ಕರ್ನಾಟಕ

ಕಳುವಾಗಿದ್ದ 8 ಕೋಟಿ ರೂ. ಮೌಲ್ಯದ ಶ್ವಾನ ಪತ್ತೆ

Pinterest LinkedIn Tumblr


ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕಳುವಾಗಿದ್ದ 8 ಕೋಟಿ ಮೌಲ್ಯದ ಶ್ವಾನ ಕೊನೆಗೂ ಪತ್ತೆಯಾಗಿದೆ. ಪರಿಚಯಸ್ಥನಿಂದಲೇ ಅಲಸ್ಕನ್‌ ಮ್ಯಾಲ್‌ ಮೂಟ್‌ ತಳಿಯ ನಾಯಿ ಕಿಡ್ನಾಪ್‌ ಆಗಿತ್ತು ಎಂದು ತಿಳಿದುಬಂದಿದೆ.

ಬೆಂಗಳೂರಿನ ಶ್ರೀನಗರದಲ್ಲಿ ನಾಪತ್ತೆಯಾಗಿದ್ದ ಶ್ವಾನವನ್ನು ಆಟೋಚಾಲಕನೇ ಕದ್ದೊಯ್ದು ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಶ್ವಾನದ ಮಾಲೀಕನಿಗೆ ಪರಿಚಿತನಾಗಿದ್ದವರೇ ತೆಗೆದುಕೊಂಡು ಹೋಗಿ ಪುನ: ಮನೆಗೆ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಶ್ರೀನಗರದ ನಿವಾಸಿ ಚೇತನ್‌ ಎನ್ನುವವರಿಗೆ ಸೇರಿದ 8 ಕೋಟಿ ರೂ. ಮೌಲ್ಯದ ಅಲಸ್ಕನ್‌ ಮ್ಯಾಲ್‌ ಮೂಟ್‌ ತಳಿಯ ನಾಯಿ ಕಳವಾಗಿದ್ದು, ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಕೊಡುವುದಾಗಿ ನಾಯಿಯ ಮಾಲೀಕರು ಘೋಷಿಸಿದ್ದರು. ಅಲ್ಲದೆ, ಶ್ವಾನ ನಾಪತ್ತೆಯಾಗಿದ್ದ ಹಿನ್ನೆಲೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಮನೆ ಮುಂದೆ ಕಟ್ಟಿ ಹಾಕಲಾಗಿದ್ದ ನಾಯಿ ಕಳವು ಆಗಿದೆ ಎಂದು ಶ್ವಾನದ ಮಾಲೀಕರು ಹನುಮಂತನಗರ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಹನುಮಂತನಗರ ಠಾಣೆ ಪೊಲೀಸರು ಗಂಭೀರ ಸ್ವರೂಪವಲ್ಲದ ಪ್ರಕರಣ(ಎನ್‌ಸಿಆರ್‌) ದಾಖಲಿಸಿಕೊಂಡಿದ್ದರು.

ಅಲಸ್ಕನ್‌ ಮ್ಯಾಲ್‌ ಮೂಟ್‌ ತಳಿಯ ನಾಯಿಯನ್ನು ಒಂದು ವರ್ಷ ಇದ್ದಾಗ ಚೀನಾದಿಂದ ಎಂಟು ಕೋಟಿ ರೂ. ಕೊಟ್ಟು ಎರಡು ವರ್ಷಗಳ ಹಿಂದೆ ಖರೀದಿಸಲಾಗಿತ್ತು. ಶ್ರೀನಗರ ನಿವಾಸಿ ಚೇತನ್‌ ಎಂಬುವವರಿಗೆ ಕೆಲ ಷರತ್ತಿನ ಮೇಲೆ ನಾಯಿ ನೀಡಿದ್ದೆ. ಚೇತನ್‌ ನಾಯಿ ಸಾಕುತ್ತಿದ್ದು, ನಾಯಿ ಮರಿ ಹಾಕಿದಾಗ ಒಂದು ಮರಿ ಚೇತನ್‌ ಇಟ್ಟುಕೊಂಡರೆ, ಉಳಿದ ನಾಯಿ ಮರಿಗಳನ್ನು ನನಗೆ ನೀಡಬೇಕು ಎನ್ನುವ ಒಪ್ಪಂದದ ಮೇಲೆ ನಾಯಿ ನೀಡಲಾಗಿತ್ತು. ಡಿ.12ರಂದು ನಾಯಿ ಚೇತನ್‌ ಅವರ ಮನೆಯಿಂದ ಕಳವು ಆಗಿದೆ. ಈ ಸಂಬಂಧ ದೂರು ನೀಡಲಾಗಿದೆ ಎಂದು ತಿಳಿಸಿದ್ದರು.

Comments are closed.