ಕರ್ನಾಟಕ

ಸಮಾಧಿ ಮೇಲೆ ಇಟ್ಟ ತಿಂಡಿಗಳನ್ನು ತಿಂದು ಮೂಢನಂಬಿಕೆಗೆ ಸೆಡ್ಡು ಹೊಡೆದ ಯುವಕರು !

Pinterest LinkedIn Tumblr

ರಾಯಬಾಗ: ಶವ ಸಂಸ್ಕಾರ ಮಾಡಿದ ನಂತರ, ಇಲ್ಲವೇ ಸ್ಮಶಾನ ಸ್ಥಳದಲ್ಲಿ ಹೋಗಿ ಬಂದರೆ ಮಡಿ ಮೈಲಿಗೆ ಎಂದು ಸ್ಥಾನ ಮಾಡುವ ದಿನಮಾನಗಳಲ್ಲಿ ಅಂತ್ಯಸಂಸ್ಕಾರ ಮಾಡಿದ ನಂತರ ಸತ್ತ ವ್ಯಕ್ತಿಯ ಆಸೆ ಪೂರೈಸಲು ಸಮಾಧಿ ಮೇಲೆ ಇಟ್ಟ ತಿಂಡಿಗಳನ್ನು ತಿಂದು ಮೂಢನಂಬಿಕೆಗೆ ಯುವಕರು ಸೆಡ್ಡು ಹೊಡೆದಿದ್ದಾರೆ.

ಇಂತದೊಂದು ಪ್ರಸಂಗ ತಾಲೂಕಿನ ಜಲಾಲಪೂರ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಅಂಬೇಡ್ಕರ್ ನಗರದ ಸೇವಂತಿ ಬಾಳೇಶ ಕುರಣೆ ಎಂಬುವರು ನಿಧನ ಹೊಂದಿದ್ದು, ಅಂದೇ ಅಂತ್ಯಸಂಸ್ಕಾರ ನಡೆಸಿದ್ದರು. ಸಂಪ್ರದಾಯದಂತೆ ಮರುದಿನ ಸತ್ತ ವ್ಯಕ್ತಿ ಇಷ್ಟಾರ್ಥ ಪೂರೈಸಲು, ವ್ಯಕ್ತಿ ಜೀವಿತಾವಧಿಯಲ್ಲಿ ಆಸೆ ಪಟ್ಟಿದ್ದ ತಿಂಡಿ ತಿನಿಸುಗಳನ್ನು ಸತ್ತ ವ್ಯಕ್ತಿ ಸಮಾಧಿ ಮೇಲೆ ಇಡುತ್ತಾರೆ. ಅದನ್ನು ಹಕ್ಕಿವೊಂದು (ಕಾಗೆ) ಮುಟ್ಟಿದರೆ ಸತ್ತ ವ್ಯಕ್ತಿಯ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಮತ್ತು ಪುನರಜನ್ಮ ಪಡೆಯುತ್ತಾನೆ ಇಲ್ಲವಾದರೆ ಭೂತ, ಪ್ರೇತವಾಗಿ ಕಾಡುತ್ತಾನೆ ಎಂಬ ಮೂಢನಂಬಿಕೆ ಎಲ್ಲರಲ್ಲೂ ಮನೆ ಮಾಡಿದೆ. ಮತ್ತು ಇದು ಇಂದಿಗೂ ಕೂಡ ಎಲ್ಲೆಡೆ ನಡೆದುಕೊಂಡು ಬಂದಿದೆ.

ಆದರೆ ಇದನ್ನು ಮಟ್ಟಿನಿಂತು ಜನರಲ್ಲಿ ಜಾಗೃತಿ ಉಂಟು ಮಾಡಲು ಜಲಾಲಪೂರ ಗ್ರಾಮದ ಅಂಬೇಡ್ಕರ್ ನಗರದ ದಲಿತ ಸಂಘರ್ಷ ಸಮಿತಿ ಭೀಮವಾದದ ಯುವಕರು ಶುಕ್ರವಾರದಂದು ಸೇವಂತಿ ಕುರಣೆ ಅವರ ಸಮಾಧಿ ಮೇಲೆ ಇಟ್ಟಿದ್ದ ತಿಂಡಿ ತಿನುಸುಗಳನ್ನು ತಿಂದು (ಸೇವನೆ ಮಾಡಿ) ಮೂಢನಂಬಿಕೆ, ಕಂದಾಚಾರಕ್ಕೆ ಸೆಡ್ಡು ಹೊಡೆದ್ದಾರೆ. ಇಂದು ಸಮಾಧಿ ಮಾಡಿದ ಸ್ಥಳಕ್ಕೆ ಹೋಗಿ, ಇಟ್ಟಿದ್ದ ಪದಾರ್ಥಗಳಲ್ಲಿ ತಮಗೆ ಬೇಕಾದದ್ದನ್ನು ತೆಗೆದುಕೊಂಡು ತಿಂದು, ಹೊಟ್ಟೆ ತುಂಬಿಸಿಕೊಂಡಿದ್ದಾರೆ. ತಮಗೆ ಏನೂ ಆಗುತ್ತದೆ ಎಂದು ನೋಡಿಯೇ ಬಿಡುವುದಾಗಿ ಮೂಢನಂಬಿಕೆಗೆ ಸವಾಲು ಎಸೆದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ದಲಿತ ಯುವಕರಾದ ರಾಜು ಕಾಂಬಳೆ, ಪರಶುರಾಮ ಕಾಂಬಳೆ, ರಾಮಚಂದ್ರ ಕುರಣೆ, ಅಜೀತ ಕಾಂಬಳೆ, ಸುನೀಲ ಕಾಂಬಳೆ, ಶ್ರೀನಾಥ ಕಾಡಾಪುರೆ, ರಾಮು ಕಾಂಬಳೆ, ಸಚೀನ ಕಾಂಬಳೆ, ಸಂತೋಷ ಕಾಂಬಳೆ, ಶಂಕರ ಕಾಂಬಳೆ ಮುಂದಾಗಿದ್ದಾರೆ.

Comments are closed.