ಕರ್ನಾಟಕ

ನವ ದಂಪತಿಯಿಂದ ಹಾಳಾದ ರಸ್ತೆ ಮೇಲೆ ಫೋಟೋ ಶೂಟ್

Pinterest LinkedIn Tumblr


ಮಸ್ಕಿ: ಮದುವೆಯಾದ ನವ ಜೋಡಿಗಳು ಸುಂದರ ತಾಣಗಳಲ್ಲಿ ಫೋಟೋ ಶೂಟ್​ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಈ ಜೋಡಿ ತಮ್ಮ ಗ್ರಾಮದಲ್ಲಿ ಹಾಳಾದ ರಸ್ತೆ ಮತ್ತು ಸ್ವಚ್ಛಗೊಳ್ಳದ ಚರಂಡಿ ಬಳಿ ನಿಂತು ಫೋಟೋ ಶೂಟ್ ಮಾಡಿಸಿದೆ.

ಹಂಚಿನಾಳ ಗ್ರಾಮದ ಶಶಿ ಹಿರೇಮಠ ಹಾಗೂ ವಿಜಯಲಕ್ಷ್ಮೀ ಕೊಳಚೆ ಹಾಳಾದ ರಸ್ತೆ ಮೇಲೆ ನಿಂತು ಫೋಟೊಶೂಟ್ ಮಾಡಿಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಫೋಟೋ ಶೂಟ್ ಮೂಲಕ ಸ್ಥಳೀಯ ಆಡಳಿತಕ್ಕೆ ಬಿಸಿಮುಟ್ಟಿಸಿರುವ ಈ ಜೋಡಿ, ಈಗಲಾದರೂ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಉತ್ತಮಗೊಳ್ಳಲಿದೆ ಎಂಬ ನಿರೀಕ್ಷೆಯಲ್ಲಿದೆ. ಹಾಗೆಯೇ ಇವರು ತೆಗೆಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಊರಿನ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಸಾಕಷ್ಟು ಬಾರಿ ತಿಳಿಸಿದ್ದರೂ ಪ್ರಯೋಜನವಾಗಿಲ್ಲ.

Comments are closed.