ಕರ್ನಾಟಕ

ಸತ್ತವರು ಹಿಂಸಾಚಾರಿಗಳಲ್ಲ, ಅಮಾಯಕರು, ನನ್ನನ್ನೂ ಬಂಧಿಸಲಿ: ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಗೋಲಿಬಾರ್ ನಲ್ಲಿ ಸತ್ತವರು ಹಿಂಸಾಚಾರಿಗಳಲ್ಲ, ಅವರು ಅಮಾಯಕರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ನಿನ್ನೆ ನನ್ನನ್ನು ಮಂಗಳೂರು ಪ್ರವೇಶಿಸಲು ಅವಕಾಶ ನೀಡಲಿಲ್ಲ. ನಾನು ವಿರೋಧ ಪಕ್ಷದ ನಾಯಕ. ನಾನು ಶಾಂತಿ ಕದಡಲು ಹೋಗಿರಲಿಲ್ಲ. ಆದರೆ ಶಾಂತಿ ಕಾಪಾಡುವಂತೆ ಮನವಿ ಮಾಡಲು ಹೋಗಿದ್ದೆ ಎಂದರು.

ಡಿಸೆಂಬರ್ 23 ಸೋಮವಾರದಂದು ನಾನು ಮಂಗಳೂರಿಗೆ ಭೇಟಿ ನೀಡುತ್ತೇನೆ. ಬೇಕಾದರೆ ನನ್ನನ್ನೂ ಬಂಧಿಸಲಿ ಎಂದು ಸಿದ್ದರಾಮಯ್ಯ ಸವಾಲೆಸೆದರು.

Comments are closed.