ಕರ್ನಾಟಕ

ಈರುಳ್ಳಿ ದರದಲ್ಲಿ ಭಾರೀ ಇಳಿಕೆ

Pinterest LinkedIn Tumblr


ಬೆಂಗಳೂರು(ಜ.02): ಕಳೆದ ಎರಡು ತಿಂಗಳಿಂದ ಗಗನಕ್ಕೇರಿದ ಈರುಳ್ಳಿ ದರ ಈಗ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಮಧ್ಯಮ ಗುಣಮಟ್ಟದ ಈರುಳ್ಳಿ 60 ರಿಂದ 70 ರೂ.ಗೆ ಮಾರಟ ಮಾಡಲಾಗುತ್ತಿದೆ. ಹಾಗೆಯೇ ಕಡಿಮೆ ಗುಣಮಟ್ಟದ ಈರುಳ್ಳಿ ಒಂದು ಕೆ.ಜಿಗೆ 30 ರಿಂದ 40 ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಭಾರೀ ದಾಖಲೆ ಮಟ್ಟಕ್ಕೇರಿದ್ದ ಈರುಳ್ಳಿ ಬೆಲೆ ದಿಢೀರ್​​ ಇಳಿಕೆಯಾದ್ದರಿಂದ ಗ್ರಾಹಕರು ನಿರಾಳವಾಗಿದ್ದಾರೆ. ಕಳೆದ ವಾರ ಒಂದು ಕೆಜಿ 100-120 ರೂ.ಗೆ ಮಾರಟವಾಟಗುತ್ತಿದ್ದ ಈರುಳ್ಳಿ ದರ ಈಗ ಕೆಜಿಗೆ 60-70 ರೂ.ಗೆ ತಲುಪಿದೆ.

ಈ ಮುನ್ನ ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಏರುತ್ತಲೇ ಇತ್ತು. ಕಳೆದ ತಿಂಗಳು 50 ರೂ.ನಿಂದ ಈರುಳ್ಳಿ ಬೆಲೆ 200 ರೂ.ಗೇರಿತ್ತು. ಈರುಳ್ಳಿ ಬೆಲೆ ಹೆಚ್ಚಾಗಿ, ಮಂಡಿಗಳಲ್ಲಿ ಸಂಗ್ರಹ ಕಡಿಮೆಯಾಗುತ್ತಿರುವುದರಿಂದ ಕೇಂದ್ರ ಸರ್ಕಾರ ತರಕಾರಿ ಮಂಡಿಗಳಲ್ಲಿ ಈರುಳ್ಳಿ ಸಂಗ್ರಹವನ್ನು ಹೆಚ್ಚಿಸಲು ಚಿಂತನೆ ನಡೆಸಿತ್ತು.

ಇದುವರೆಗೂ ಮಂಡಿಗಳಲ್ಲಿ ಸಂಗ್ರಹಿಸಿಡಲಾಗಿದ್ದ ಈರುಳ್ಳಿ ಬೆಳೆಗಳು ದೇಶಾದ್ಯಂತ ಸರಬರಾಜಾಗಿ ಮಾರಾಟವಾಗಿವೆ. ಬೇಸಿಗೆಯಲ್ಲಿ ಬೆಳೆಯಲಾದ ಈರುಳ್ಳಿಗಳು ನವೆಂಬರ್​ ನಂತರ ಮಾರುಕಟ್ಟೆ ಪ್ರವೇಶಿಸಲಿವೆ. ಈ ಬಾರಿ ಮಳೆಯೂ ಹೆಚ್ಚಾಗಿದ್ದರಿಂದ ಬಹುಪಾಲು ಈರುಳ್ಳಿ ಬೆಳೆ ಕೊಳೆತುಹೋಗಿದೆ. ನವೆಂಬರ್​ವರೆಗೆ ಬೇಕಾಗುವಷ್ಟು ಈರುಳ್ಳಿ ಸಂಗ್ರಹ ದೇಶದಲ್ಲಿರಲಿಲ್ಲ. ಹೀಗಾಗಿ, ಈರುಳ್ಳಿ ಬೆಲೆ ವಾರದಿಂದ ವಾರಕ್ಕೆ ಹೆಚ್ಚಳವಾಗಿತ್ತು. ಈರುಳ್ಳಿ ಬೆಳೆಯುವ ಪ್ರಮುಖ ರಾಜ್ಯವಾದ ಮಹಾರಾಷ್ಟ್ರವನ್ನು ಏಷ್ಯಾದ ವಿಸ್ತಾರವಾದ ಈರುಳ್ಳಿ ಮಾರುಕಟ್ಟೆಯೆಂದು ಪರಿಗಣಿಸಲಾಗಿತ್ತು. ಆದರೆ, ಈ ಬಾರಿ ಮುಂಬೈನಲ್ಲಿ ಉಂಟಾದ ಪ್ರವಾಹದಿಂದ ಈರುಳ್ಳಿ ಕೊಳೆತು ರೈತರು ಸಂಕಷ್ಟದಲ್ಲಿದ್ದಾರೆ.

ವಿವಿಧ ಏಜೆನ್ಸಿಗಳಿಂದ ಈರುಳ್ಳಿಗಳನ್ನು ಖರೀದಿಸಿ ಸಂಗ್ರಹಿಸಿಟ್ಟುಕೊಂಡು ನಂತರ ಮಾರುಕಟ್ಟೆಗೆ ಕಳುಹಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿತ್ತು. ಈರುಳ್ಳಿ ಬೆಲೆ ಹೆಚ್ಚಳವಾಗುವುದನ್ನು ನೋಡಿದರೆ ಕಳೆದ ಬಾರಿ ಆದಂತೆ ಹಣ್ಣುಗಳಿಗಿಂತ ಹೆಚ್ಚು ಬೆಲೆ ಹೆಚ್ಚಾಗಿತ್ತು.

ದಕ್ಷಿಣ ಭಾರತದ ರಾಜ್ಯಗಳಲ್ಲಿಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಈರುಳ್ಳಿ ಬೆಳೆಗಳು ಕೊಳೆತುಹೋಗಿವೆ. ಹೀಗಾಗಿ, ಬೆಳೆ ಕಡಿಮೆಯಾಗಿ ಬೆಲೆ ಏರಿಕೆಯಾಗುತ್ತಿದೆ. ಇಡೀ ದೇಶದಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಬೇರೆ ದೇಶಗಳಿಗೆ ಈರುಳ್ಳಿಯನ್ನು ರಫ್ತು ಮಾಡುವುದು ಕೂಡ ಕಷ್ಟವಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ತಮಿಳುನಾಡಿನಲ್ಲಿ ಈ ವರ್ಷ ಪ್ರವಾಹ ಉಂಟಾಗಿದ್ದರಿಂದ ಈ ರಾಜ್ಯಗಳಲ್ಲಿ ಈರುಳ್ಳಿ ಬೆಳೆ ಬಹಳ ಕಡಿಮೆಯಾಗಿದೆ. ಹೀಗಾಗಿ, ಆ ಭಾಗದಿಂದ ಬರುವ ಈರುಳ್ಳಿಗಳು ಮಾರುಕಟ್ಟೆಗೆ ಬಂದಿಲ್ಲ.

Comments are closed.