವಾರ ಉಡುಪಿಗೆ ಆಗಮಿಸಿ, ಪರಿಶೀಲನೆ ನಡೆಸಿತು.

ಕರ್ನಾಟಕ ವಿಧಾನ ಪರಿಷತ್‍ನ ಉಪ ಸಭಾಪತಿ ಹಾಗೂ ವಿಧಾನ ಪರಿಷತ್ ಅರ್ಜಿ ಸಮಿತಿಯ ಅಧ್ಯಕ್ಷ ಎಸ್.ಎಲ್. ಧರ್ಮೇಗೌಡ ಅಧ್ಯಕ್ಷತೆಯಲ್ಲಿ, ಕರ್ನಾಟಕ ವಿಧಾನ ಪರಿಷತ್‍ನ ಅರ್ಜಿ ಸಮಿತಿ ಸದಸ್ಯರಾದ ಶಾಸಕ ಎಸ್.ವಿ. ಸಂಕನೂರ್, ಮರಿ ತಿಬ್ಬೇಗೌಡ, ಪ್ರಕಾಶ್ ರಾಥೋಡ್, ರಘುನಾಥ್ ಮಲ್ಕಾಪುರ, ಪಿ.ಆರ್. ರಮೇಶ್, ಮೋಹನ್ ಕೊಂಡಾಜಿ ಅವರಿದ್ದ ಸಮಿತಿಯ ಸದಸ್ಯರು ವಾರಾಹಿಯಿಂದ ಉಡುಪಿ ನಗರಕ್ಕೆ ನೀರು ಪೂರೈಸುವ ಯೋಜನೆಯ ಕಾಮಗಾರಿ ಹಾದುಹೋಗುವ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಕೆ.ಯು.ಐ.ಡಿ.ಎಫ್.ಸಿ ಯ ಎಂ.ಡಿ. ಚಾರುಲತಾ, ಜಿಲ್ಲಾಧಿಕಾರಿ ಜಿ.ಜಗಧೀಶ್, ಎಸ್ಪಿ ವಿಷ್ಣುವರ್ಧನ, ಡಿ.ಎಫ್.ಓ ಕಮಲ, ರುದ್ರನ್, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ವಾರಾಹಿ, ನೀರಾವರಿ, ನಗರಾಭಿವೃದ್ದಿ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.