ಕರ್ನಾಟಕ

ಹೈಕಮಾಂಡ್​ ಒಪ್ಪಿದರೆ ಮತ್ತೆ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ; ಜಿ ಪರಮೇಶ್ವರ್​​

Pinterest LinkedIn Tumblr


ತುಮಕೂರು (ನ.29): ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಈ ಉಪಚುನಾವಣೆ ಸಾಕ್ಷಿಯಾಗಿದೆ. ದಶಕಗಟ್ಟಲೆ ಎದುರಾಳಿಗಳಾಗಿದ್ದ ಅಭ್ಯರ್ಥಿಗಳ ಪರ ಬಿಜೆಪಿನಾಯಕರು ಚುನಾವಣಾ ಪ್ರಚಾರಕ್ಕೆ ಮುಂದಾಗಿದ್ದಾರೆ. ಇದೇ ರೀತಿ ಅಚ್ಚರಿಯ ಘಟನೆ ಉಪಚುನಾವಣೆ ಫಲಿತಾಂಶದ ಬಳಿಕವೂ ನಡೆಯಲಿದೆ ಎಂಬ ಸುಳಿವನ್ನು ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್​ ಬಿಟ್ಟುಕೊಟ್ಟಿದ್ದಾರೆ.

ಉಪಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುವಲ್ಲಿ ಸೋತು ವಿಶ್ವಾಸ ಮತ ಸಾಬೀತು ಪಡಿಸುವಲ್ಲಿ ವಿಫಲವಾದರೆ, ಮತ್ತೆ ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಸರ್ಕಾರ ರಚಿಸುವ ಸಾಧ್ಯತೆ ಇದೆ, ಇದಕ್ಕೆ ಹೈ ಕಮಾಂಡ್​ ಸೂಚಿಸಬೇಕು ಅಷ್ಟೇ ಎಂದು ಅವರು ತಿಳಿಸಿದ್ದಾರೆ,

ಬಿಜೆಪಿ ಸರ್ಕಾರ ಬಹುಮತ ಕಳೆದುಕೊಂಡರೆ, ಹೈಕಮಾಂಡ್​ ತೀರ್ಮಾನಿಸಿದರೆ ಮತ್ತೆ ಕಾಂಗ್ರೆಸ್​-ಜೆಡಿಎಸ್​ ಸರ್ಕಾರ ರಚಿಸಬಹುದು. ಇಲ್ಲವಾದರೆ ರಾಷ್ಟ್ರಪತಿ ಆಡಳಿತ ಬರಬಹುದು. ರಾಜಕೀಯದಲ್ಲಿ ಏನಾಗುತ್ತೆ ಹೇಳಕ್ಕಾಗಲ್ಲ. ಮಧ್ಯಂತರ ಚುನಾವಣೆ ತತಕ್ಷಣ ಬರೋದಿಲ್ಲ. ಆದರೂ ನಾವು ತಯಾರಿ ಮಾಡಿಕೊಳ್ಳುತಿದ್ದೇವೆ ಎಂದರು.

ಮೈತ್ರಿ ಸರ್ಕಾರ ಮುರಿದು ಬಿದ್ದ ಬಳಿಕ ಕಾಂಗ್ರೆಸ್​-ಜೆಡಿಎಸ್​ ನಾಯಕರು ಪರಸ್ಪರ ಕೆಸರೆರಚಾಟ ನಡೆಸಿದ್ದರು. ಕುಮಾರಸ್ವಾಮಿ ಅವರಂತೂ ಹೋದ ಬಂದಲೆಲ್ಲಾ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಬಿಜೆಪಿ ಸರ್ಕಾರ ಬೀಳಿಸಲು ಕೂಡ ಬಿಡುವುದಿಲ್ಲ ಎಂದಿದ್ದ ಕುಮಾರಸ್ವಾಮಿ ಬಳಿಕ ಉಲ್ಟಾ ಹೊಡೆದರು.

ಈ ಹಿಂದೆ ಪರಮೇಶ್ವರ್​ ಕೂಡ ಜೆಡಿಎಸ್​ನವರನ್ನು ಕೋತಿಗಳಿಗೆ ಹೋಲಿಕೆ ಮಾಡಿದ್ದರು. ಇದಾದ ಬಳಿಕವೂ ಮೈತ್ರಿ ಮುಂದುವರೆಸುತ್ತೀರಾ ಎಂಬ ಮಾತಿಗೆ ಉತ್ತರಿಸಿದ ಅವರು, ಜೆಡಿಎಸ್​ನವರನ್ನು ಕೋತಿಗಳ ಥರ ಎಂದಿದ್ದೆ ನಿಜ. ಕೋತಿಗಳ ಥರ ಎಂದಾಕ್ಷಣ ಕೋತಿಗಳಾಗ್ತಾರಾ? ರಾಜಕೀಯದಲ್ಲಿ ಅಸಾಧ್ಯ ಯಾವುದು ಇಲ್ಲ ಎಂದರು.

ಉಪಚನಾವಣೆಯಲ್ಲಿ ಅನರ್ಹ ಶಾಸಕರು ಯಾರು ಗೆಲ್ಲಲ್ಲ. ಜನ ಮತ್ತೆ ಅವರನ್ನ ಗೆಲ್ಲಿಸಲ್ಲ. ಪಕ್ಷಾಂತರ ಮಾಡಿದವರನ್ನ ಜನ ಗೆಲ್ಲಿಸಲ್ಲಅರ್ನರ್ಹ ಶಾಸಕರು ಸೋಲುತ್ತಾರೆ ಎಂಬುದು ನಮ್ಮ ವಿಶ್ಲೇಷಣೆ. ಹಾಗಾಗಿ ಉಪ ಚುನಾವಣೆ ಕರ್ನಾಟಕದ ರಾಜಕೀಯದಲ್ಲಿ ಬಹಳ ಮುಖ್ಯವಾಗಿದೆ. ಪಕ್ಷಾಂತರ ಮಾಡಿದವರಿಗೆ ಜನರು ತಕ್ಕ ಸಂದೇಶ ರವಾನಿಸಲಿದ್ದಾರೆ ಎಂದು ಎಚ್ಚರಿಸಿದರು.

Comments are closed.