
ಬಸವಕಲ್ಯಾಣ: 12 ವರ್ಷಗಳ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದಕ್ಕೆ ನಾನು ಪ್ರಮುಖ ಕಾರಣವಾಗಿದ್ದೆ ಎಂಬ ಹೆಮ್ಮೆ ನನಗಿದೆ. ಆದರೆ ಕೆಲ ಸಮಸ್ಯೆಗಳಿಂದ ರಾಜಕೀಯದಿಂದ ದೂರ ಉಳಿದಿದ್ದೇನೆಯೇ ವಿನಃ ಯಾರ ಭಯದಿಂದ ಅಲ್ಲ ಎಂದು ಮಾಜಿ ಸಚಿವ ಗಾಲಿ ಜರ್ನಾದನ ರೆಡ್ಡಿ ಹೇಳಿದರು.
ಮಹಾಯೋಗಿ ವೇಮನರ 608ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹುಮನಾಬಾದ ಅಥವಾ ಬಸವಕಲ್ಯಾಣದಿಂದ ಗುಂಡುರೆಡ್ಡಿ ಅವರಿಗೆ ಟಿಕೆಟ್ ನೀಡುವಂತೆ ಹೇಳಿದ್ದೆ. ಆದರೆ ಹಿರಿಯರ ಮಾತಿಗೆ ಬೆಲೆ ಕೊಟ್ಟಿದ್ದರಿಂದ ಅದು ತಪ್ಪಿ ಹೋಗಿದೆ. ಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಗುಂಡುರೆಡ್ಡಿ ಅವರಿಗೆ ಒಳ್ಳೆಯ ಸಮಯ ಬರಲಿದೆ ಎಂದರು.
ಕರ್ನಾಟಕದಲ್ಲಿ ಸದ್ಯ 95 ಲಕ್ಷ ಜನಸಂಖ್ಯೆ ಇದೆ. ಹೀಗಾಗಿ ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ಸಮಾಜ ಬಾಂಧವರು ಒಗ್ಗಟ್ಟಿ ನಿಂದ ಭಾಗವಹಿಸಿದ ಫಲದಿಂದ ಇಂದು ಸರ್ಕಾರವೇ ಹೇಮ-ವೇಮ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ ಎಂದರು.
ಬಾಗಲಕೋಟೆ ಜಿಲ್ಲೆಯ ಕೃಷ್ಣಾ ನದಿ ದಂಡೆಯ ಮೇಲೆ 300 ಎಕರೆ ಭೂಮಿಯಲ್ಲಿ ಶಿವನ ಹಾಗೂ ಹೇಮ-ವೇಮನ ಮೂರ್ತಿ ಸ್ಥಾಪನೆ ಮಾಡುವ ಕನಸಿದೆ ಎಂದರು.
Comments are closed.