ಕರ್ನಾಟಕ

ಖ್ಯಾತ ಉದ್ಯಮಿಯ 24ರ ಹರೆಯದ ಪುತ್ರಿಯಿಂದ ಸನ್ಯಾಸತ್ವ ಸ್ವೀಕಾರ

Pinterest LinkedIn Tumblr


ಯಾದಗಿರಿ: ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ, ಬಣ್ಣ ಬಣ್ಣದ ಬಟ್ಟೆ ತೊಟ್ಟು ತಮ್ಮಿಷ್ಟದಂತೆ ಜೀವನ ನಡೆಸುವುದು ಕಾಮನ್. ಆದರೆ ಇಲ್ಲೊಬ್ಬ ಯುವತಿ ಇದೆಲ್ಲವನ್ನು ಧಿಕ್ಕರಿಸಿ ಆಧ್ಯಾತ್ಮಿಕ ಜಗದತ್ತ ಮುಖ ಮಾಡಿದ್ದಾಳೆ.

ಜಿಲ್ಲೆಯ ಸುರಪುರದ 24 ವರ್ಷದ ಯುವತಿ ಮೋನಿಕಾ ಗೃಹಸ್ಥಾಶ್ರಮ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ್ದಾಳೆ. ಜೈನ್ ಧರ್ಮದವಳಾದ ಮೋನಿಕಾ B.Com ಸಹ ಓದಿದ್ದಾಳೆ. ಅಲ್ಲದೇ ಸುರಪುರ ಪಟ್ಟಣದ ಖ್ಯಾತ ಉದ್ಯಮಿಯಾಗಿರುವ ಭರತ್‍ಕುಮಾರ್ ಜೈನ್ ಅವರು ಸುಪುತ್ರಿಯಾಗಿದ್ದಾಳೆ. ಮೋನಿಕಾಳಿಗೆ ಬಾಲ್ಯದಿಂದಲೂ ಸನ್ಯಾಸತ್ವದ ಬಗ್ಗೆ ಒಲವು ಇದ್ದು, ಮನೆಯವರ ಒಪ್ಪಿಗೆ ಪಡೆದು ಈಗ ಸನ್ಯಾಸ ದೀಕ್ಷೆ ಸ್ವೀಕಾರ ಮಾಡಿದ್ದಾಳೆ.

ಸದ್ಯಕ್ಕೆ ಸಾಂಕೇತಿಕವಾಗಿ ಸನ್ಯಾಸತ್ವ ಸ್ವೀಕರಿಸಿರುವ ಮೋನಿಕಾಳಿಗೆ ಮುಂದಿನ ತಿಂಗಳು ಫೆ.2 ರಂದು ರಾಜಸ್ಥಾನದಲ್ಲಿ ಅಧಿಕೃತವಾಗಿ ಸನ್ಯಾಸತ್ವ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಇಂದು ಸುರಪುರ ಪಟ್ಟಣದಲ್ಲಿ ಕಬಾಡಗೇರಾದಿಂದ ಶೆಟ್ಟಿಮೋಹಲ್ಲಾದ ಓಣಿಯ ಜೈನ ಮಂದಿರದವರೆಗೆ ತೆರೆದ ಕುದುರೆ ಸಾರೋಟದ ವಾಹನದಲ್ಲಿ ಅದ್ಧೂರಿಯಾಗಿ ದೀಕ್ಷಾರ್ಥಿ ಮೋನಿಕಾಳ ಮೆರವಣಿಗೆ ನಡೆಸಲಾಯಿತು.

ದೀಕ್ಷಾರ್ಥಿ ಮೋನಿಕಾ ಮೆರವಣಿಗೆ ವೇಳೆ ವಿವಿಧ ವಸ್ತುಗಳನ್ನು ದಾನ ಮಾಡಿದರು. ಮೆರವಣಿಗೆ ಉದ್ದಕ್ಕೂ ಜೈನ್ ಮಹಿಳೆಯರು ನೃತ್ಯ ಮಾಡಿ ಮೋನಿಕಾಳಿಗೆ ಶುಭಕೋರಿದರು.

Comments are closed.