ಕರ್ನಾಟಕ

ಕುಮಾರಸ್ವಾಮಿಯಿಂದ ರಾಜಕೀಯ ನಿವೃತ್ತಿ ಹೇಳಿಕೆ..!

Pinterest LinkedIn Tumblr


ಹಾಸನ: ಬೇಲೂರು ತಾಲೂಕು ಹಳೇಬೀಡಿನ ಪುಷ್ಪಗಿರಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿದ್ದು, ಕಳೆದ ವರ್ಷ ರಾಜ್ಯದಲ್ಲಿ ನೆರೆ ಹಾವಳಿಯಿಂದ ಅಲ್ಲೋಲ ಕಲ್ಲೋಲಗಳಾಗಿವೆ. ನಮ್ಮ ರಾಜ್ಯದ ಜನತೆ ಸಂಕಷ್ಟದಲ್ಲಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ಕಿಡಿಕಾರಿದ್ದಾರೆ.

ಪ್ರಧಾನಿಗಳು ಬೆಂಗಳೂರಿಗೆ ಬಂದ ಸಂದರ್ಭ ಭೇಟಿಗೆಂದು ರಾಜಭವನಕ್ಕೆ ತೆರಳಿದ್ದರು. ಪ್ರಧಾನಿಗಳ ಅಂಗರಕ್ಷಕರು ಯಡಿಯೂರಪ್ಪ ಮಾಧುಸ್ವಾಮಿ, ಬಸವರಾಜ ಬೊಮ್ಮಾಯಿಗೆ ಭೇಟಿ ಅವಕಾಶ ನೀಡಿಲ್ಲ. ಅವರು ದಣಿವಿಲ್ಲದ ಕಾರ್ಯಕ್ರಮದಿಂದ ದಣಿದಿದ್ದಾರೆ ಭೇಟಿಗೆ ಅವಕಾಶ ಸಾಧ್ಯವಿಲ್ಲ ಎಂದಿದ್ದಾರೆ. ಇದು ನಮ್ಮ ಪ್ರತಿನಿಧಿ ಮುಖ್ಯಮಂತ್ರಿಗೆ ಮಾಡಿದ ಅವಮಾನವಲ್ಲವೇ.? ಹಾಸನ ಜಿಲ್ಲೆಯ ಹಲವು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ದೇವೇಗೌಡರು ಯಗಚಿ ಜಲಾಶಯಕ್ಕೆ ಚಾಲನೆ ನೀಡಿದಾಗ ನೀರಿನ ಹರಿವು ಸಾಧ್ಯವಿಲ್ಲವೆಂದು ಗೇಲಿ ಮಾಡಿದ್ದರು ಎಂದು ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ನಾನು ಅಧಿಕಾರಕ್ಕೆ ಬಂದಾಗ ಹಿಂದಿನ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಚಾಲ್ತಿಯಲ್ಲಿದ್ದವು. ಎಲ್ಲಾ ಯೋಜನೆಗಳನ್ನ ಮುಂದುವರಿಸಿ ನಾನು ನನ್ನ ರೈತರ ಸಾಲ ಮನ್ನಾ ಮಾಡಿದ್ದೇನೆ. ಬೇಲೂರಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದು ನಾನು. ಇಂದಿನ ಸಚಿವರು ನಾವು ಹಣ ನೀಡಿದ್ದೇವೆ ಎಂದು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಹಾಸನ ಜಿಲ್ಲೆಗೆ ಕೊಟ್ಟಂತಹ 1 ಸಾವಿರ ಕೋಟಿ ಹಣ ವಾಪಸ್ ಪಡೆಯಲಾಗಿದೆ ಎಂದಿದ್ದಾರೆ.

ನಾನು ರಾಜಕೀಯದಿಂದ ದೂರವಾಗುವ ಪ್ರಶ್ನೆಯೇ ಇಲ್ಲ. ಕೆಲ ದೇಶಗಳ ಇತಿಹಾಸ ಅಭ್ಯಾಸಮಾಡಲು ಓದುತ್ತಿದ್ದೇನೆ. ನನಗೆ ರಾಜಕೀಯ ನಿವೃತ್ತಿ ವಯಸ್ಸಲ್ಲ ಇನ್ನೂ ರಾಜಕೀಯದಲ್ಲೇ ಇರುತ್ತೇನೆ. ರೈತರ ಸಾಲಮನ್ನಾ ಬಗ್ಗೆ ಅಧಿಕಾರ ಇಲ್ಲದಿದ್ದರು ಹೋರಾಟ ನಡೆಸುತ್ತೇನೆ. ಯಾರೇ ನನ್ನ ಸಾಲ ಆಗಿಲ್ಲಎಂದು ತಿಳಿಸಿದರೂ ನಾನು ಹೋರಾಟಕ್ಕೆ ಸಿದ್ದನಿದ್ದೇನೆ ಎಂದು ಹೇಳಿದರು. ಕೇಂದ್ರ ಸರ್ಕಾರ ಕೊಟ್ಟ 2 ಸಾವಿರವನ್ನೇ ವಾಟ್ಸ್ ಆಪ್‌ನಲ್ಲಿ ದೊಡ್ಡ ಸಾಧನೆಯಂತೆ ಹರಿಬಿಡುತ್ತಿದ್ದಾರೆ. 2 ಸಾವಿರ ಕೊಟ್ಟವರನ್ನೇ ನೀವು ನೆನೆಯುತ್ತಿರುವಾಗ 2 ಲಕ್ಷ ಕೊಟ್ಟ ನನ್ನನ್ನು ನೆನೆಯೊಲ್ಲವೇ ..? ಕಾಲ ಬಂದಾಗ ನನ್ನನ್ನೂ ನೆನೆಯುತ್ತೀರಿ ಎಂಬ ವಿಶ್ವಾಸವಿದೆ ಎಂದು ಹೆಚ್ಡಿಕೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments are closed.