
ಬೆಂಗಳೂರು: ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿ ಜನರು ಸಂಕಷ್ಟ ಅನುಭವಿಸಿದ್ದು ಗೊತ್ತೇ ಇದೆ. ಉಳ್ಳಾಗಡ್ಡಿ ಬೆಲೆ ದ್ವಿಶತಕ ಸಮೀಪಿಸುತ್ತಿದ್ದಂತೆ ದೇಶದಾದ್ಯಂತ ಹೋಟೆಲ್ ಉದ್ಯಮಿಗಳಿಗೆ ದೊಡ್ಡ ಹೊಡೆತವನ್ನೇ ನೀಡಿತ್ತು. ಸದ್ಯ ಈರುಳ್ಳಿ ಬೆಲೆ ಸ್ವಲ್ಪ ಕಡಿಮೆಯಾಗಿದ್ದು, ಉಪಹಾರಗೃಹ ಉದ್ಯಮಿಗಳು ನಿಟ್ಟುಸಿರು ಬಿಡುವಂತೆ ಮಾಡಿದೆ.
ನಗರದಲ್ಲಿ ಸುಮಾರು 150ಕ್ಕಿಂತ 160 ರೂಪಾಯಿಯಿದ್ದ ಈರುಳ್ಳಿ ದರ ಸದ್ಯ 80ರಿಂದ 90 ರೂಪಾಯಿ ತಲುಪಿದೆ. ದುಬಾರಿ ಬೆಲೆಯಿದ್ದ ಈರುಳ್ಳಿಯನ್ನು ಬಳಸಲು ಹಿಂದೆ ಮುಂದೆ ನೋಡುತ್ತಿದ್ದ ಹೋಟೆಲಿಗರು ಈಗ ಮತ್ತೆ ಈರುಳ್ಳಿಯತ್ತ ಗಮನ ಹರಿಸಿದ್ದಾರೆ.
ಈರುಳ್ಳಿ ಬೆಲೆ ಗಗನಕ್ಕೇರಿದ ಕಾರಣ ಕೇಂದ್ರ ಸರಕಾರ ಸುಮಾರು 12660 ಮೆಟ್ರಿಕ್ ಟನ್ ಈರುಳ್ಳಿ ಆಮದು ಮಾಡಲು ಇಚ್ಛಿಸಿದ್ದು, ಬೆಲೆ ಮತ್ತಷ್ಟು ಇಳಿಯುವ ನಿರೀಕ್ಷೆಯಿದೆ.
Comments are closed.