ಕರ್ನಾಟಕ

ನಿರ್ದೇಶಕನ ಜೊತೆ ನಟಿ ಓಡಿಹೋಗಿದ್ದರ ಪ್ರಕರಣಕ್ಕೆ ಹೊಸ ತಿರುವು..!

Pinterest LinkedIn Tumblr


ರಾಯಚೂರು: ನಟಿ ನಿರ್ದೇಶಕನ ಜೊತೆ ಪರಾರಿಯಾದ ಪ್ರಕರಣ ಟ್ವಿಸ್ಟ್ ಪಡೆದಿದ್ದು, ನಟಿ ವಿಜಯಲಕ್ಷ್ಮಿ ಮತ್ತು ನಿರ್ದೇಶಕ ಆಂಜಿನಪ್ಪ ರಾಯಚೂರಿನಲ್ಲಿ ಪ್ರತ್ಯಕ್ಷವಾಗಿದ್ದಾರೆ.

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಹಳ್ಳಿ ಹೊಸೂರು ಗ್ರಾಮದಲ್ಲಿ ಬಂದು ಈ ಜೋಡಿ ನೆಲೆಸಿದ್ದು, ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆಂದು ಹೇಳಿಕೊಂಡಿದ್ದಾರೆ. ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನ ಜೋಡಿ ಭೇಟಿಯಾಗಿದ್ದು, ಮಾಧ್ಯಮಗಳಲ್ಲಿ ಬಿತ್ತರಿಸುತ್ತಿರುವ ಸುದ್ದಿಗೆ ಕ್ಲ್ಯಾರಿಟಿ ಕೊಡುವುದಕ್ಕೆ ಮಾಧ್ಯಮದ ಮುಂದೆ ಬಂದಿದ್ದೇವೆ, ನಾವು ಯಾವುದೇ ರೀತಿ ಮೋಸ ಮಾಡಿಲ್ಲ ಎಲ್ಲರಿಗೂ ಚಿತ್ರೀಕರಣ ಮುಗಿಸಿಕೊಟ್ಟು ಬಂದಿದ್ದೇವೆ ಎಂದು ಆಂಜಿನಪ್ಪ ಸ್ಪಷ್ಟನೆ ನೀಡಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ವಿಜಯಲಕ್ಷ್ಮಿ, ನಾನು ಮದುವೆಯಾಗಿರುವ ವಿಷಯ ನಮ್ಮ ಮನೆಯವರಿಗೂ ಕೂಡ ಗೊತ್ತಿದೆ. ನನಗೆ ಗಂಡನ ಮನೆಗೆ ಬಂದರೂ ಕೂಡ ಬಿಡುತ್ತಿಲ್ಲ ಇಲ್ಲಿಯವರೆಗೆ ಬಂದು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ನಾನು ಯಾರ ಬಳಿಯೂ ಹಣ ಪಡೆದುಕೊಂಡಿಲ್ಲ. ಹಾಗೇನಾದರೂ ದುಡ್ಡು ನೀಡಿದಲ್ಲಿ ನನ್ನ ಬಳಿ ಬನ್ನಿ ನಾನು ಕ್ಲಾರಿಟಿ ಕೊಡುತ್ತೇನೆ ಎಂದು ನಟಿ ವಿಜಯಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.

Comments are closed.