ಕರ್ನಾಟಕ

ಸೌದಿಯಲ್ಲಿ ಬಂಧಿಸಲ್ಪಟ್ಟ ಹರೀಶ್ ಬಂಗೇರಾ: ಜೈಲಿನಿಂದ ಬಿಡಿಸಲು ಅಧಿಕಾರಿ ವರ್ಗ ಹರಸಾಹಸ

Pinterest LinkedIn Tumblr


ಬೆಂಗಳೂರು: ಫೇಸ್‌ಬುಕ್‌ನಲ್ಲಿ ಸೌದಿ ಅರೇಬಿಯಾ ದೊರೆ ವಿರುದ್ಧ ಫೋಸ್ಟ್‌ ಮಾಡಿದ ಅರೋಪದಲ್ಲಿ ಬಂಧಿತನಾಗಿರುವ ಕೋಟೇಶ್ವರದ ಗೋಪಾಡಿ ಗ್ರಾಮದ ಹರೀಶ್‌ ಬಂಗೇರ ಎಸ್‌. ಅವರ ವಿಷಯದ ಬಗ್ಗೆ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕ್ಯಾ. ಮಣಿವಣ್ಣನ್‌, ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಪ್ರಕರಣದ ಮಾಹಿತಿ ಪಡೆದುಕೊಂಡಿದ್ದಾರೆ.

ಭಾರತೀಯ ದೂತವಾಸದ ಅಧಿಕಾರಿಗಳೊಂದಿಗೆ ಮಾತನಾಡಿದ ಕಾರ್ಯದರ್ಶಿ, ಹರೀಶ್‌ ಬಂಗೇರ ಅವರ ಬಿಡುಗಡೆಗೆ ಅಗತ್ಯ ಕ್ರಮ ವಹಿಸುವಂತೆ ಕೋರಿದರು. ಪ್ರಕರಣವು ಕಾನೂನು ಮೂಲಕ ಇತ್ಯರ್ಥವಾಗಬೇಕಿದ್ದು, ಸ್ವಲ್ಪ ವಿಳಂಬವಾಗಲಿದೆ. ಬಂಧನದಲ್ಲಿರುವ ಅವರು ಕ್ಷೇಮವಾಗಿದ್ದಾರೆ ಎಂದು ದೂತಾವಾಸದ ಅಧಿಕಾರಿಗಳು ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರು.

ಹರೀಶ್‌ ಬಂಗೇರ ಅವರ ಪತ್ನಿ ಸುಮನಾ ಎಂ. ಅವರನ್ನು ದೂರವಾಣಿ ಮೂಲಕ ಮಂಗಳವಾರ ಸಂಪರ್ಕಿಸಿದ ಕಾರ್ಯದರ್ಶಿಗಳು, ಪ್ರಕರಣದ ಪ್ರಗತಿ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಸರಕಾರ ನಿಮ್ಮ ಪರವಾಗಿ ನಿಂತಿದ್ದು, ಶೀಘ್ರವೇ ನಿಮ್ಮ ಪತಿಯ ಬಿಡುಗಡೆಗೆ ಪ್ರಯತ್ನಿಸಲಾಗುವುದೆಂದು ಧೈರ್ಯ ತುಂಬಿದರು.

ಉಡುಪಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳು ಗೋಪಾಡಿ ಗ್ರಾಮದ ಹರೀಶ್‌ ಬಂಗೇರ ಮನೆಗೆ ಭೇಟಿ ನೀಡಿ ಸುಮನಾ ಬಂಗೇರ ಅವರಿಗೆ ಸಾಂತ್ವನ ಹೇಳಿದರು. ಹರೀಶ್‌ ಬಂಗೇರ ಅವರ ಬಿಡುಗಡೆ ಕುರಿತಂತೆ ಇಲಾಖೆ ವತಿಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.

ಈ ಬಗ್ಗೆ ಕುಟುಂಬದವರು ಉಡುಪಿ ಪೊಲೀಸರಿಗೆ ಅರ್ಜಿ ನೀಡಿದ್ದು, ಜಿಲ್ಲೆಯ ಮಾನವ ಹಕ್ಕು ಆಯೋಗದ ಗಮನಕ್ಕೂ ತರಲಾಗಿದೆ ಎಂದು ಹರೀಶ್‌ ಬಂಗೇರ ಅವರ ಮಾವ ಶ್ರೀನಿವಾಸ್‌ ಬಂಗೇರ ತಿಳಿಸಿದರು.

Comments are closed.