ಕರ್ನಾಟಕ

ರಾಯಚೂರಿನ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯ ಕೈಗಳಿಗೆ 40 ಬಾರಿ ಗುಂಡುಪಿನ್​ನಿಂದ ಚುಚ್ಚಿ ಹಿಂಸೆ ನೀಡಿದ ಶಿಕ್ಷಕಿ !

Pinterest LinkedIn Tumblr

ಬೆಂಗಳೂರು: ರಾಯಚೂರಿನ ಲಿಂಗಸುಗೂರಿನ ಖಾಸಗಿ ಶಾಲೆಯ ವಿದ್ಯಾರ್ಥಿನಿಯ ಕೈಗಳಿಗೆ ಶಿಕ್ಷಕಿ 40 ಬಾರಿ ಗುಂಡುಪಿನ್​ನಿಂದ ಚುಚ್ಚಿ ಹಿಂಸೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಲಿಂಗಸುಗೂರಿನ ಎಕ್ಸ್​ಪರ್ಟ್​ ಪಬ್ಲಿಕ್ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಅನುಶ್ರೀ ಎಂಬ ವಿದ್ಯಾರ್ಥಿನಿಯ ಮೇಲೆ ಈ ರೀತಿ ಹಲ್ಲೆ ನಡೆಸಲಾಗಿದೆ.

ಅನುಶ್ರೀ ಶಾಲೆಯಲ್ಲಿ ಶಿಸ್ತು ಕಾಪಾಡುತ್ತಿಲ್ಲ, ಸರಿಯಾಗಿ ಹೋಂವರ್ಕ್ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಆಕೆಗೆ ಶಿಕ್ಷೆ ನೀಡಲಾಗಿತ್ತು. ಆಕೆಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂಬ ಕಾರಣಕ್ಕೆ ಗುಂಡುಪಿನ್​ನಿಂದ ಆಕೆಯ ಕೈಗಳಿಗೆ ಗುಂಡುಪಿನ್​ನಿಂದ 40 ಬಾರಿ ಚುಚ್ಚಿದ್ದ ಶಿಕ್ಷಕಿ ಹಿಂಸೆ ನೀಡಿದ್ದರು. ತಮಿಳುನಾಡು ಮೂಲದ ಪ್ರಸನ್ನ ಎಂಬ ಶಿಕ್ಷಕಿ ನೀಡಿದ ಹಿಂಸೆಯಿಂದ ಕೈ ತುಂಬ ಗುಳ್ಳೆಗಳಾಗಿದ್ದವು.

ಶಾಲೆ ಮುಗಿಸಿ ಮನೆಗೆ ಬಂದ ಮಗಳ ಕೈಯಲ್ಲಿನ ಗಾಯವನ್ನು ನೋಡಿ ವಿಚಾರಿಸಿದಾಗ ಆಕೆ ನಡೆದ ಘಟನೆಯನ್ನು ಆಕೆ ಅಪ್ಪ-ಅಮ್ಮನಿಗೆ ತಿಳಿಸಿದ್ದಳು. ತಾನಿನ್ನು ಶಾಲೆಗೆ ಹೋಗುವುದಿಲ್ಲ ಎಂದು ಆಕೆ ಹಠ ಹಿಡಿದಿದ್ದಳು. ಈ ಬಗ್ಗೆ ಶಾಲೆಗೆ ಹೋಗಿ ಆಕೆಯ ಪೋಷಕರು ವಿಚಾರಿಸಿದಾಗ ಆ ಶಿಕ್ಷಕಿ ಎಲ್ಲ ಮಕ್ಕಳಿಗೂ ಗುಂಡು ಪಿನ್​ನಿಂದ ಚುಚ್ಚಿ ಶಿಕ್ಷೆ ನೀಡುತ್ತಾರೆಂಬ ವಿಷಯ ಗೊತ್ತಾಗಿತ್ತು. ಶಿಕ್ಷಕಿಯ ಈ ವರ್ತನೆಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.