ಕರ್ನಾಟಕ

ಚಿನ್ನದ ಬೆಲೆ ಸನಿಹಕ್ಕೆ ಬ್ಯಾಡಗಿ ಒಣ ಮೆಣಸಿನಕಾಯಿ

Pinterest LinkedIn Tumblr


ಹಾವೇರಿ: ವಿಶ್ವ ಪ್ರಸಿದ್ಧ ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಒಣ ಮೆಣಸಿಕಾಯಿ ಮಾರಾಟವಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.

ಬ್ಯಾಡಗಿಯ ಸೋಮವಾರ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಕ್ವಿಂಟಲ್‍ಗೆ ಇಂದು 33,333 ರೂಪಾಯಿಗೆ ಒಣ ಮೆಣನಕಾಯಿ ಮಾರಾಟವಾಗಿ ಹುಬ್ಬೇರಿಸುವಂತೆ ಮಾಡಿದೆ. ಇದು ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದ ರೈತ ಮಂಜುನಾಥ ಗಾಡರೆಡ್ಡಿ ಜಮೀನಿನಲ್ಲಿ ಬೆಳೆದಿದ್ದ ಮೆನಸಿನಕಾಯಿ ಭಾರೀ ಬೆಲೆಗೆ ಮಾರಾಟವಾಗಿದೆ. ಇಂದು ರೈತ ಮಂಜುನಾಥ ಅವರು ಮೂರು ಕ್ವಿಂಟಲ್ ಮೆನಸಿನಕಾಯಿ ಮಾರಾಟ ಮಾಡಿ ಬರೋಬ್ಬರಿ 99,999 ರೂಪಾಯಿ ಹಣ ಪಡೆದುಕೊಂಡು ಖುಷಿಯಿಂದ ಮನೆಗೆ ತೆರೆಳಿದ್ದಾರೆ.

ಈ ಹಿಂದೆ ಮಾರುಕಟ್ಟೆಯಲ್ಲಿ ಗದಗ ಜಿಲ್ಲೆಯ ರೋಣದ ರೈತರೊಬ್ಬರು ತಾವು ಬೆಳೆದಿದ್ದ ಒಣ ಮೆಣಸಿನಕಾಯಿಗೆ ಬಂಪರ್ ಬೆಲೆ ಪಡೆದುಕೊಂಡಿದ್ದರು. ಗುರುವಾರ ಮಾರುಕಟ್ಟೆಯಲ್ಲಿ 33,259ಕ್ಕೆ ದಾಖಲೆ ಬೆಲೆ ಸಿಕ್ಕಿತ್ತು. ಆದರೆ ಇಂದು 33,333 ರೂಪಾಯಿ ದರ ನಿಗದಿಯಾಗಿ ಗುರುವಾರದ ಮಾರುಕಟ್ಟೆ ಬೆಲೆಯನ್ನು ಹಿಂದಕ್ಕೆ ಹಾಕಿದೆ.

ಚಿನ್ನದ ಬೆಲೆ ಸನಿಹಕ್ಕೆ ಬಂದ ಮೆನಸಿನಕಾಯಿ ಬೆಲೆ ನೋಡಿದ ಅನ್ನದಾತರು ಹಾಗೂ ವರ್ತಕರು ಬೆಲೆ ಕಂಡು ಅಚ್ಚರಿಗೊಂಡಿದ್ದಾರೆ. ಸಾವಯವ ಕೃಷಿಯಲ್ಲಿ ಮೆಣಸಿನಕಾಯಿ ಬೆಳೆಯನ್ನ ಬೆಳೆದಿದ್ದೇವೆ. ಇಂದು ಅದಕ್ಕೆ ದಾಖಲೆ ಬೆಲೆ ಸಿಕ್ಕಿದ್ದು ಸಂತಸವಾಗಿದೆ ಎಂದು ರೈತರು ಖುಷಿ ಹಂಚಿಕೊಂಡಿದ್ದಾರೆ.

Comments are closed.