ಕರ್ನಾಟಕ

ಐಟಿ ದಾಳಿಯಿಂದ ಎಲ್ಲ ಕಳೆದುಕೊಂಡಿದ್ದೇನೆ: ನಟಿ ರಶ್ಮಿಕಾ ಮಂದಣ್ಣ ತಂದೆ

Pinterest LinkedIn Tumblr


ಮಡಿಕೇರಿ: ಸೋಮವಾರ ಐಟಿ ವಿಚಾರಣೆಗೆ ಹಾಜರಾಗುವಂತೆ ಇಲಾಖೆಯ ಅಧಿಕಾರಿಗಳು ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ರಶ್ಮಿಕಾ ಮಂದಣ್ಣ ತಂದೆ ತನ್ನ ಕುಟುಂಬ ಸದಸ್ಯರೊಂದಿಗೆ ಬೇಸರ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಶ್ಮಿಕಾ ತಂದೆ ಮದನ್ ಮಂದಣ್ಣ ಅವರು ಐಟಿ ದಾಳಿಯಿಂದ ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ ಎಂದು ಸಂಬಂಧಿಕರೊಂದಿಗೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ದಾಳಿ ಮಾಡಿದ್ದ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು, ನಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಯಾರೋ ಐಟಿ ಅಧಿಕಾರಿಗಳಿಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ‘ಚಷ್ಮಾ’ ಹುಡುಗಿಗೆ ಮತ್ತೊಂದು ‘ಕಿರಿಕ್’- ರಶ್ಮಿಕಾ, ಕುಟುಂಬಸ್ಥರಿಗೆ ಐಟಿ ಸಮನ್ಸ್

ಸೆರೆನಿಟಿ ಹಾಲ್‍ನಲ್ಲಿ 25 ಲಕ್ಷ ರೂಪಾಯಿಯನ್ನು ಐಟಿ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ನಾನು ಅದಕ್ಕೆ ಲೆಕ್ಕ ಕೊಟ್ಟಿದ್ದೇನೆ. ಅದು ನನ್ನ ಹಣ ಅಲ್ಲ. ಮದುವೆ ಅವರು ಅಡ್ವಾನ್ಸ್ ಕೊಟ್ಟಿದ್ದರು. ನಾನು ಯಾವುದೇ ಅಕ್ರಮ ಹಣ ಮಾಡಿಲ್ಲ. ಐಟಿ ಅವರು ಅವರ ಕೆಲಸವನ್ನು ಮಾಡಿದ್ದಾರೆ. ನಾನು, ನನ್ನ ಹೆಂಡತಿ ಹಾಗೂ ಮಗಳು ರಶ್ಮಿಕಾ ಐಟಿ ಅಧಿಕಾರಿಗಳು ಕರೆದಾಗ ವಿಚಾರಣೆಗೆ ಹಾಜರಾಗುತ್ತೇವೆ ಎಂದು ಬೇಸರದಿಂದ ಹೇಳಿರುವುದಾಗಿ ತಿಳಿದು ಬಂದಿದೆ.

Comments are closed.